ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು

Published 21 ಆಗಸ್ಟ್ 2024, 21:15 IST
Last Updated 21 ಆಗಸ್ಟ್ 2024, 21:15 IST
ಅಕ್ಷರ ಗಾತ್ರ

1. ಲಕ್ಪತಿ ದೀದಿ ಕಾರ್ಯಕ್ರಮದ ಅಡಿಯಲ್ಲಿ ಕೆಳಗಿನ ಯಾವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ?

1. ಡ್ರೋನ್ ಬಳಕೆಗೆ ಸಂಬಂಧಿಸಿದ ತರಬೇತಿ .
2. ಡ್ರೋನ್ ದುರಸ್ತಿಗೆ ಸಂಬಂಧಿಸಿದ ತರಬೇತಿ
ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಸಿ

2. ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕೆಳಗಿನ ಯಾವ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ತರಬೇತಿ ನೀಡಲಾಗುತ್ತದೆ?

1. ಹೊಲಿಗೆ ಕೆಲಸ 2. ದೋಣಿ ತಯಾರಿಕೆ
3. ಕಮ್ಮಾರರು 4. ಶಿಲ್ಪಿಗಳು
5. ಕುಂಬಾರರು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2, 3, 4 ಮತ್ತು 5→

ಬಿ. 1, 2 ಮತ್ತು 3

ಸಿ. 2 ಮತ್ತು 3

ಡಿ. 3 ಮತ್ತು 4

ಉತ್ತರ : ಎ

3) ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಶೃಂಗಸಭೆ (INDIAai) 2024ರಲ್ಲಿ ಭಾರತದ ಯಾವ ನಗರದಲ್ಲಿ ನಡೆಯಿತು?

1. ಮುಂಬೈ
2. ನವದಹೆಲಿ
3. ಬೆಂಗಳೂರು
4. ಹೈದರಾಬಾದ್

ಉತ್ತರ: (2)

4) ಜಿಪಿಎಐಯ ಕಾರ್ಯದರ್ಶಿ ಮಂಡಳಿ (ಸೆಕ್ರೆಟರಿಯೇಟ್)ಯ ಆತಿಥ್ಯವನ್ನು ಯಾರು ವಹಿಸಿಕೊಂಡಿದ್ದಾರೆ?

1. ವಿಶ್ವಸಂಸ್ಥೆ
2. ವಿಶ್ವ ವಾಣಿಜ್ಯ ಸಂಸ್ಥೆ (WTO)
3. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ

4. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF)

ಉತ್ತರ: (3)

5. ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ತನ್ನ ಪ್ರಾದೇಶಿಕ ಕಚೇರಿಗಳನ್ನು ಯಾವ ಸ್ಥಳದಲ್ಲಿ ಹೊಂದಿದೆ?

1. ಜಿನಿವಾ 2. ನ್ಯೂಯಾರ್ಕ್
3. ಟೊರೆಂಟೊ 4. ಟೋಕಿಯೋ
5. ರೋಮ್‌

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1, 2, 3 ಮತ್ತು 4

ಬಿ. 1, 2 ಮತ್ತು 4
ಸಿ. 2, 3 ಮತ್ತು 4

ಡಿ. 2 ಮತ್ತು 5

ಉತ್ತರ : ಎ

6. ಕೆಳಗಿನ ಯಾವ ವರ್ಷದಲ್ಲಿ ಭಾರತ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸದಸ್ಯತ್ವವನ್ನು ಪಡೆಯಿತು?

ಎ. 1967 ಬಿ.1957 ಸಿ. 1977 ಡಿ. 1987

ಉತ್ತರ : ಬಿ

7. ಕೆಳಗಿನ ಯಾವ ಅಂಶಗಳನ್ನು ರಾಷ್ಟ್ರೀಯ ಜಾನುವಾರು ಅಭಿಯಾನದ ಉಪ ಅಭಿಯಾನಗಳು ಎಂದು ಪರಿಗಣಿಸಬಹುದು?

1. ಜಾನುವಾರುಗಳ ಮೇವಿನ ಉಪ ಅಭಿಯಾನ.

2. ಜಾನುವಾರು ವಲಯದ ಅಭಿವೃದ್ಧಿ ಉಪ ಅಭಿಯಾನ.

3. ಈಶಾನ್ಯ ಪ್ರದೇಶದಲ್ಲಿ ಹಂದಿ ಅಭಿವೃದ್ಧಿ ಉಪ ಅಭಿಯಾನ.

4. ಕೌಶಲ ಅಭಿವೃದ್ಧಿ ಉಪ ಅಭಿಯಾನ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1, 2, 3 ಮತ್ತು 4 ಬಿ. 2 ಮತ್ತು 4
ಸಿ. 3 ಮತ್ತು 4 ಡಿ. 2 ಮತ್ತು 3

ಉತ್ತರ : ಎ

8. ಅಂಡುಮತ್ತು ಮಾಂಸದ ಉತ್ಪಾದನೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ.
2. ಮಾಂಸ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಎಂಟನೇ ಸ್ಥಾನವನ್ನು ಹೊಂದಿದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ.1 ಮಾತ್ರ →ಬಿ. 2 ಮಾತ್ರ
ಸಿ. 1 ಮತ್ತು 2 →ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಬಿ

9. ಹಂಸ ಮೆಹತಾ ಅವರಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಇವರು ಭಾರತದ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಲೇಖಕರಾಗಿದ್ದರು.

2. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

3. 1946ರ ಅಖಿಲ ಭಾರತ ಮಹಿಳಾ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1, 2 ಮತ್ತು 3 ಡಿ. 2 ಮತ್ತು 3

ಉತ್ತರ : ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT