ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾಧನ್‌‘ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ

Published 9 ಜುಲೈ 2023, 23:23 IST
Last Updated 9 ಜುಲೈ 2023, 23:23 IST
ಅಕ್ಷರ ಗಾತ್ರ

ಸರೋಜಿನಿ ದಾಮೋದರನ್‌ ಪ್ರತಿಷ್ಠಾನದ ವತಿಯಿಂದ 2023ನೇ ಸಾಲಿನ ‘ವಿದ್ಯಾಧನ್‌‘ ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಪ್ರತಿಷ್ಠಾನವು ಕರ್ನಾಟಕ , ಕೇರಳ, ತಮಿಳುನಾಡು, ಪುದುಚೇರಿ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ದೆಹಲಿ, ಲಡಾಖ್, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹೀಗಿವೆ:  ಕುಟುಂಬದ ವಾರ್ಷಿಕ ಆದಾಯ ₹ 2 ಲಕ್ಷಕ್ಕಿಂತ ಕಡಿಮೆ ಇರಬೇಕು. 2023ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾಗಿರಬೇಕು. 90ಕ್ಕಿಂತ ಅಧಿಕ ಅಥವಾ  9CGPA (ಶೇ 75 ಅಥವಾ 7CGPA ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು) ಅರ್ಜಿ ಸಲ್ಲಿಸಲು ಅರ್ಹರು. 

ಅವಶ್ಯವಿರುವ ದಾಖಲೆಗಳು: ಆದಾಯ ಪ್ರಮಾಣ ಪತ್ರ, 10ನೇ ತರಗತಿಯ ಅಂಕಪಟ್ಟಿ, ವಿದ್ಯಾರ್ಥಿಯ ಭಾವಚಿತ್ರ, ವಿದ್ಯಾರ್ಥಿಯ ಹೆಸರಿನ ಇ–ಮೇಲ್ ಐಡಿ. 

ವಿದ್ಯಾರ್ಥಿಗಳು ಉಚಿತವಾಗಿ ವಿದ್ಯಾಧನ್‌ ವೆಬ್‌ಸೈಟ್‌ www.vidyadhan.org ಜುಲೈ 31ರ ಒಳಗೆ ಅರ್ಜಿ ಸಲ್ಲಿಸಬಹುದು. 

–ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  9663517131

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT