ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್‌ಇ: ರಾಜ್ಯದ 15ಕ್ಕೂ ವಿದ್ಯಾರ್ಥಿಗಳಿಗೆ ಮೊದಲ 3 ಸ್ಥಾನ

Last Updated 25 ಜುಲೈ 2022, 2:44 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಎಸ್‌ಇ 12ನೇ ತರಗತಿಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ರಾಜ್ಯದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯಮಟ್ಟದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದೇಶದಾದ್ಯಂತ 154 ವಿದ್ಯಾರ್ಥಿಗಳು ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಸೇಂಟ್‌ ಜೋಸೆಫ್ಸ್‌ ಗಂಡು ಮಕ್ಕಳ ಪ್ರೌಢಶಾಲೆಯ ಸನಾ ಜೋಸ್, ಕ್ರೈಸ್ಟ್ ಅಕಾಡೆಮಿ ಐಸಿಎಸ್‌ಇ ಶಾಲೆಯ ನಿವೇದಿತ್‌ ಎಸ್. ವಾರಿಯರ್‌, ಸೇಂಟ್‌ ಫ್ರಾನ್ಸಿಸ್‌ ಡಿ ಸಾಲೆಸ್ ಪಬ್ಲಿಕ್‌ ಶಾಲೆಯ ಸ್ನೇಹಾ ಎನ್‌. ಶಾಸ್ತ್ರಿ ಈ ವಿದ್ಯಾರ್ಥಿಗಳಲ್ಲಿ ಸೇರಿದ್ದಾರೆ. ಈ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ (ಶೇ 99.50) ಪಡೆದಿದ್ದಾರೆ.

ಎಂಟು ವಿದ್ಯಾರ್ಥಿಗಳು, ದಿ. ಫ್ರಾಂಕ್‌ ಆಂಥೋನಿ ಪಬ್ಲಿಕ್‌ ಶಾಲೆಯ ಆದಿತ್ಯ ಚಾಂದ್ನಾ, ಸೋಫಿಯಾ ಪ್ರೌಢ ಶಾಲೆಯ ಕೃತಿಕಾ ಕಣ್ಣನ್, ಸೇಂಟ್‌ ಜೋಸೆಫ್ಸ್‌ ಗಂಡು ಮಕ್ಕಳ ಪ್ರೌಢ ಶಾಲೆಯ ಸಯ್ಯದ್‌ ವಹಾಜ್‌ ಹಸ್ಸನ್, ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ ಜೈವೀರ್‌ ಸಂದೀಪ್‌, ವೇದಾ ಮೆನನ್‌ ಮತ್ತು ನಿಶಾಂತ್‌, ಹೆಬ್ಬಾಳ ವಿದ್ಯಾನಿಕೇತನ ಶಾಲೆಯ ಕೆ.ಸಿ. ಸುರಭಿ, ಯಲಹಂಕ ವಿದ್ಯಾಶಿಲ್ಪಾ ಅಕಾಡೆಮಿಯ ಹಿತಾ ಚಿಟ್ಲೂರು ಶೇ 99.25 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾಶಿಲ್ಪಾ ಅಕಾಡೆಮಿಯ ಮೃಥಿಕಾ ಭಾಸ್ಕರ್‌, ಕ್ರೈಸ್ಟ್ ಅಕಾಡೆಮಿ ಐಸಿಎಸ್‌ಇ ಶಾಲೆಯ ನವ್ಯಾ ಟಿ. ಜಿ ಮತ್ತು ಬೆಥನಿ ಪ್ರೌಢ ಶಾಲೆಯ ಮಾನಸ್‌ ನೀಲೇಶ್‌ ಎಂಬವರು ಶೇ 99ರಷ್ಟು ಅಂಕ ಗಳಿಸಿ ಮೂರನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT