ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಬಹುಆಯ್ಕೆಯ ಪ್ರಶ್ನೋತ್ತರಗಳು

Published : 18 ಸೆಪ್ಟೆಂಬರ್ 2024, 20:35 IST
Last Updated : 18 ಸೆಪ್ಟೆಂಬರ್ 2024, 20:35 IST
ಫಾಲೋ ಮಾಡಿ
Comments

UPSC, KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು

1. ಮಹಿಳೆಯರ ವಿರುದ್ಧ ಎಲ್ಲಾ ಸ್ವರೂಪದ ತಾರತಮ್ಯವನ್ನು ನಿಷೇಧಿಸುವ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಭಾರತ ಯಾವ ವರ್ಷದಲ್ಲಿ ಅನುಮೋದನೆ ನೀಡಿತು?

ಎ. 1993→ಬಿ. 1998

ಸಿ. 1996→ಡಿ. 2002

ಉತ್ತರ : ಎ

2. ಇಂಟರ್‌ಪೋಲ್‌ ಸಂಸ್ಥೆ ಮಾನವ ಕಳ್ಳ ಸಾಗಣೆಯ ಪ್ರಕರಣಗಳನ್ನು ಬಯಲಿಗೆಳೆಯಲು ಕೆಳಗಿನ ಯಾವ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತು?

ಎ. ಆಪರೇಷನ್ ಹ್ಯೂಮನ್ ಟ್ರಾಫಿಕಿಂಗ್.

ಬಿ. ಆಪರೇಷನ್ ಸ್ಟಾರ್ಮ್ ಮೇಕರ್ಸ್-2.

ಸಿ. ಆಪರೇಷನ್ ಕ್ವಿಕ್ ಆಕ್ಷನ್.

ಡಿ. ಆಪರೇಷನ್ ಅನಕೊಂಡ.

ಉತ್ತರ : ಬಿ

3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಮೌಂಟ್‌ ಎವರೆಸ್ಟ್‌ ಪರ್ವತವನ್ನು ನೇಪಾಳದಲ್ಲಿ ಸಾಗರಮಾತಾ ಮತ್ತು ಚೀನಾದಲ್ಲಿ ಚೊಮೊಲುಂಗ್ಮಾ ಅಥವಾ ಕ್ಯೊಮೊಲುಂಗ್ಮಾ ಎಂದು ಕರೆಯುವರು.
ಬಿ. ಸಿಯಾಚಿನ್‌ ಭಾರತದ ಅತ್ಯಂತ ಉದ್ದವಾದ ಮತ್ತು ದೊಡ್ಡದಾದ ಹಿಮನದಿಯಾಗಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಪ್ರತಿ ವರ್ಷ ಸೆಪ್ಟೆಂಬರ್ 9ರಂದು ಹಿಮಾಲಯ ದಿನವನ್ನು ಆಚರಿಸಲಾಗುತ್ತದೆ.

ಬಿ. 2024ರ ಹಿಮಾಲಯ ದಿನಾಚರಣೆಯ ವಸ್ತುವಿಷಯ ‘ಸುಸ್ಥಿರ ಹಿಮಾಲಯದ ರಕ್ಷಣೆ’.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಈಗಿರುವ ಹಿಮಾಲಯ ಪರ್ವತ ಪ್ರದೇಶವು ಈ ಹಿಂದೆ ಟೆಥಿಸ್‌ ಸಮುದ್ರದ ತಳಭಾಗವಾಗಿತ್ತು ಎಂದು ನಂಬಲಾಗಿದೆ.

ಬಿ. ಹಿಮಾಲಯಗಳು ಗೊಂಡ್ವಾನ ಮತ್ತು ಅಂಗಾರ ಭೂ-ಭಾಗಗಳ ಭೂ-ಅಂತರ್ಜನಿತ ಶಕ್ತಿಗಳ ಕಾರ್ಯ ಚಟುವಟಿಕೆಯಿಂದ (ಮಡಿಕೆಗಳು ಮತ್ತು ಸ್ಥರಭಂಗ) ನಿರ್ಮಿತವಾಗಿವೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

6. ವೈರಾಣುವಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ವೈರಸ್‌ಗಳು ರೋಗಕಾರಕಗಳಾಗಿದ್ದು ಪ್ರಾಣಿಗಳು, ಸಸ್ಯಗಳು, ಪಾಚಿಗಳು, ಶಿಲೀಂಧ್ರಗಳಲ್ಲಿ ರೋಗವನ್ನು ಉಂಟುಮಾಡುತ್ತವೆ. ಆದರೆ ಬ್ಯಾಕ್ಟೀರಿಯಾಗಳಲ್ಲಿ ರೋಗವನ್ನು ಉಂಟುಮಾಡುವುದಿಲ್ಲ.

ಬಿ. ಸಂಪೂರ್ಣವಾಗಿ ತಯಾರಾಗಿರುವ ಪ್ರಬುದ್ಧ ವೈರಸ್ ಕಣಗಳನ್ನು ವಿರಿಯಾನ್ (Virion) ಎನ್ನುತ್ತಾರೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಬಿ

7 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಮಾನವರಲ್ಲಿ ಬರುವ ವೈರಸ್ ರೋಗಗಳೆಂದರೆ ಶೀತ, ದಡಾರ, ಮಂಗನಬಾವು , ರೇಬಿಸ್, ಕಾಮಾಲೆ , ಹರ್ಪಿಸ್, ಡೆಂಗಿ ಮತ್ತು ಕೋವಿಡ್‌. 
ಬಿ. ಸಸ್ಯಗಳಲ್ಲಿ ಬರುವ ವೈರಸ್ ರೋಗಗಳೆಂದರೆ ತಂಬಾಕಿನ ಶಬಲಚಿತ್ರ (Mosaic), ಆಲೂಗಡ್ಡೆಯ ಎಲೆ ಸುರುಳಿ (Leaf roll) ಮತ್ತು ಬೆಂಡೆ ಗಿಡದ ಹಳದಿ ನರ ಶಬಲಚಿತ್ರ (Yellow vein mosaic) ರೋಗ ಆಗಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

8. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಭಾರತದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಡೆಂಗಿ ಆಲ್‌ ಲಸಿಕೆಯ 3ನೇ ಹಂತದ ಕ್ಲಿನಿಕಲ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಬಿ. 1965ರಲ್ಲಿ ಮಹಾರಾಷ್ಟ್ರದ ಚಂಡಿಪುರದಲ್ಲಿ ಮೊದಲ ಬಾರಿಗೆ ಚಂಡಿಪುರ ವೆಸಿಕುಲೋ ವೈರಸ್‌ ಅನ್ನು ಪತ್ತೆ ಹಚ್ಚಲಾಯಿತು.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT