ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಬಿಎಸ್‌ಗೆ ತಯಾರಿ ಹೇಗೆ?

Published : 9 ಸೆಪ್ಟೆಂಬರ್ 2024, 0:20 IST
Last Updated : 9 ಸೆಪ್ಟೆಂಬರ್ 2024, 0:20 IST
ಫಾಲೋ ಮಾಡಿ
Comments

ನಾನೀಗ ದ್ವಿತೀಯ ಪಿಯುಸಿ ಮಾಡುತ್ತಿದ್ದು, ಎಂಬಿಬಿಎಸ್ ಮಾಡುವ ಆಸೆ ಇದೆ. ಆದರೆ, ಅಷ್ಟೊಂದು ಹಣ ಕೊಟ್ಟು ಓದುವ ಶಕ್ತಿಯಿಲ್ಲ. ಹಾಗಾಗಿ, ಏನು ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ಎಂಬಿಬಿಎಸ್ ಪ್ರವೇಶಕ್ಕೆ ಆಯೋಜಿಸುವ ನೀಟ್, ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆ. ಆದ್ದರಿಂದ, ನೀಟ್ ಪರೀಕ್ಷೆಯ ಮೂಲಕ ಸರ್ಕಾರಿ ಸೀಟ್ ಪಡೆಯುವುದೇ ನಿಮ್ಮ ಮೊದಲ ಗುರಿಯಾಗಿರಲಿ. ಕಳೆದ ವರ್ಷಗಳ ಮತ್ತು ಈ ವರ್ಷದ ಕಟ್ ಆಫ್ ಮಾಹಿತಿಯನ್ನು ಮಾಹಿತಿಯನ್ನು ಆಧರಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರಚಿಸಿ, ಏಕಾಗ್ರತೆ ಮತ್ತು ಪರಿಶ್ರಮದಿಂದ ಅನುಷ್ಠಾನಗೊಳಿಸಿ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಷಿಪ್ ಸೌಲಭ್ಯಗಳಿವೆ. ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣವನ್ನು ಗಮನಿಸಿ: https://scholarships.gov.in/

ಇದಲ್ಲದೆ, ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷ್ಮಿ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಗಮನಿಸಿ: https://www.vidyalakshmi.co.in/Students/

ಪ್ರ

ಬಿ.ಎಸ್ಸಿ (ತೋಟಗಾರಿಕೆ) ನಂತರ ವೃತ್ತಿಯ ಅವಕಾಶಗಳೇನು?

ಬಿ.ಎಸ್ಸಿ (ತೋಟಗಾರಿಕೆ) ಕೋರ್ಸಿನಲ್ಲಿ ಅನೇಕ ಉಪಯುಕ್ತ ಮತ್ತು ಕುತೂಹಲಕಾರಿ ವಿಷಯಗಳನ್ನು ಕಲಿಸಲಾಗುತ್ತದೆ. ಉದಾಹರಣೆಗೆ, ತೋಟಗಾರಿಕೆ, ಹೂವು, ಹಣ್ಣು ಮತ್ತು ತರಕಾರಿ ವಿಜ್ಞಾನ, ಪ್ಲಾಂಟೇಷನ್ ಬೆಳೆಗಳು, ತಳಿಶಾಸ್ತ್ರ, ಜೇನು ಕೃಷಿ, ಸಾವಯವ ಕೃಷಿ, ಸಸ್ಯ ರೋಗಶಾಸ್ತ್ರ, ತೋಟಗಾರಿಕಾ ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳಿರುತ್ತದೆ. ಆಸಕ್ತಿಯಿರುವ ವಿಷಯದಲ್ಲಿ, ಹೆಚ್ಚಿನ ತಜ್ಞತೆಗಾಗಿ ಎಂ.ಎಸ್ಸಿ/ಪಿ.ಎಚ್‌ಡಿ ಮಾಡಬಹುದು. ಬಿ.ಎಸ್ಸಿ (ತೋಟಗಾರಿಕೆ) ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವೃತ್ತಿಯನ್ನು ಅರಸಬಹುದು. ಉದಾಹರಣೆಗೆ, ತೋಟಗಾರಿಕೆ ಅಸಿಸ್ಟೆಂಟ್, ಫಸ್ಟ್‌ ಕ್ಲಾಸ್ ಅಸಿಸ್ಟೆಂಟ್, ಸಹಾಯಕ ತೋಟಗಾರಿಕೆ ಅಧಿಕಾರಿ, ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ ಸೇರಿ ಹಲವಾರು ಸರ್ಕಾರಿ ಹುದ್ದೆಗಳನ್ನು ಪಡೆಯಬಹುದು. ಖಾಸಗಿ ವಲಯದಲ್ಲಿ ನರ್ಸರಿ ಮ್ಯಾನೇಜರ್, ತೋಟಗಾರಿಕಾ ತಜ್ಞ, ತೋಟಗಾರಿಕಾ ವ್ಯವಸ್ಥಾಪಕ, ಲ್ಯಾಂಡ್‌ಸ್ಕೇಪ್ ಡಿಸೈನರ್, ಫಾರ್ಮ್ ಮ್ಯಾನೇಜರ್ ಮುಂತಾದ ವೃತ್ತಿಗಳನ್ನು ಅರಸಬಹುದು. ಇದಲ್ಲದೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವಯಂ-ಉದ್ಯೋಗವನ್ನೂ ಮಾಡಬಹುದು.

ಮುಖ್ಯವಾಗಿ, ಈ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಅಭಿರುಚಿಯಿದ್ದರೆ, ವೃತ್ತಿಯೋಜನೆಯನ್ನು ಮಾಡಿ ಮುಂದುವರಿಯುವುದು ಸೂಕ್ತ. ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

ಬಿ.ಎಸ್ಸಿ (ತೋಟಗಾರಿಕೆ) ಕೋರ್ಸಿನಲ್ಲಿ ಅನೇಕ ಉಪಯುಕ್ತ ಮತ್ತು ಕುತೂಹಲಕಾರಿ ವಿಷಯಗಳನ್ನು ಕಲಿಸಲಾಗುತ್ತದೆ. ಉದಾಹರಣೆಗೆ, ತೋಟಗಾರಿಕೆ, ಹೂವು, ಹಣ್ಣು ಮತ್ತು ತರಕಾರಿ ವಿಜ್ಞಾನ, ಪ್ಲಾಂಟೇಷನ್ ಬೆಳೆಗಳು, ತಳಿಶಾಸ್ತ್ರ, ಜೇನು ಕೃಷಿ, ಸಾವಯವ ಕೃಷಿ, ಸಸ್ಯ ರೋಗಶಾಸ್ತ್ರ, ತೋಟಗಾರಿಕಾ ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳಿರುತ್ತದೆ. ಆಸಕ್ತಿಯಿರುವ ವಿಷಯದಲ್ಲಿ, ಹೆಚ್ಚಿನ ತಜ್ಞತೆಗಾಗಿ ಎಂ.ಎಸ್ಸಿ/ಪಿ.ಎಚ್‌ಡಿ ಮಾಡಬಹುದು. ಬಿ.ಎಸ್ಸಿ (ತೋಟಗಾರಿಕೆ) ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವೃತ್ತಿಯನ್ನು ಅರಸಬಹುದು. ಉದಾಹರಣೆಗೆ, ತೋಟಗಾರಿಕೆ ಅಸಿಸ್ಟೆಂಟ್, ಫಸ್ಟ್‌ ಕ್ಲಾಸ್ ಅಸಿಸ್ಟೆಂಟ್, ಸಹಾಯಕ ತೋಟಗಾರಿಕೆ ಅಧಿಕಾರಿ, ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ ಸೇರಿ ಹಲವಾರು ಸರ್ಕಾರಿ ಹುದ್ದೆಗಳನ್ನು ಪಡೆಯಬಹುದು. ಖಾಸಗಿ ವಲಯದಲ್ಲಿ ನರ್ಸರಿ ಮ್ಯಾನೇಜರ್, ತೋಟಗಾರಿಕಾ ತಜ್ಞ, ತೋಟಗಾರಿಕಾ ವ್ಯವಸ್ಥಾಪಕ, ಲ್ಯಾಂಡ್‌ಸ್ಕೇಪ್ ಡಿಸೈನರ್, ಫಾರ್ಮ್ ಮ್ಯಾನೇಜರ್ ಮುಂತಾದ ವೃತ್ತಿಗಳನ್ನು ಅರಸಬಹುದು. ಇದಲ್ಲದೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವಯಂ-ಉದ್ಯೋಗವನ್ನೂ ಮಾಡಬಹುದು.

ಮುಖ್ಯವಾಗಿ, ಈ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಅಭಿರುಚಿಯಿದ್ದರೆ, ವೃತ್ತಿಯೋಜನೆಯನ್ನು ಮಾಡಿ ಮುಂದುವರಿಯುವುದು ಸೂಕ್ತ. ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=AwlDno1YduQ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT