ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಲರ್‌ಶಿಪ್: ಇನ್ಫೋಸೆಪ್ಟ್ಸ್ಇನ್ನೊವೇಟ್ ಮತ್ತು ಸಂತೂರ್ ಸ್ಕಾಲರ್‌ಶಿಪ್‌

ಸ್ಕಾಲರ್‌ಶಿಪ್‌
Published 8 ಅಕ್ಟೋಬರ್ 2023, 23:47 IST
Last Updated 8 ಅಕ್ಟೋಬರ್ 2023, 23:47 IST
ಅಕ್ಷರ ಗಾತ್ರ

ಇನ್ಫೋಸೆಪ್ಟ್ಸ್ ಇನ್ನೊವೇಟ್ ಫಾರ್ ಇಂಪ್ಯಾಕ್ಟ್ ಸ್ಕಾಲರ್‌ಶಿಪ್ 2023-24


ವಿವರ
: ಕಂಪ್ಯೂಟರ್‌ ವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಹತೆ: ಕಂಪ್ಯೂಟರ್‌ ಎಂಜಿನಿಯರಿಂಗ್‌, ಮಾಹಿತಿ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಷೀನ್ ಲರ್ನಿಂಗ್ ಮತ್ತು ಡೇಟಾ ಸೈನ್ಸ್ ಅಂಡ್ ಅನಾಲಿಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.  10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹6 ಲಕ್ಷ  ಮೀರಬಾರದು. ಬೆಂಗಳೂರು ನಾಗ್ಪುರ, ಪುಣೆ, ಚೆನ್ನೈ , ಪುಣೆ ನಗರಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.


ಆರ್ಥಿಕ ಸಹಾಯ: ವರ್ಷಕ್ಕೆ ₹50 ಸಾವಿರ 
ಅರ್ಜಿ ಸಲ್ಲಿಸಲು ಕೊನೆ ದಿನ:  22-10-2023
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

ಮಾಹಿತಿಗೆ:  Short Url: www.b4s.in/praja/INFO1

*****

ಸಂತೂರ್ ಸ್ಕಾಲರ್‌ಶಿಪ್‌


ವಿವರ:  ಸಂತೂರ್ ‍ಸ್ಕಾಲರ್‌ಶಿಪ್‌ ಪ್ರೋಗ್ರಾಂ 2023-24, ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಅಥವಾ ಛತ್ತೀಸ್‌ಗಢ ರಾಜ್ಯಗಳ ಅನನುಕೂಲ ಪರಿಸ್ಥಿತಿಯ ಹಿನ್ನೆಲೆಯಿರುವ ಯುವತಿಯರ ಪದವಿಪೂರ್ವ ಅಧ್ಯಯನ ಬೆಂಬಲಿಸುವ ಗುರಿಯನ್ನು ಹೊಂದಿದೆ.


ಆರ್ಥಿಕ ಸಹಾಯ:  ಸ್ಥಳೀಯ ಸರ್ಕಾರಿ ಶಾಲೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. 2022-23ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ/ಜೂನಿಯರ್ ಕಾಲೇಜಿನಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. 2023-24 ರಿಂದ ಪೂರ್ಣ ಸಮಯದ ಪದವಿ ಕಾರ್ಯಕ್ರಮಕ್ಕೆ ಸೇರಿಕೊಂಡಿರಬೇಕು.


ಆರ್ಥಿಕ ಸಹಾಯ:  ವಾರ್ಷಿಕ ₹ 24,000
ಅರ್ಜಿ ಸಲ್ಲಿಸುವ ವಿಧಾನ:   15-10-2023
ಹೆಚ್ಚಿನ ಮಾಹಿತಿಗೆ:  Short Url: www.b4s.in/praja/SWS6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT