ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಲಿಕೆಗೆ ಆನ್‌ಲೈನ್ ಕೋರ್ಸ್

ಕೋರ್ಸ್‌ ಕಾರ್ನರ್‌
Last Updated 12 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಈಗ ಎಲ್ಲೆಲ್ಲೂ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನದ್ದೇ ಹವಾ. ನಾವೇ ತಯಾರಿಸಿದ ಸಾಫ್ಟ್‌ವೇರ್‌ ಅನ್ನೇ ಬಳಸಿಕೊಂಡು, ಬರೆದ ಅಲ್ಗಾರಿದಂ (ಕ್ರಮಾವಳಿ) ಗಳಿಂದ ಒಂದಿಂಚೂ ಆಚೀಚೆ ಸರಿಯದೆ ಕರಾರುವಾಕ್ಕಾಗಿ ಯೋಚಿಸಿ ಕೆಲಸ ಮಾಡುವ ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಧಾರಿತ ಯಂತ್ರಗಳ ಚಮತ್ಕಾರವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುತ್ತೇವೆ.

ನಾವೀಗ ಬಳಸುತ್ತಿರುವ ಶೇ 77 ಉಪಕರಣಗಳು ‘ಎ.ಐನ ಮೂಲವಾದ ಮಷೀನ್ ಲರ್ನಿಂಗ್ ಆಧರಿಸಿ ಕೆಲಸ ಮಾಡುತ್ತಿವೆ. ಇವುಗಳಿಗಾಗಿ ಬಿಲಿಯನ್ ಡಾಲರ್ ಮಾರ್ಕೆಟ್ ತಲೆ ಎತ್ತಿದೆ. ಸ್ಕೂಲು, ಕಾಲೇಜು, ಉದ್ಯಮ, ಸಂಶೋಧನಾ ಕೇಂದ್ರ, ಮಿಲಿಟರಿ, ಆಸ್ಪತ್ರೆ, ಬಾಹ್ಯಾಕಾಶ, ಮನೆ, ಮಾರ್ಕೆಟಿಂಗ್, ಉನ್ನತ ತಂತ್ರಜ್ಞಾನ ಬಳಕೆಯ ಉದ್ಯಮಗಳಲ್ಲೆಲ್ಲಾ ಎ.ಐ ಕಾಲಿಟ್ಟಿದ್ದು ಓದಿಗೆ ಮತ್ತು ಕೆಲಸಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದನ್ನು ಕಲಿಯಲು ಆನ್‌ಲೈನ್‌ನಲ್ಲಿಯೇ ಸಾಕಷ್ಟು ಅವಕಾಶಗಳಿವೆ. ಬಾಂಬೆ ಐಐಟಿ (ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ) ಇದೇ ತಿಂಗಳು 29 ರಿಂದ ಆನ್‌ಲೈನ್ ಸರ್ಟಿಫಿಕೇಶನ್ ಕೋರ್ಸ್ ಪ್ರಾರಂಭಿಸುತ್ತಿದೆ.

ಕೋರ್ಸ್‌ನ ಅವಧಿ: 6 ತಿಂಗಳು

ವಿದ್ಯಾರ್ಹತೆ: ಗಣಿತವನ್ನು ಐಚ್ಚಿಕ ವಿಷಯವನ್ನಾಗಿ ಓದಿರುವ ಯಾವುದಾದರೂ ಪದವಿ ಅಥವಾ ಡಿಪ್ಲೊಮಾ ಪಾಸಾಗಿರಬೇಕು.

ಅನುಭವ: ಕಂಪ್ಯೂಟರ್‌ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ಗಳಾದ ಸಿ++ ಮತ್ತು ಜಾವಾಗಳನ್ನೂ ಬಳಸಿ ಒಂದು ವರ್ಷ ಕೆಲಸ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಡಿಸೆಂಬರ್, 2021

ತರಗತಿ ಸಮಯ: ಪ್ರತಿ ಶನಿವಾರ ಮಧ್ಯಾಹ್ನ 3.30 - 6.30 ರ ವರೆಗೆ

ಶುಲ್ಕ: ₹1.25 ಲಕ್ಷ + ಜಿಎಸ್‌ಟಿ (₹62,500 ಎರಡು ಕಂತುಗಳಲ್ಲಿ ಶುಲ್ಕ ಭರಿಸಬಹುದು.)

ಈ ಕೋರ್ಸ್‌ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್ ಮತ್ತು ಪೈಥಾನ್‌ಗಳನ್ನು ಒಟ್ಟಿಗೆ ಕಲಿಸುವುದರಿಂದ ಜಾವಾ, ಸಿ ++, ಸ್ಕೇಲಾ, ಪರ್ಲ್, ಹೈವ್, ಹಡೂಪ್, ಮ್ಯಾಪ್ ರೆಡ್ಯೂಸ್, ಪಿಗ್, ಸ್ಟಾರ್ಕ್ ಪ್ರೋಗ್ರಾಮಿಂಗ್ ಲಾಂಗ್ವೇಜ್, ಎಸ್‌ಕ್ಯುಎಲ್‌ಗಳ ಜೊತೆಗೆ, ಲೀನಿಯರ್ ಆಲ್‌ಜಿಬ್ರಾ, ಸ್ಟ್ಯಾಟಿಸ್ಟಿಕ್ಸ್‌ ಮತ್ತು ಕ್ಯಾಲ್ಕುಲಸ್‌ ಗೊತ್ತಿದ್ದರೆ ಪಾಠಗಳು ಬೇಗನೇ ಅರ್ಥವಾಗುತ್ತವೆ.

ಯಾರು ಕಲಿಯಬಹುದು

ಹೈಯರ್ ಮ್ಯಾಥಮ್ಯಾಟಿಕ್ಸ್‌, ಅಪ್ಲೈಡ್‌ ಫಿಸಿಕ್ಸ್, ಬಯೋಸಿಯನ್ ನೆಟ್‌ವರ್ಕಿಂಗ್, ಕಾಗ್ನಿಟಿವ್ ಸೈನ್ಸ್ ಥಿಯರಿ, ಕಂಪ್ಯೂಟರ್ ಸೈನ್ಸ್, ರೊಬೊಟಿಕ್ಸ್, ಸೈಕಾಲಜಿ, ಫಿಸಿಯಾಲಜಿ ಆಫ್ ನರ್ವಸ್ ಸಿಸ್ಟಮ್ ಓದಿದವರು, ಡಿಪ್ಲೊಮಾ ಮಾಡಿ ವಿಎಲ್‌ಎಸ್‌ಐ ಪರಿಣತಿ ಹೊಂದಿವರು, ಮೆಕೆಟ್ರಾನಿಕ್ಸ್ ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯಬಹುದು.

ಕಲಿಸುವ ಶಿಕ್ಷಕರು

ಬಾಂಬೆ ಐಐಟಿಯ ಪ್ರಾಧ್ಯಾಪಕರು, ಐಎ ಉದ್ಯಮ ನಡೆಸುವ ಪರಿಣತರು ಆನ್‌ಲೈನ್‌ನ ಒಟ್ಟು 15 ಮಾಡ್ಯೂಲ್‌ಗಳಲ್ಲಿ ಇಡೀ ಕೋರ್ಸ್‌ ಅನ್ನು ಹೇಳಿಕೊಡುತ್ತಾರೆ. ಕೋರ್ಸ್ ಮುಗಿಸಿದವರಿಗೆ ದೊಡ್ಡ ಸಂಬಳದ ಕೆಲಸ ದೊರೆಯುವ ಸಾಧ್ಯತೆ ಇರುವುದರಿಂದ, ಇದರ ಕಲಿಕೆಗೆ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿನ ಮಾಹಿತಿಗಾಗಿ: https://bit.ly/3EQPEuq

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT