ಪಠ್ಯಪುಸ್ತಕದ ಒಂದಷ್ಟು ಪ್ರಶ್ನೋತ್ತರ, ಅಷ್ಟೊ ಇಷ್ಟೊ ಅಂಕಗಳು ಮತ್ತು ಅಲ್ಲಿಂದ ಸೀದಾ ಮೊಬೈಲ್ ಪರದೆಗೆ ಜಾರುವುದು... ಇದು ಈಗಿನ ಮಕ್ಕಳ ಜಗತ್ತು. ಇವರಿಗೆ ಭಾಷೆ ಗೊತ್ತು, ಅದರ ಸ್ವಾದ ಗೊತ್ತಿಲ್ಲ. ವಿಷಯ ಗೊತ್ತು, ಅದರ ಒಳನೋಟಗಳು ಗೊತ್ತಿಲ್ಲ. ಮೊನ್ನೆ ರಸಪ್ರಶ್ನೆ ಸ್ಪರ್ಧೆಯೊಂದರಲ್ಲಿ, ‘ದೇಶದ ಯಾವ ನಗರದ ಮಾಲಿನ್ಯ ಉಸಿರುಗಟ್ಟಿಸುವಷ್ಟು ಕೆಟ್ಟುಹೋಗಿದೆ?’ ಅಂತ ಶಿಕ್ಷಕರೊಬ್ಬರು ಕೇಳಿದಾಗ ಉತ್ತರ ತಿಳಿಯದೆ ಮಕ್ಕಳು ಕಂಗಾಲಾದರು.

ಶಾಲೆ, ಪರೀಕ್ಷೆ, ಅಂಕಗಳು, ಮೊಬೈಲ್, ರೀಲ್ಸ್– ಇಷ್ಟು ಬಿಟ್ಟರೆ ಆಚೆಗೆ ಏನೂ ಗೊತ್ತಿಲ್ಲ. ಮಕ್ಕಳ ಎದೆಯಲ್ಲಿ ಭಾಷೆ ಇದೆ, ಆದರೆ ಅದು ಇರುವುದು ಪದಗಳಲ್ಲಿ ಮಾತ್ರ. ಅವರು ಬರೆಯುವ ವಾಕ್ಯಗಳು ಅವರವಲ್ಲ. ಕಾಲದ ವಿವೇಚನೆ ಇಲ್ಲ.

ಇಂತಹ ಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ತರಗತಿಯಿಂದ ಆಚೆ ಇಣುಕಲು ಕಿಟಕಿಯೊಂದು ಬೇಕಾಗಿದೆ. ಮೊಬೈಲ್ನಲ್ಲಿ ಕಾಣುವ ಜಗತ್ತಿಗಿಂತ ಬೇರೆಯದೇ ಆದ ಜಗತ್ತೊಂದು ಇದೆ ಎಂದು ಅವರಿಗೆ ತೋರಿಸಬೇಕಿದೆ. ಬಹುಶಃ ಈ ಕೆಲಸಗಳನ್ನು ‘ದಿನಪತ್ರಿಕೆಗಳ ಓದು’ ಸಮರ್ಥವಾಗಿ ಮಾಡಬಲ್ಲದು.

ದೊಡ್ಡವರು ಪತ್ರಿಕೆಗಳಿಂದ ದೂರ ಸರಿಯುತ್ತಿರುವುದಕ್ಕಿಂತ ಮಕ್ಕಳು ಪತ್ರಿಕೆಯಿಂದ ದೂರ ಉಳಿಯುವುದು ಬಹಳ ಅಪಾಯಕಾರಿ. ಅವರ ಕೈಯಲ್ಲಿ ಅಮೂಲ್ಯವಾದ ನಾಳೆಗಳಿವೆ. ಇಂತಹ ನಾಳೆಗಳಲ್ಲಿ ಇರಬೇಕಾದ ಅವರೇ ದುರ್ಬಲರಾಗಿ ಹೋದರೆ ಹೇಗೆ? ನಾವು ಪತ್ರಿಕೆಗಳನ್ನು ಉಳಿಸುವುದಕ್ಕಾಗಿ ಓದಬೇಕಿಲ್ಲ, ನಾವು ಉಳಿಯುವುದಕ್ಕಾಗಿ ಪತ್ರಿಕೆಗಳನ್ನು ಓದಬೇಕು.

ಬಹುಶಃ ಈ ಅಪಾಯವನ್ನು ಅರಿತು ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಶಾಲೆಯಲ್ಲಿ ದಿನಪತ್ರಿಕೆಯ ಓದನ್ನು ಕಡ್ಡಾಯಗೊಳಿಸಿವೆ. ನಮ್ಮ ರಾಜ್ಯದ ಶಾಲೆಗಳಲ್ಲಿ ನಿತ್ಯ ದಿನಪತ್ರಿಕೆ ಓದು ಚಾಲ್ತಿಯಲ್ಲಿದ್ದರೂ ಅದರ ಸರಿಯಾದ ಅನುಪಾಲನೆ ಸಾಧ್ಯವಾಗುತ್ತಿಲ್ಲ. ಇಲ್ಲೂ ಅದನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ ಮತ್ತು ಅದು ಅಗತ್ಯವಾದ ಕ್ರಮವೂ ಹೌದು.

ಯಾಕೆ ಓದಬೇಕು?

ಶಾಲೆಯ ಪಠ್ಯಕ್ಕೆ ಸೀಮಿತ ಚೌಕಟ್ಟು ಇದೆ. ಅಷ್ಟು ಮಾತ್ರ ಸಾಲುವುದಿಲ್ಲ. ದಿನಪತ್ರಿಕೆಗಳು ಪಠ್ಯದ ಆಚೆಗಿನ ಕಿಟಕಿಗಳು. ಅವು ಜಗತ್ತಿನ ಎಲ್ಲಾ ಕಡೆ ನಡೆಯುವ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಯ ಮಾಹಿತಿಯನ್ನು ಹೊತ್ತು ತರುತ್ತವೆ. ಅಲ್ಲದೆ ಅವು ಬರೀ ಮಾಹಿತಿಯ ಮೂಟೆಗಳಲ್ಲ, ಬದಲಿಗೆ ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಬದಲಿಸುವ ಅಸ್ತ್ರಗಳು.

ಬರವಣಿಗೆಯ ಶೈಲಿ ಮತ್ತು ಭಾಷಾ ಶುದ್ಧತೆಯನ್ನು ಕಲಿಯಲು ದಿನಪತ್ರಿಕೆಗಿಂತ ಉತ್ತಮ ಶಿಕ್ಷಕರಿಲ್ಲ. ಹೊಸ ಶಬ್ದಗಳ ಪರಿಚಯ, ಸೊಗಸಾದ ವಾಕ್ಯ ರಚನೆಯ ಶೈಲಿ, ಕಾಗುಣಿತದ ದೋಷಗಳು ಕಡಿಮೆಯಾಗುವುದು, ಸೊಗಸಾದ ಶುದ್ಧ ಮಾತುಗಾರಿಕೆ ಇವೆಲ್ಲವೂ ನಿತ್ಯ ಪತ್ರಿಕೆ ಓದುವುದರಿಂದ ಸಾಧ್ಯವಾಗುತ್ತದೆ.

ಪತ್ರಿಕೆಗಳ ಓದುವಿಕೆಯು ವಿಮರ್ಶಾತ್ಮಕ ಚಿಂತನೆಯನ್ನು ಕಲಿಸುತ್ತದೆ. ಅದರಲ್ಲಿ ಬರುವ ‘ಸಂಪಾದಕೀಯ’ ಪುಟವು ನಿಖರವಾದ ವಿಷಯ ವಿಶ್ಲೇಷಣೆ ನೀಡುತ್ತದೆ. ಸಮಸ್ಯೆಯ ಸಾಧಕ-ಬಾಧಕಗಳೇನು, ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರವೇನು ಎಂಬುದರ ಬಗ್ಗೆ ಲೇಖಕರು ಮಂಡಿಸುವ ವಿಚಾರಗಳು ಮಕ್ಕಳಲ್ಲಿ ಸ್ವತಂತ್ರವಾಗಿ ಆಲೋಚಿಸುವ ಗುಣವನ್ನು ಬೆಳೆಸುತ್ತವೆ. ಇದು ಬರೀ ಓದಲ್ಲ, ಗ್ರಹಿಸಿ ತರ್ಕಬದ್ಧವಾಗಿ ಯೋಚಿಸುವ ಪ್ರಕ್ರಿಯೆ.

ಮುಂದೆ ಯಾವುದೇ ಹೆಚ್ಚಿನ ಓದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೂ ಪ್ರಚಲಿತ ವಿದ್ಯಮಾನಗಳ ಜ್ಞಾನ ಅತ್ಯಗತ್ಯ. ಈಗಿನಿಂದಲೇ ಪತ್ರಿಕೆ ಓದುವ ಅಭ್ಯಾಸವಿದ್ದರೆ, ಮುಂದೆ ಇಂತಹ ಪರೀಕ್ಷೆಗಳಿಗಾಗಿ ಪ್ರತ್ಯೇಕವಾಗಿ ಸಿದ್ಧತೆ ಮಾಡಿಕೊಳ್ಳುವುದು ಬೇಕಾಗುವುದಿಲ್ಲ. ನಿರಂತರ ಓದುವಿಕೆ ಮಾತ್ರ ಇದನ್ನು ಸಾಧ್ಯವಾಗಿಸುತ್ತದೆ.

ಭಾನುವಾರದ ವಿಶೇಷ ಪುಟಗಳಲ್ಲಿ ಬರುವ ಕವನಗಳು, ಕಥೆಗಳು, ಚಿತ್ರಕಲೆಗಳು, ಒಗಟುಗಳಂತಹವು ಮಕ್ಕಳ ಸೃಜನಶೀಲತೆಯನ್ನು ಪ್ರಚೋದಿಸುತ್ತವೆ. ಸಾಧಕರ ಪರಿಚಯವು ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ, ತಾವು ಕೂಡ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ.

ಒಂದು ದಿನಪತ್ರಿಕೆಯು ನೂರಾರು ಪುಸ್ತಕಗಳ ಸಾರವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುತ್ತದೆ. ನೆನಪಿರಲಿ, ಓದು ಮಾತ್ರ ಒಬ್ಬ ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಬಲ್ಲದು. ಶಾಲಾ ಹಂತದಲ್ಲೇ ಪತ್ರಿಕೆ ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ, ಮಗು ಶಾಲಾ ಪಠ್ಯವನ್ನು ಮೀರಿ ಬೆಳೆಯುತ್ತದೆ. ಸಮಾಜದ ವಾಸ್ತವ ಸ್ಥಿತಿಯ ಅರಿವು ಪಡೆಯುತ್ತದೆ. ಇದರಿಂದ, ನಾಳೆ ಒಬ್ಬ ಒಳ್ಳೆಯ ನಾಗರಿಕನಾಗಿ ಬೆಳೆಯಲು ಅನುವಾಗುತ್ತದೆ.

ಓದನ್ನು ರೂಢಿಸುವ ಬಗೆ

1. ನಿತ್ಯ ಬೆಳಗಿನ ಅವಧಿಯ 20 ನಿಮಿಷವನ್ನು ಅದಕ್ಕಾಗಿ ಮೀಸಲಿಡಬೇಕು. ಪ್ರತಿದಿನ ಒಂದು ಮಗು ಜೋರಾಗಿ ಪತ್ರಿಕೆ ಓದಬೇಕು. ಅಲ್ಲೇ ಶಿಕ್ಷಕರು ಪ್ರಮುಖ ವಿಷಯವನ್ನು ವಿವರಿಸಿ ಹೇಳಬೇಕು.

2. ಪ್ರತಿದಿನ ಪತ್ರಿಕೆಯಿಂದ ಐದು ಕಷ್ಟಕರ ಕನ್ನಡ ಪದಗಳನ್ನು ಆಯ್ಕೆ ಮಾಡಿ, ಅವುಗಳ ಅರ್ಥ ಮತ್ತು ವಾಕ್ಯ ಪ್ರಯೋಗವನ್ನು ಕಪ್ಪುಹಲಗೆಯ ಮೇಲೆ ಬರೆಯಬೇಕು.

3. ವಾರಪೂರ್ತಿ ಓದಿದ ಸುದ್ದಿಗಳ ಪೈಕಿ ತಮಗೆ ಇಷ್ಟವಾದ ಲೇಖನಗಳನ್ನು ಕತ್ತರಿಸಿ, ನೋಟಿಸ್ ಬೋರ್ಡ್ನಲ್ಲಿ ಅಂಟಿಸಿ, ಅದರ ಬಗ್ಗೆ ಸ್ವಂತ ವಿಶ್ಲೇಷಣೆ ಬರೆಯಲು ಪ್ರೋತ್ಸಾಹಿಸಬೇಕು. ಇದನ್ನು ಭಿತ್ತಿಪತ್ರಿಕೆಯಂತೆ ನಿರ್ವಹಿಸಬೇಕು.

4. ಶಾಲೆಯಲ್ಲಿ ತಿಂಗಳಿಗೊಮ್ಮೆ ಪದಬಂಧ ಮತ್ತು ಸುಡೊಕು ತುಂಬುವ ಸ್ಪರ್ಧೆಯನ್ನು ಏರ್ಪಡಿಸಬೇಕು.

5. ಪತ್ರಿಕೆಗಳಲ್ಲಿನ ‘ಮಕ್ಕಳ ವಿಭಾಗ’ಕ್ಕೆ ಕಥೆ, ಕವನ, ಲೇಖನ ಬರೆಯುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು.

6. ಸಂಪಾದಕೀಯ ಪುಟದಲ್ಲಿನ ಲೇಖನಗಳನ್ನು ಓದಲು 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಮರುದಿನ ಅದರ ಬಗ್ಗೆ ಸಂವಾದ ಏರ್ಪಡಿಸಬೇಕು.

7. ದಿನನಿತ್ಯ ಕನಿಷ್ಠ ಎರಡು ಪತ್ರಿಕೆಗಳನ್ನಾದರೂ ಓದಿಸುವ ರೂಢಿ ಬೆಳೆಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.