ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಶಿಕಾರಿಪುರದ ಎಂ.ಎಸ್.ಪವನ್‌ಗೆ 2ನೇ ರ‍್ಯಾಂಕ್‌

Published 10 ಏಪ್ರಿಲ್ 2024, 7:23 IST
Last Updated 10 ಏಪ್ರಿಲ್ 2024, 7:23 IST
ಅಕ್ಷರ ಗಾತ್ರ

ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಶಿಕಾರಿಪುರದ ಕುಮದ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಪವನ್ ರಾಜ್ಯಮಟ್ಟದಲ್ಲಿ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ.

ಪವನ್ ಕುಮದ್ವತಿ ಬಿ.ಇಡಿ ಕಾಲೇಜಿನ ಪ್ರಾಧ್ಯಾಪಕ ಎಸ್.ಎಂ.ಮಂಜುನಾಥ್ ಹಾಗೂ ಅನಿತಾ ದಂಪತಿ ಪುತ್ರ.

ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಬೇಕು ಎಂಬ ಕನಸು ಹೊಂದಿರುವ ಪುತ್ರ 10ನೇ ತರಗತಿಯಲ್ಲಿ ಶೇ 97 ಅಂಕಗಳಿಸಿದ್ದರೂ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದನು. ಈಗ ರ‍್ಯಾಂಕ್‌ ಗಳಿಸಿರುವುದು ಸಂತಸ ತಂದಿದೆ ಎಂದು ಪವನ್ ಅಮ್ಮ ಅನಿತಾ ಹೇಳಿದರು.

ದಿನಕ್ಕೆ ನಾಲ್ಕರಿಂದ ಐದು ತಾಸು ಮಾತ್ರ ಪವನ್ ನಿದ್ರೆ ಮಾಡುತ್ತಿದ್ದ. ಅವನ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT