ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಧಾವಿ ಎಂಜಿನಿಯರಿಂಗ್ ಸ್ಕಾಲರ್‌ಷಿಪ್‌, ಇತರೆ ಶಿಷ್ಯವೇತನಗಳ ಬಗ್ಗೆ ಮಾಹಿತಿ ಇಲ್ಲಿದೆ..

ಗ್ಯಾನ್‌ಧನ್ ಸ್ಕಾಲರ್‌ಷಿಪ್ 2023, ವೈಭವ್ ಫೆಲೊಷಿಪ್‌ 2023
Published 29 ಮೇ 2023, 4:25 IST
Last Updated 29 ಮೇ 2023, 4:25 IST
ಅಕ್ಷರ ಗಾತ್ರ

ಮೇಧಾವಿ ಎಂಜಿನಿಯರಿಂಗ್ ಸ್ಕಾಲರ್‌ಷಿಪ್‌

ದೇಶದಾದ್ಯಂತವಿರುವ ನಿಗದಿತ 20 ಎನ್‌ಐಟಿ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಮುಂದುವರಿಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ಸ್ವಾವಲಂಬಿ ಗಳಾಗಿ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಆರ್ಥಿಕ ನೆರವು ನೀಡಲು ಭಾರತ್ ಪೆಟ್ರೊಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಬಿಪಿಸಿಐಎಲ್‌) ‘ಮೇಧಾವಿ ಎಂಜಿನಿಯರಿಂಗ್ ಸ್ಕಾಲರ್‌ಷಿಪ್‌ ಪ್ರೊಗ್ರಾಂ 2023–24’ ರೂಪಿಸಿದೆ.

ಅರ್ಹತೆ : ನಿಗದಿತ 20 ಎನ್‌ಐಟಿಗಳಲ್ಲಿ 2023–24ನೇ ಸಾಲಿನಲ್ಲಿ ಯಾವುದೇ ವರ್ಷಕ್ಕಾದರೂ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 12ನೇ ತರಗತಿಯಲ್ಲಿ ಶೇ 55ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಹಾಗೆಯೇ ಕುಟುಂಬದವರ ವಾರ್ಷಿಕ ವರಮಾನ ₹8 ಲಕ್ಷ ಮೀರಿರಬಾರದು.

l ಆರ್ಥಿಕ ನೆರವು: ₹50 ಸಾವಿರ (ಒನ್‌ ಟೈಮ್ ಫಿಕ್ಸ್ಡ್‌ ಸ್ಕಾಲರ್‌ಷಿಪ್‌)

l ಅರ್ಜಿ ಸಲ್ಲಿಕೆಗೆ ಕೊನೆ ದಿನ: ಜೂನ್ 7, 2023

l ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

l ಹೆಚ್ಚಿನ ಮಾಹಿತಿಗೆ: www.b4s.in/praja/BPCLS1

ಗ್ಯಾನ್‌ಧನ್ ಸ್ಕಾಲರ್‌ಷಿಪ್ 2023

ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಗ್ಯಾನ್‌‌‌‌ಧನ್ ಸ್ಕಾಲರ್‌ಷಿಪ್‌ 2023 ಅನ್ನು ರೂಪಿಸಲಾಗಿದೆ (ಇದುಭಾರತದ ಮೊದಲ ಶಿಕ್ಷಣ ಹಣಕಾಸು ಮಾರುಕಟ್ಟೆ) . ಶೈಕ್ಷಣಿಕ ಸಾಲ ತೆಗೆದುಕೊಳ್ಳುವ ಮತ್ತು ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಹಣಕಾಸಿನ ನೆರವು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಡೆದಿರುವ ಭಾರತೀಯ ಅರ್ಜಿದಾರರು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅಮೆರಿಕ, ಕೆನಡಾ, ಬ್ರಿಟನ್‌, ಆಸ್ಟ್ರೇಲಿಯಾ, ಐರ್ಲೆಂಡ್, ನ್ಯೂಜಿಲೆಂಡ್‌ ಮತ್ತು ಜರ್ಮನಿಯಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ‍ಪದವಿ ಕೋರ್ಸ್ ಮುಂದುವರಿಸಲು ಸಿದ್ಧರಿರಬೇಕು.

l ಆರ್ಥಿಕ ನೆರವು: ₹ 1 ಲಕ್ಷ (ಒಂದು ಬಾರಿ)

l ಅರ್ಜಿ ಸಲ್ಲಿಕೆಗೆ ಕೊನೆ ದಿನ: ಆಗಸ್ಟ್‌ 31, 2023

l ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

l ಹೆಚ್ಚಿನ ಮಾಹಿತಿಗೆ: www.b4s.in/praja/GDSA6

(ಕೃಪೆ: www.buddy4study.com)

ವೈಭವ್ ಫೆಲೊಷಿಪ್‌ 2023

l→ವಿವರ: ಪಿಎಚ್‌.ಡಿ/ಎಂ.ಡಿ/ಎಂ.ಎಸ್‌ ಪದವೀಧರರಿಗಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ‘ವೈಭವ್‌ ಫೆಲೊಷಿಪ್‌ 2023’ ಕಾರ್ಯಕ್ರಮವನ್ನು ರೂಪಿಸಿದೆ.

l→ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ/ಎಂ.ಡಿ/ಎಂ.ಎಸ್‌ ಪದವಿ ಪಡೆದು, ವಿದೇಶದಲ್ಲಿ ವಾಸಿಸುವ ಎನ್‌ಆರ್‌ಐಗಳು, ಪಿಐಒಗಳು ಮತ್ತು ಒಸಿಐಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು.

l→ಅರ್ಜಿದಾರರು ಟಾಪ್ 500 ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ ಶೈಕ್ಷಣಿಕ/ಸಂಶೋಧನೆ/ಕೈಗಾರಿಕಾ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಸಮರ್ಥ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಸಂಶೋಧಕರಾಗಿರಬೇಕು. ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪ್ರತಿ ವರ್ಷ ‌1 ರಿಂದ 2 ತಿಂಗಳವರೆಗೆ ಮೂರು ವರ್ಷಗಳ ಕಾಲ ಸಂಶೋಧನೆ ನಡೆಸಲು ಸಿದ್ಧರಿರಬೇಕು.

l→ಆರ್ಥಿಕ ನೆರವು: ₹ 4,08,727.50 (5 ಸಾವಿರ ಅಮೆರಿಕನ್ ಡಾಲರ್) ಮತ್ತು ಇತರೆ ಸೌಲಭ್ಯಗಳು

l→ಅರ್ಜಿ ಸಲ್ಲಿಕೆಗೆ ಕೊನೆ ದಿನ: ಜುಲೈ 31, 2023

l→ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

l→ಹೆಚ್ಚಿನ ಮಾಹಿತಿಗೆ: www.b4s.in/praja/VAIB6⇒(ಕೃಪೆ: www.buddy4study.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT