ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗಿದು ಗೊತ್ತೆ?: ವೈಟ್‌ಹೌಸ್ ಏಕೆ ಬೆಳ್ಳಗಿದೆ?

Last Updated 15 ಜೂನ್ 2022, 20:30 IST
ಅಕ್ಷರ ಗಾತ್ರ

ವೈಟ್‌ಹೌಸ್ ಏಕೆ ಬೆಳ್ಳಗಿದೆ?

ವೈಟ್‌ಹೌಸ್‌– ಇದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ವಾಷಿಂಗ್‌ಟನ್‌ನಲ್ಲಿದೆ. ಈ ಕಟ್ಟಡವನ್ನು ಕಟ್ಟಿದಾಗ ಇದು ಬೆಳ್ಳಗಿರಲಿಲ್ಲ. ಇದನ್ನು ವೈಟ್ ಹೌಸ್ ಎಂದು ಕರೆಯುತ್ತಿರಲಿಲ್ಲ.

ಈ ಕಟ್ಟಡದ ವಿನ್ಯಾಸವನ್ನು ಐರ‍್ಲೆಂಡ್‌ನ ಜೇಮ್ಸ್ ಹೋಬನ್(James Hoban) ಎಂಬ ಕಟ್ಟಡ ವಿನ್ಯಾಸಕಾರ ರಚಿಸಿದ್ದಾರೆ. 1792ರಲ್ಲಿ ಅಕ್ಟೋಬರ್ 13ರಂದು ಈ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. 1800ರಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿತು. ಈ ಕಟ್ಟಡವನ್ನು ಮೊದಲು ಬೂದು ಬಣ್ಣದ ಕಲ್ಲಿನಲ್ಲಿ ಕಟ್ಟಲಾಗಿತ್ತು. ಆಗಿನಿಂದಲೂ ಇದು ಅಮೆರಿಕ ಅಧ್ಯಕ್ಷರ ನಿವಾಸವಾಗಿದೆ. 1814 ರ ಆಗಸ್ಟ್ 24 ರಂದು, ಯುದ್ಧದಲ್ಲಿ ಬ್ರಿಟಿಷ್ ಸೈನಿಕರು ಈ ಕಟ್ಟಡವನ್ನು ಸುಟ್ಟು ಹಾಕಿದರು. ಈ ಕಟ್ಟಡದ ಸ್ವಲ್ಪ ಭಾಗ ಮಾತ್ರ ಹಾಗೆಯೇ ಉಳಿದಿತ್ತು. ಅನಂತರ ಈ ಕಟ್ಟಡವನ್ನು ಪುನರ್‌ನಿರ್ಮಿಸಲಾಯಿತು. 1817ರಲ್ಲಿ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಬೆಂಕಿ ಹಾಗೂ ಮಸಿಯ ಕಲೆಗಳನ್ನು ತೆಗೆದುಹಾಕುವುದಕ್ಕಾಗಿ, ಈ ಕಟ್ಟಡದ ಗೋಡೆಗಳಿಗೆ ಬಿಳಿ ಬಣ್ಣವನ್ನು ಹಚ್ಚಲಾಯಿತು. ಆಗಿನಿಂದ ಈ ಕಟ್ಟಡಕ್ಕೆ ‘ವೈಟ್ ಹೌಸ್’ ಎಂದು ಹೆಸರು ಬಂತು. ಆದರೆ 1902ರ ವರೆಗೆ ಈ ಹೆಸರು ಅಧಿಕೃತವಾಗಿ ಮನ್ನಣೆ ಪಡೆದಿರಲಿಲ್ಲ. ಅಧ್ಯಕ್ಷ ಥಿಯೋಡರ್ ರೂಸ್‌ವೆಲ್ಟ್, ‘ವೈಟ್ ಹೌಸ್’ ಎಂಬ ಹೆಸರಿಗೆ ಅಧಿಕೃತವಾಗಿ ಅನುಮೋದನೆ ನೀಡಿದರು.

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT