ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JEE Main 2022 Exam Result: ಸೆಷನ್–1 ಪೇಪರ್–1ರ ಫಲಿತಾಂಶ ಪ್ರಕಟ

Last Updated 11 ಜುಲೈ 2022, 2:55 IST
ಅಕ್ಷರ ಗಾತ್ರ

ನವದೆಹಲಿ:ಜೆಇಇ (ಜಂಟಿ ಪ್ರವೇಶ ಪರೀಕ್ಷೆ )ಮೇನ್–2022ರ ಸೆಷನ್ 1, ಅಥವಾ ಜೂನ್ 2022 ರ ಅವಧಿಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಜೆಇಇ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್ -- jeemain.nta.nic.in ನಲ್ಲಿ ಬಿಡುಗಡೆ ಮಾಡಿದೆ.

ಎನ್‌ಟಿಎ, ಈಗಾಗಲೇ ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್‌ಗಳನ್ನು ಬುಧವಾರ, ಜುಲೈ 6 ರಂದು ಬಿಡುಗಡೆ ಮಾಡಿತ್ತು.

ಜೆಇಇ ಮೇನ್ –2022ರ ಸೆಷನ್–1ರ ಪೇಪರ್ 1 ರ(ಬಿ ಮತ್ತು ಬಿಟೆಕ್) ಫಲಿತಾಂಶ ಪ್ರಕಟಿಸಲಾಗಿದೆ. ಪೇಪರ್ 2 (BArch ಮತ್ತು BPlanning) ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಜೆಇಇ ಮೇನ್‌ ಸೆಷನ್–2ರ ನೋಂದಣಿ ನಡೆಯುತ್ತಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ -- jeemain.nta.nic.in ನಲ್ಲಿ ಇಂದೇ ಅರ್ಜಿ ಸಲ್ಲಿಸಬಹುದು. ಜೆಇಇ ಮೇನ್ ಸೆಷನ್ 2 ಜುಲೈ 21 ರಿಂದ ಜುಲೈ 30, 2022 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT