ಮೈಸೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಸುಲಭವಾಗಿ ಹೆಚ್ಚಿನ ಅಂಕ ಗಳಿಸಬಹುದು. ಇದರಲ್ಲಿ ಮಾಡುವ ಗಳಿಕೆಯು ಮಹತ್ವದ್ದಾಗುತ್ತದೆ. ಹೀಗಾಗಿ, ಉತ್ತಮ ತಯಾರಿ ಮಾಡಿಕೊಳ್ಳಬೇಕು ಎಂಬ ಸಲಹೆ ತಾಲ್ಲೂಕಿನ ಹಿನಕಲ್ ಪ್ರೌಢಶಾಲೆಯ ಸಹಶಿಕ್ಷಕಿ ಹೇಮಾ ಆರ್.

12 ವರ್ಷಗಳಿಂದ ಹಿಂದಿ ಬೋಧಿಸುತ್ತಿರುವ ಅವರು, ವಿದ್ಯಾರ್ಥಿಗಳಿಗೆ ನೀಡಿರುವ ಟಿಪ್ಸ್ಗಳು ಇಂತಿವೆ.

*ಹಿಂದಿಯಲ್ಲಿ ಒಟ್ಟು 17 ಪಾಠಗಳು. 3 ಪೂರಕ ವಾಚನಗಳಿವೆ. ಅವುಗಳನ್ನು ಓದಿಕೊಳ್ಳಬೇಕು.

*5 ಅಂಕದ ಪ್ರಶ್ನೆ -ಪತ್ರಲೇಖನ: ವ್ಯವಹಾರಿಕ ಪತ್ರದಲ್ಲಿ ರಜೆ ಕೇಳುವ ಪತ್ರವನ್ನು ಮುಖ್ಯಶಿಕ್ಷಕರನ್ನು ಉದ್ದೇಶಿಸಿ ಬರೆಯಬೇಕು. ವೈಯಕ್ತಿಕ ಪತ್ರದಲ್ಲಿ ಅಭ್ಯಾಸ ಅಥವಾ ಆರೋಗ್ಯದ ಕುರಿತು ತಂದೆ, ತಾಯಿ ಅಥವಾ ಸಂಬಂಧಿಕರಿಗೆ ಪತ್ರ ಬರೆಯಬೇಕು. 2ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ‘ಗ್ಯಾರಂಟಿ ಪ್ರಶ್ನೆ’ ಇದಾಗಿದೆ.

*4 ಅಂಕಕ್ಕೆ ಪದ್ಯವನ್ನು ಕೇಳಲಾಗುತ್ತದೆ. ಕಂಠಪಾಠ ಪದ್ಯವಾದ ‘ಕೋಶಿಶ್ ಕರ್ನೇವಾಲೋಂಕಿ ಕಭೀ ಹಾರ್ ನಹಿ ಹೋತಿ’ ಪದ್ಯದ ಕೊನೆಯ 6 ಸಾಲುಗಳನ್ನು ಕಡ್ಡಾಯವಾಗಿ ಕೇಳಲಾಗುತ್ತದೆ. ಆ ಸಾಲುಗಳನ್ನು ಕಂಠಪಾಠ ಮಾಡಿಕೊಳ್ಳುವುದರಿಂದ ಉತ್ತರ ಬರೆಯಬಹುದು.

*ಗದ್ಯಾಂಶವನ್ನು ಓದಿ ಉತ್ತರಿಸಿ ಎಂದು 4 ಅಂಕಗಳಿಗೆ ಪ್ರಶ್ನೆ ಕೇಳಲಾಗುತ್ತದೆ. ಅಲ್ಲಿ ನೀಡಲಾಗುವ ಗದ್ಯಾಂಶವನ್ನು ಗಮನಿವಿಟ್ಟು ಓದಿಕೊಂಡು, ಅಲ್ಲಿ ನೀಡಲಾಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು.

*ನಿಬಂಧ ತಯಾರಿಗಾಗಿ ಪಠ್ಯದ ‘ಕರ್ನಾಟಕ ಸಂಪದಾ’ ಮತ್ತು ‘ಇಂಟರ್ನೆಟ್ ಕ್ರಾಂತಿ’ ಇವುಗಳನ್ನು ಓದಿಕೊಳ್ಳಬೇಕು. ಇದರಿಂದ ಪ್ರಶ್ನೆ ಬಂದರೆ ಉತ್ತರ ಬರೆಯಬಹುದು ಅಥವಾ ಪ್ರಬಂಧ ಬರೆಯುವಂತೆ ಕೇಳಿದರೂ ಬರೆಯಬಹುದಾಗಿದೆ.

3 ಅಂಕದ ಪ್ರಶ್ನೆಗಳು: ಇದರಲ್ಲಿ 9 ಪ್ರಶ್ನೆಗಳು ಇರುತ್ತವೆ. ‘ತುಳಸಿ ಕೆ ದೋಹೆ’ ದೋಹಾದಿಂದ ಭಾವಾರ್ಥ ಬಂದೇ ಬರುತ್ತದೆ. 3 ಹಾಗೂ 4ನೇ ದೋಹಾ ಕೊಟ್ಟರೆ ಸರಳವಾಗಿರುತ್ತವೆ. 1, 2 ಹಾಗೂ 5ನೇ ದೋಹೆಗೆ ಸಂಬಂಧಿಸಿದಂತೆ ಅಭ್ಯಾಸದ ಪ್ರಶ್ನೆಗಳನ್ನು ಕಲಿತಿದ್ದರೆ ಪ್ರಶ್ನೆಗೂ ಉತ್ತರಿಸಬಹುದು; ಭಾವಾರ್ಥ ಕೇಳಿದರೂ ಸರಳವಾಗಿ ಬರೆಯಬಹುದು.

*ಅನುವಾದ–3 ಅಂಕದ ಪ್ರಶ್ನೆಯಾಗಿರುತ್ತದೆ. ಅದರಲ್ಲಿ ಸಾಮಾನ್ಯವಾಗಿ ಹೆಚ್ಚು ಸಂಸ್ಕೃತ ಶಬ್ದಗಳನ್ನೇ ಕೊಟ್ಟಿರಲಾಗುತ್ತದೆ. 2–3 ಬಾರಿ ಓದಿ ಅಭ್ಯಾಸ ಮಾಡಿದ್ದರೆ ಸುಲಭವಾಗಿ 3 ಅಂಕ ಗಳಿಸಬಹುದು.

*‘ಕರ್ನಾಟಕ ಸಂಪದಾ’ ಪಾಠವನ್ನು ಚೆನ್ನಾಗಿ ಓದಿಕೊಂಡರೆ 4 ಅಥವಾ 3 ಅಂಕದ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರ ಬರೆಯಬಹುದು. ಇದಕ್ಕೆ ಸಂಬಂಧಿಸಿದ ಪ್ರಶ್ನೆ ಬಂದೇ ಬರುತ್ತದೆ.

*ದೀರ್ಘ ಉತ್ತರ ವಿಭಾಗದಲ್ಲಿ ಕೇಳುವ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಿ ‘ಗಿಲ್ಲು’, ‘ಬಸಂತ ಕೀ ಸಚ್ಚಾಯಿ’, ‘ಕರ್ನಾಟಕ ಸಂಪದಾ’ ಪಾಠಗಳ ತಯಾರಿ ಮಾಡಿಕೊಳ್ಳಬೇಕು.

*ಐದು ಪದ್ಯಗಳಲ್ಲಿನ ಅಭ್ಯಾಸದ ಪ್ರಶ್ನೆಗಳನ್ನು ಕಲಿತುಕೊಂಡಿದ್ದರೆ 20 ಅಂಕಗಳನ್ನು ಸುಲಭವಾಗಿ ಗಳಿಸಬಹುದು.

*ತಲಾ ಒಂದು ಅಂಕದ 4 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸರಳ–ನೇರ ಪ್ರಶ್ನೆಗಳಾಗಿರುತ್ತವೆ. ಪೂರ್ಣ ವಾಕ್ಯದಲ್ಲಿ ಉತ್ತರಿಸಬೇಕು. ಅನುರೂಪತಾ ಪ್ರಶ್ನೆಗಳ ವಿಭಾಗದಲ್ಲಿ ಪದಗಳ ಸಹಸಂಬಂಧ ಜೋಡಿಸಬೇಕು.
ತಲಾ 1 ಅಂಕದ 4 ಪ್ರಶ್ನೆಗಳಿರುತ್ತವೆ.

*2 ಪ್ರಶ್ನೆಗಳು ಪೂರಕ ವಾಚನ ಪಾಠಗಳಾದ ‘ಶನಿ ಸಬಸೆ ಸುಂದರ್ ಗ್ರಹ’ ಮತ್ತು ‘ಸತ್ಯ ಕೀ ಮಹಿಮಾ’
ಪಾಠ ಹಾಗೂ ‘ನಾಗರಿಕೋಂಕೆ ಕರ್ತವ್ಯ್’ ಇವುಗಳಲ್ಲಿ ಒಟ್ಟು 4 ಪ್ರಶ್ನೆಗಳು ಬರುತ್ತವೆ. ಅದರಲ್ಲಿ 2ಕ್ಕೆ ಉತ್ತರಿಸಿದರೆ 4 ಅಂಕ ಗಳಿಸಬಹುದು.

*2 ಅಂಕಗಳಿಗೆ 8 ಪ್ರಶ್ನೆಗಳನ್ನು ಪದ್ಯ ಹಾಗೂ ಗದ್ಯದಿಂದ ಕೇಳಲಾಗುತ್ತದೆ.

*ವಸ್ತುನಿಷ್ಠ ಪ್ರಶ್ನೆಗಳು 8 ಇರುತ್ತವೆ. ವ್ಯಾಕರಣ ಭಾಗದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವೆಲ್ಲವೂ ತಲಾ ಒಂದು ಅಂಕಗಳವು. ವಿಲೋಮ, ವಚನ, ಲಿಂಗ ಸಮಾನಾರ್ಥಕ, ಪ್ರೇರಣಾರ್ಥಕ, ಮುಹಾವರೆ, ಕಾರಕ, ವಿರಾಮ ಚಿಹ್ನೆಗಳು, ಸಂಧಿ, ಸಮಾಸ ಇತ್ಯಾದಿ ವ್ಯಾಕರಣ ಅಂಶಗಳ ಮೇಲೆ ಪ್ರಶ್ನೆಗಳಿಗೆ ನಾಲ್ಕು ಉತ್ತರ ಕೊಡಲಾಗುತ್ತದೆ (ಎಂಸಿಕ್ಯೂ) ಅದರಲ್ಲಿ ಸರಿಯಾದ ಉತ್ತರ ಆರಿಸಿ ಬರೆಯಬೇಕು. ಪುಸ್ತಕದ ಕೊನೆಯಲ್ಲಿ ಕೊಡಲಾಗಿರುವ ವ್ಯಾಕರಣಾಂಶಗಳನ್ನು ಅಭ್ಯಾಸ ಮಾಡಿದರೆ ಅನುಕೂಲ.

*ತುಂಬಾ ದೊಡ್ಡ ವಾಕ್ಯಗಳನ್ನು ಚಿಕ್ಕ ಚಿಕ್ಕ ವಾಕ್ಯಗಳನ್ನಾಗಿ ಮಾಡಿಕೊಂಡರೆ ಸುಲಭವಾಗಿ ಕಲಿಯಬಹುದು.

*ಹಳೆಯ ಪ್ರಶ್ನೆಪತ್ರಿಕೆಗಳು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು.

*ಪಾಠವನ್ನು ಓದಿ ಅರ್ಥ ಮಾಡಿಕೊಂಡು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಅದು ನಮ್ಮ ಮಾತೃಭಾಷೆ ಅಲ್ಲವಾದ್ದರಿಂದ ಹೆಚ್ಚು ಅಭ್ಯಾಸ ಅಗತ್ಯ.

ನಿರೂಪಣೆ: ಎಂ. ಮಹೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.