ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ ಮೆಂಟ್‌ ಸ್ಕೀಮ್ 2023

Published 25 ಜೂನ್ 2023, 23:45 IST
Last Updated 25 ಜೂನ್ 2023, 23:45 IST
ಅಕ್ಷರ ಗಾತ್ರ

ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ ಮೆಂಟ್‌ ಅಥಾರಿಟಿ ಸ್ಕೀಮ್ 2023

* ವಿವರ: ವಿಪತ್ತು ನಿರ್ವಹಣೆ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರೂಪಿಸಿರುವ ಯೋಜನೆ ನ್ಯಾಷನಲ್ ಡಿಸಾಸ್ಟರ್ ‍ಮ್ಯಾನೇಜ್ಮೆಂಟ್ ಅಥಾರಿಟಿ ಸ್ಕೀಮ್ 2023.

* ಅರ್ಹತೆ: ವಿಪತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಡೆವಲಪ್ಮೆಂಟ್ ಸ್ಟಡೀಸ್/ ಎಕನಾಮಿಕ್ಸ್/ ಹ್ಯುಮಾನಿಟೀಸ್/ ಸೈನ್ಸಸ್/ ಮ್ಯಾನೇಜ್ಮೆಂಟ್/ ಎಂಜಿನಿಯರಿಂಗ್/ ಹೆಲ್ತ್ ಸ್ಟಡೀಸ್ ಮುಂತಾದ  ತತ್ಸಮಾನ  ಸ್ನಾತಕೋತ್ತರ ಪದವಿಗೆ ದಾಖಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸಂಬಂಧಪಟ್ಟ ವಿಷಯದಲ್ಲಿ ಇತ್ತೀಚೆಗೆ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. (ಗಮನಿಸಿ: ವಿದ್ಯಾರ್ಥಿಯು ವಿಭಿನ್ನ ಶೈಕ್ಷಣಿಕ ವಿಷಯ ಆಯ್ಕೆ ಮಾಡಿಕೊಂಡಿದ್ದರೂ, ಆ ನಿರ್ದಿಷ್ಟ ಪದವಿ ವಿಪತ್ತು ನಿರ್ವಹಣೆಯೊಂದಿಗೆ ಸ್ಪಷ್ಟವಾದ ಸಂಪರ್ಕ ಹೊಂದಿರಬೇಕು).

* ಆರ್ಥಿಕ ಸಹಾಯ: ₹ 12 ಸಾವಿರ (ಮಾಸಿಕ) 

* ಅರ್ಜಿ ಸಲ್ಲಿಸಲು ಕೊನೆಯ ದಿನ: ವರ್ಷಪೂರ್ತಿ 

* ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

* ಹೆಚ್ಚಿನ ಮಾಹಿತಿಗೆ: Short Url: www.b4s.in/praja/NDMS3

ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಶಿಪ್

* ವಿವರ: ಆರ್ಥಿಕ ಸಂಕಷ್ಟದಲ್ಲಿರುವ ಕ್ರೀಡಾ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಕೋಲ್ಗೇಟ್-ಪಾಮೊಲಿವ್ (ಇಂಡಿಯಾ) ಲಿಮಿಟೆಡ್ ರೂಪಿಸಿರುವ ಕಾರ್ಯಕ್ರಮ ‘ಕೀಪ್‌ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಷಿಪ್‌ ಪ್ರೋಗ್ರಾಂ’. 

* ಅರ್ಹತೆ: ಅರ್ಜಿದಾರರು ಪದವೀಧರರಾಗಿರಬೇಕು ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಗುಂಪಿಗೆ ಕ್ರೀಡಾ ತರಬೇತಿ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು. ಕ್ರೀಡಾಪಟುಗಳಾಗಿದ್ದರೆ, ಅರ್ಜಿದಾರರು ಕಳೆದ 2/3 ವರ್ಷಗಳಲ್ಲಿ ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರೀಯ ಶ್ರೇಯಾಂ ಕದಲ್ಲಿ 500 ರೊಳಗೆ / ರಾಜ್ಯ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದಿರಬೇಕು. 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು. ಎಲ್ಲಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 5 ಲಕ್ಷಗಳಿಗಿಂತ ಕಡಿಮೆಯಿರಬೇಕು
* ಆರ್ಥಿಕ ಸಹಾಯ: ಮೂರು ವರ್ಷಗಳವರೆಗೆ ₹ 75 ಸಾವಿರ ಜತೆಗೆ ವಿದ್ಯಾರ್ಥಿ ವೇತನ ಪ್ರಶಸ್ತಿ ಪತ್ರ 

* ಅರ್ಜಿ ಸಲ್ಲಿಸಲು ಕೊನೆ ದಿನ: 30-06-2023
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌ 
Short Url: www.b4s.in/praja/KSSI2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT