ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ವಿಭಾಗದಲ್ಲಿ ’ಕರ್ನಾಟಕ ಆರ್ಥಿಕತೆ, ಅದರ ಬಲ ಹಾಗೂ ದೌರ್ಬಲ್ಯ’ ವಿಷಯದ ಕುರಿತಾದ ಬಹು ಆಯ್ಕೆ ಪ್ರಶ್ನೆಗಳು.

1. ಭಾರತ ಜಗತ್ತಿನಲ್ಲಿ 6ನೇ ದೊಡ್ಡ ಅರ್ಥ ವ್ಯವಸ್ಥೆ ಹೊಂದಿದೆ. ಕರ್ನಾಟಕವೂ ಪ್ರಮುಖ ಅರ್ಥವ್ಯವಸ್ಥೆಯ ಭಾಗವಾಗಿದ್ದು, ನಮ್ಮ ರಾಜ್ಯವು ದೇಶದ ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ)ಗೆ ಶೇಕಡವಾರು ಎಷ್ಟು ಕೊಡುಗೆಯನ್ನು ಕೊಡುತ್ತದೆ?

ಎ. ಶೇ 8

ಬಿ. ಶೇ 15

ಸಿ. ಶೇ 20

ಡಿ. ಶೇ 4

ಉತ್ತರ: ಎ

2. 2020-21ರ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ(ಜಿಎಸ್ಡಿಪಿ) ₹11,13,818 ಕೋಟಿಗಳಷ್ಟಿದೆ. ಇದನ್ನು ಲೆಕ್ಕ ಹಾಕುವಾಗ …………………ಸಾಲಿನ ಸ್ಥಿರ ಬೆಲೆಯನ್ನು ತೆಗೆದು ಕೊಳ್ಳಲಾಗಿದೆ.

ಎ. 2020-21

ಬಿ. 2015-16

ಸಿ. 2000-01

ಡಿ. 2011-12

ಉತ್ತರ: ಡಿ

3. ‘ಒಂದು ಜಿಲ್ಲೆ ಒಂದು ಉತ್ಪನ್ನ’ಯೋಜನೆ ಅಡಿಯಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯೂ ಒಂದೊಂದು ಕೃಷಿ ಉತ್ಪನ್ನಗಳಿಗೆ ಪ್ರಸಿದ್ದವಾಗಿದೆ. ಉದಾ:- ಈರುಳ್ಳಿಗೆ- ಬಾಗಲಕೋಟೆ ಜಿಲ್ಲೆ, ಕಬ್ಬು ಅಥವಾ ಬೆಲ್ಲಕ್ಕೆ ಬೆಳಗಾವಿ ಮತ್ತು ಮಂಡ್ಯ ಪ್ರಸಿದ್ದವಾದರೆ ಮಸಾಲೆ ಪದಾರ್ಥಕ್ಕೆ ಯಾವ ಜಿಲ್ಲೆ ಪ್ರಸಿದ್ದವಾಗಿದೆ?

ಎ. ಉತ್ತರ ಕನ್ನಡ

ಬಿ. ಬೀದರ್

ಸಿ. ತುಮಕೂರು

ಡಿ. ಹಾಸನ

ಉತ್ತರ: ಎ

4. ನಮ್ಮ ರಾಜ್ಯದಲ್ಲಿ ಎಷ್ಟು ಮಣ್ಣು ಪರೀಕ್ಷಾ ಪ್ರಯೋಗಾಲಯಗಳು ಇವೆ?

ಎ. 30

ಬಿ. 40

ಸಿ. 50

ಡಿ. 15

ಉತ್ತರ: ಎ

5. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ನಮ್ಮ ರಾಜ್ಯವು 2007-8ರ ಆರ್ಥಿಕ ವರ್ಷದಿಂದ ಲಿಂಗಸಮಾನತೆ ದೃಷ್ಟಿಯಿಂದ ‘ಲಿಂಗಾನುಪಾತ ಆಧಾರಿತ ಬಜೆಟ್’ (ಜಂಡರ್ ಬಜೆಟ್) ನೀಡುತ್ತಾ ಬಂದಿದೆ. ಶೇ 48.30ರಷ್ಟು ಯೋಜನೆಗಳು ಮಹಿಳೆಯರ ಕಲ್ಯಾಣಕ್ಕಾಗಿಯೂ ವಿಸ್ತರಿಸಲಾಗಿದೆ.

2. 2020-21ರಿಂದ ಮಕ್ಕಳ ಹಿತಕ್ಕಾಗಿ ಇರುವ ಕಾರ್ಯಕ್ರಮವನ್ನು ಜಾರಿಗೊಳಿಸುವ ಮಕ್ಕಳ ಬಜೆಟ್ ಅನ್ನೂ ಮಂಡಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು ಸುಮಾರು 280 ಮಕ್ಕಳಿಗೆ ಸಹಾಯವಾಗುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಅದಕ್ಕಾಗಿ ₹36,340 ಕೋಟಿ ಅನುದಾನವನ್ನು ಮೀಸಲಾಗಿಡಲಾಗಿದೆ.

3. 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿ ತಲಾ ವರಮಾನ ₹ 2,26,796 ಇದ್ದು 2019-20ನೇ ಸಾಲಿನಲ್ಲಿ ₹2,23,175 ಇತ್ತು 2019-20ನೇ ಸಾಲಿಗೆ ಹೋಲಿಸಿದರೆ ಶೇ 1.6ರಷ್ಟು ಹೆಚ್ಚಾಗಿದೆ.

4. ಕರ್ನಾಟಕದ ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ ಕರ್ನಾಟಕದ ಒಟ್ಟು ಕಾರ್ಮಿಕರಲ್ಲಿ ಶೇ 30ರಷ್ಟು ಜನ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ನಮ್ಮ ರಾಜ್ಯದ ಜಿಡಿಪಿಗೆ ಕೃಷಿ ಕ್ಷೇತ್ರವು ಶೇ 8.7ರಷ್ಟು ಕೊಡುಗೆಯನ್ನು ನೀಡುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 2, 3 ಮತ್ತು 4ರ ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

6. ಫುಡ್ ಕರ್ನಾಟಕ ಲಿಮಿಟೆಡ್, ಕರ್ನಾಟಕದಲ್ಲಿ ಪುಡ್ ಪಾರ್ಕ್ಗಳನ್ನು ಗಮನಿಸಲು ಇರುವ ನೋಡಲ್ ಏಜೆನ್ಸಿ. ಹಾಗಾದರೆ ’ಇನೋವಾ ಅಗ್ರಿ ಬಯೋ ಟೆಕ್ ಪಾರ್ಕ್ ಲಿಮಿಟೆಡ್’ ಎಲ್ಲಿದೆ?

ಎ. ಜೇವರ್ಗಿ

ಬಿ. ಮಾಲೂರು.

ಸಿ. ಹುಮನಾಬಾದ್

ಡಿ. ಸಕಲೇಶಪುರ

ಉತ್ತರ:-ಬಿ

7. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಭಾರತದಲ್ಲಿರುವ ಒಟ್ಟು ಕಾರ್ಖಾನೆಗಳಲ್ಲಿ ಶೇ 5.6ರಷ್ಟು ಕರ್ನಾಟಕದಲ್ಲಿವೆ.

2. 2019-20ರಲ್ಲಿ ಕರ್ನಾಟಕದಲ್ಲಿ ಇದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳ (MSMEs) ಸಂಖ್ಯೆ 97,232. ಇವುಗಳಲ್ಲಿ ಹೂಡಿಕೆ ಮಾಡಿದ್ದು ₹ 18,59,727 ಲಕ್ಷಗಳು.

3. ನಮ್ಮ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗುವಲ್ಲಿ ಕೆಐಎಡಿಬಿಯ ಏಜನ್ಸಿಯಾದ ’ಕರ್ನಾಟಕ ಉದ್ಯೋಗ ಮಿತ್ರ’ದ ಪಾತ್ರ ದೊಡ್ಡದಿದ್ದು. ಇದು ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ’ಏಕ ಗವಾಕ್ಷಿ’ ಸಂಸ್ಥೆಯಾಗಿದೆ. ₹ 15 ಕೋಟಿಗೂ ಮೇಲ್ಪಟ್ಟ ₹ 500 ಕೋಟಿ ತನಕದ ಬಂಡವಾಳ ಹೂಡಿಕೆದಾರರಿಗೆ ಇದೂ ನೆರವು ನೀಡುತ್ತದೆ.

4. 2007-08 ರಿಂದ 2020ರ ನವೆಂಬರ್ ತನಕ 38,410 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ವಿದೇಶಿ ನೇರ ಬಂಡವಾಳವು(ಎಫ್ಡಿಐ) ರಾಜ್ಯದಲ್ಲಿ ಹೂಡಿಕೆಯಾಗಿದೆ.

ಎ. ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

8. ದೇಶದ ಶೇ 20ರಷ್ಟು ಸಿದ್ಧ ಉಡುಪು (ಗಾರ್ಮೆಂಟ್) ಉತ್ಪಾದನೆ ನಮ್ಮ ಕರ್ನಾಟಕದಲ್ಲಿ ಆಗುತ್ತಿದ್ದು, ಇದರ ಮೌಲ್ಯ 1.56 ಬಿಲಿಯನ್ ಅಮೆರಿಕನ್ ಡಾಲರ್ನಷ್ಟಾಗಿದೆ. ಹಾಗಾದರೆ ಈ ಕೆಳಗಿನ ಯಾವ ದೇಶಕ್ಕೆ ನಮ್ಮ ರಾಜ್ಯದಿಂದ ಗಾರ್ಮೆಂಟ್ ಉತ್ಪನ್ನಗಳು ರಫ್ತಾಗುತ್ತಿವೆ?

ಎ. ಅಮೆರಿಕ

ಬಿ. ಬ್ರಿಟನ್

ಸಿ. ಇಟಲಿ

ಡಿ. ಮೇಲಿನ ಎಲ್ಲಾ ದೇಶಗಳಿಗೆ

ಉತ್ತರ: ಡಿ (ಕರ್ನಾಟಕವು ಅಮೆರಿಕ, ಬ್ರಿಟನ್, ಇಟಲಿ, ಜರ್ಮನಿ ಹಾಂಕಾಂಗ್, ಟರ್ಕಿ, ಆಸ್ಟ್ರೇಲಿಯಾ, ಕೆನಡಾ ಮತ್ತಿತರ ದೇಶಗಳಿಗೆ ಗಾರ್ಮೆಂಟ್ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ)

9. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಈ ವರ್ಷ (2020-21ರಲ್ಲಿ) ’ಕೋವಿಡ್-19’ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಪ್ರಗತಿಯ ದರ, ಋಣಾತ್ಮಕವಾಗಿ ಕುಸಿತ ಕಂಡಿದೆ. ಅಂದರೆ ಪ್ರಗತಿ ದರ ಶೇ (-)2ರಷ್ಟು ದಾಖಲಾಗಿದೆ. 2020-21ರಲ್ಲಿ ಕೃಷಿ ಕ್ಷೇತ್ರವು ಶೇ 6.4ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದನ್ನು ಬಿಟ್ಟರೆ ಉಳಿದ ಕ್ಷೇತ್ರಗಳಾದ ಕೈಗಾರಿಕೆ ಶೇ (-) 5.1, ಸೇವಾ ವಲಯ ಶೇ(-) 3.1ರಷ್ಟು ಋಣಾತ್ಮಕ ಬೆಳವಣಿಗೆ ದರವನ್ನು ದಾಖಲಿಸಿವೆ.

2. 2020-21ರಲ್ಲಿ ನಮ್ಮ ರಾಜ್ಯದ ಆದಾಯ ಸ್ವೀಕೃತಿ (ರೆವೆನ್ಯೂ ರಿಸಿಪ್ಟ್) ₹ 1,79,919 ಕೋಟಿಯಷ್ಟಿದೆ. ಅದೇ ಹೊತ್ತಿಗೆ ನಮ್ಮ ರಾಜ್ಯದ ಸಾಲದ ಭಾರವು ₹3,68,692 ಕೋಟಿಯಷ್ಟಿದೆ.

3. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೈಗಾರಿಕೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಈಗಲೂ ಅಸಮತೋಲನ ಕಂಡು ಬರುತ್ತಿದೆ. ರಾಜ್ಯದಲ್ಲಿ 4 ಕಂದಾಯ ವಿಭಾಗಗಳಿವೆ. ಈ ಪೈಕಿ ಉತ್ತರ ಪ್ರಾಂತ್ಯಕ್ಕೆ ಸೇರುವ ಬೆಳಗಾವಿ, ಕಲಬುರಗಿ ವಿಭಾಗಗಳು ಹಿಂದುಳಿದಿವೆ. ದಕ್ಷಿಣ ಪ್ರಾಂತ್ಯದ ಬೆಂಗಳೂರು, ಮೈಸೂರು ವಿಭಾಗಗಳು ಎಂದಿನಂತೆ ಮುಂದಿವೆ.

4. ₹42 ಕೋಟಿ ಹೂಡಿಕೆಯೊಂದಿಗೆಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಿಸಲಾಗಿದೆ. ಶಿವಮೊಗ್ಗದಲ್ಲಿ ಐಟಿ ಪಾರ್ಕ್ ಮತ್ತು ಎಸ್ಇಝೆಡ್ ನಿರ್ಮಾಣಕ್ಕಾಗಿ 33 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕಲಬುರ್ಗಿಯಲ್ಲಿ 1.7 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಸಿದ್ದತೆ ನಡೆದಿದೆ. ಇಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿದ್ದರೂ ಐಟಿ ರಫ್ತು ಕ್ಷೇತ್ರದಲ್ಲಿ ಬೆಂಗಳೂರಿನ ಪಾತ್ರವೇ ದೊಡ್ಡದು. 2 ಮತ್ತು 3ನೇ ಹಂತದ ನಗರಗಳಿಂದ ಕೇವಲ ಶೇ 2ರಷ್ಟು ಮಾತ್ರ ಐಟಿ(ಮಾಹಿತಿ ತಂತ್ರಜ್ಞಾನ ಸೇವೆ) ರಫ್ತಾಗುತ್ತಿದೆ

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ತಪ್ಪಾಗಿವೆ?

ಎ. ಹೇಳಿಕೆ 1, 2 ಮತ್ತು 3 ಮಾತ್ರ ತಪ್ಪಾಗಿವೆ.

ಬಿ. ಹೇಳಿಕೆ 2, 3 ಮತ್ತು 4 ಮಾತ್ರ ತಪ್ಪಾಗಿವೆ

ಸಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ತಪ್ಪಾಗಿವೆ

ಡಿ. ಮೇಲಿನ ಯಾವ ಹೇಳಿಕೆಯೂ ತಪ್ಪಾಗಿಲ್ಲ.

ಉತ್ತರ: ಡಿ

10. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕರ್ನಾಟಕ, ದೇಶದಲ್ಲೇ 4ನೇ ದೊಡ್ಡ ಆಟೋಮೊಬೈಲ್ ತಯಾರಿಕಾ ರಾಜ್ಯವಾಗಿದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯೂ ಇದೆ. ನಮ್ಮ ರಾಜ್ಯದಲ್ಲಿ 14 ಮಿಲಿಯನ್ ನೋಂದಾಯಿತ ವಾಹನಗಳಿವೆ.

2. ದೇಶದಲ್ಲಿ ಶೇ 60ರಷ್ಟು ಮಿಷಿನ್ ಟೂಲ್ಸ್ಗಳನ್ನು ಕರ್ನಾಟಕ ಉತ್ಪಾದಿಸುತ್ತಿದೆ.

3. ಭಾರತದಲ್ಲಿ ಬೆಂಗಳೂರು ಅತಿದೊಡ್ಡ `ಬಯೋಟೆಕ್ ಹಬ್’ ಆಗಿದೆ. ಬಿಟಿ ಕ್ಷೇತ್ರದಲ್ಲಿ ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು 1/3 ಆಗಿದೆ. ದೇಶದ ಶೇ 50ರಷ್ಟು ಬಯೋಟೆಕ್ ಕಂಪನಿಗಳು ನಮ್ಮ ರಾಜದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.

4. ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ 2006 ರಲ್ಲಿ 36 ಮಿಲಿಯನ್ನಷ್ಟಿತ್ತು. ಅದೂ 2019ರಲ್ಲಿ 229.9 ಮಿಲಿಯನ್ಗೆ ಏರಿಕೆಯಾಗಿದೆ. 2019ರಲ್ಲಿ 6.08 ಲಕ್ಷ ವಿದೇಶಿ ಪ್ರವಾಸಿಗರು ನಮ್ಮ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು.

ಎ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಬಿ

11. ಕರ್ನಾಟಕದ ಆರ್ಥಿಕತೆಗೆ ಸಂಬಂಧಿಸಿದ ಕೆಳಗಿನ ಪ್ಯಾರಾ ಓದಿ

ಬಡತನ ನಿವಾರಣೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಹಿಂದುಳಿದಿದೆ. ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯಕ್ಕಿಂತ ಪುಟ್ಟ ರಾಜ್ಯವಾಗಿರುವ ಗೋವಾ ದ್ವಿತೀಯ ಸ್ಥಾನದಲ್ಲಿದೆ. ನಮ್ಮ ರಾಜ್ಯ 11ನೇ ಸ್ಥಾನದಲ್ಲಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ದ್ವಿತೀಯ ಸ್ಥಾನದಲ್ಲಿ ಹಿಮಾಚಲ ಪ್ರದೇಶ ಹಾಗೂ ತೃತೀಯ ಸ್ಥಾನದಲ್ಲಿ ಗೋವಾ ರಾಜ್ಯವಿದೆ. ಕರ್ನಾಟಕ 6ನೇ ಸ್ಥಾನ ದಲ್ಲಿದೆ. ಆರೋಗ್ಯ ಕ್ಷೇತ್ರದಲ್ಲಿ ಇಷ್ಟೆಲ್ಲಾ ತಾಂತ್ರಿಕತೆಯನ್ನು ಹೊಂದಿದ ಕರ್ನಾಟಕ ರಾಜ್ಯ, 6ನೇ ಸ್ಥಾನದಲ್ಲಿದೆ. ಗುಜರಾತ್ ಮೊದಲ ಸ್ಥಾನ ಹಾಗೂ ಮಹಾರಾಷ್ಟ ದ್ವಿತೀಯ ಸ್ಥಾನ ಮತ್ತು ನಮ್ಮ ಪಕ್ಕದ ತಮಿಳುನಾಡು 3ನೇ ಸ್ಥಾನದಲ್ಲಿದೆ.
ಮೇಲೆ ವಿವರಿಸಿದ ಅಂಶವು ಯಾವುದರಲ್ಲಿ ಕಾಣಬಹುದು?

ಎ. ಕರ್ನಾಟಕ ಸರ್ಕಾರ ಪ್ರಕಟಿಸಿದ ’ಇನೊವೇಶನ್ ವಿಷನ್-2030’ ಡಾಕ್ಯುಮೆಂಟ್

ಬಿ. ನೀತಿ ಆಯೋಗ ಇತ್ತೀಚಿಗೆ ಬಿಡುಗಡೆ ಮಾಡಿದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ

ಸಿ. ಕರ್ನಾಟಕ ಬಯೋ ಎಕಾನಾಮಿ ರಿಪೋರ್ಟ್ 2020

ಡಿ. ಮೇಲಿನ ಯಾವುದರಲ್ಲಿಯೂ ಅಲ್ಲ

ಉತ್ತರ: ಬಿ

12. ಬೆಂಗಳೂರು ವಿಭಾಗದಲ್ಲಿ ತಲಾವರ ಮಾನ ₹3,01,748 ಇದ್ದರೆ ಕಲಬುರ್ಗಿ ವಿಭಾಗದಲ್ಲಿ ಎಷ್ಟಿದೆ?

ಎ. ₹2,15,136

ಬಿ. ₹1,14,133

ಸಿ. ₹1,19,233

ಡಿ. ₹2,14,645

ಉತ್ತರ: ಬಿ

ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.