61) ಈಥರ್ ಗಳ ಬಗ್ಗೆ ಬರೆಯಿರಿ

ಉತ್ತರ:- ಈಥರ್‌ಗಳನ್ನು i) ಆಲ್ಕೋಹಾಲ್‌ಗಳ ನಿರ್ಜಲೀಕರಣದಿಂದ ಮತ್ತು ii)ವಿಲಿಯಮ್‌ಸನ್ ಸಂಶ್ಲೇಷಣೆಯಿಂದ ತಯಾರಿಸಬಹುದು. ಈಥರ್‌ಗಳ ಕುದಿಯುವ ಬಿಂದುಗಳು ಆಲ್ಕೇನ್‌ಗಳಂತೆ ಹೋಲುತ್ತವೆ ಹಾಗೆಯೇ ಅವುಗಳ ಕರುಗುವಿಕೆ ಸಮಾನ ಅಣು ತೂಕ ಹೊಂದಿರುವ ಆಲ್ಕೋಹಾಲ್‌ಗಳಿಗೆ ಹೋಲಿಕೆಯಾಗುತ್ತದೆ. ಈಥರ್‌ಗಳಲ್ಲಿನ C–Oಬಂಧವನ್ನು ಹೈಡ್ರೋಜನ್ ಹ್ಯಾಲೈಡ್‌ಗಳ ಮೂಲಕ ಸೀಳಬಹುದು. ಇಲೆಕ್ಟ್ರಾನ್ ಆಕಾಂಕ್ಷಿಯ ಆದೇಶ್ಯ ಆಲ್ಕಾಕ್ಸಿ ಗುಂಪು ಆರೋಮ್ಯಾಟಿಕ್ ಉಂಗುರವನ್ನು ಸಕ್ರಿಯಗೊಳಿಸುತ್ತದೆ ಮತ್ತು ಒಳ ಬರುವ ಗುಂಪನ್ನು ಅರ್ಥೋ ಮತ್ತು ಪ್ಯಾರಾ ಸ್ಥಾನಗಳಿಗೆ ನಿರ್ದೇಶಿಸುತ್ತದೆ. ಈಥರ್‌ಗಳ ವರ್ಗೀಕರಣ ಆಮ್ಲಜನಕದ ಪರಮಾಣುಗೆ ಜೋಡಿಸಲಾದ ಗುಂಪುಗಳ ಆಧಾರದ ಮೇಲೆ ಮಾಡಲಾಗುತ್ತದೆ.

62) ಆಲ್ಡಿಹೈಡ್ ಮತ್ತು ಕೀಟೋನ್‌ಗಳ ಉಪಯೋಗವನ್ನು ಬರೆಯಿರಿ

ಉತ್ತರ:- ರಾಸಾಯನಿಕ ಉದ್ಯಮಲ್ಲಿ ಆಲ್ಡಿಹೈಡ್ ಮತ್ತು ಕೀಟೋನ್‌ಗಳನ್ನು ದ್ರಾವಕಗಳಾಗಿ, ಆರಂಭಿಕ ವಸ್ತುಗಳಾಗಿ, ಮತ್ತು ಇತರೆ ಉತ್ಪನ್ನಗಳ ಸಂಶ್ಲೇಷಣೆಯಲ್ಲಿ, ಹಾಗೂ ಕಾರಕಗಳಾಗಿ ಬಳಸುವರು. ಪರಿಚಿತ ಫಾರ್ಮಲಿನ್(40%) ದ್ರಾವಣ ಫಾರ್ಮಾಲ್ಡಿಹೈಡ್ ಆಗಿದ್ದು, ಇದನ್ನು ಜೈವಿಕ ಮಾದರಿಗಳನ್ನು ಸಂರಕ್ಷಿಸಲು, ಬೇಕಲೈಟ್(ಫೀನಾಲ್-ಫಾರ್ಮಾಲ್ಡಿಹೈಡ್ ರಾಳ), ಯೂರಿಯ- ಫಾರ್ಮಾಲ್ಡಿಹೈಡ್ ಅಂಟುಗಳು ಮತ್ತು ಪಾಲಿಮರೀಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವರು. ಅಸಿಟಾಲ್ಡಿಹೈಡನ್ನು ಪ್ರಮುಖವಾಗಿ ಅಸಿಟಿಕ್ ಆಮ್ಲ, ಈಥೈಲ್ ಅಸಿಟೇಟ್, ವಿನೈಲ್ ಅಸಿಟೇಟ್, ಪಾಲಿಮರ್ ಮತ್ತು ಔಷಧಿಗಳ ತಯಾರಿಕೆಯಲ್ಲಿ ಪ್ರಾರಂಭಿಕ ವಸ್ತುವಾಗಿ ಬಳಸುವರು.

ಬೆಂಲ್ಡಿಹೈಡನ್ನು ಸುಗಂಧ ದ್ರವ್ಯ ಮತ್ತು ಬಣ್ಣಗಳ ಉದ್ಯಮದಲ್ಲಿ ಬಳಸುವರು. ಅಸಿಟೋನ್ ಹಾಗೂ ಈಥೈಲ್ ಮೀಥೈಲ್ ಕೀಟೋನ್‌ಗಳು ಸಾಮಾನ್ಯ ಕೈಗಾರಿಕಾ ದ್ರಾವಕಗಳಾಗಿವೆ. ಅನೇಕ ಆಲ್ಡಿಹೈಡ್ ಮತ್ತು ಕೀಟೋನ್‌ಗಳು ಉದಾಹರಣೆಗೆ, ಬ್ಯುಟಿರಾಲ್ಡಿಹೈಡ್, ವ್ಯಾನಿಲಿನ್,ಅಸಿಟೋಫೀನೋನ್, ಕರ್ಪೂರ ಮುಂತಾದುವುಗಳು ವಾಸನೆ ಮತ್ತು ಸ್ವಾದಕ್ಕೆ ಚಿರಪರಿಚಿತವಾಗಿವೆ. ಸಮಾನ ಅಣುತೂಕವಿರುವ ಇತರೆ ವರ್ಗಗಳ ಸಂಯುಕ್ತಗಳಾದ ಹೈಡ್ರೋಕಾರ್ಬನ್‌ಗಳು. ಈಥರ್‌ಗಳು ಮತ್ತು ಹ್ಯಾಲೋಆರೀನ್‌ಗಳಿಗಿಂತ ಹೆಚ್ಚು ಕುದಿಯುವ ಬಿಂದು ಇರುತ್ತದೆ.

ಆಲ್ಕೋಹಾಲ್‌ಗಳನ್ನು 1) ಆಲ್ಕೀನ್‌ನ ಜಲೀಕರಣದಿಂದ i)ಆಮ್ಲದ ಉಪಸ್ಥಿತಿಯಲ್ಲಿ ಮತ್ತು ii)ಹೈಡ್ರೋಬೋರೇಷನ್ ಉತ್ಕರ್ಷಣೆಯಿಂದ 2)ಕಾರ್ಬೋನೈಲ್ ಸಂಯುಕ್ತಗಳಿಂದ i) ವೇಗವರ್ದಕ ಅಪಕರ್ಷಣೆ ಮತ್ತು ii) ಗ್ರೀಗ್‌ನಾರ್ಡ್ ಕಾರಕಗಳಿಂದ ತಯಾರಿಸಬಹುದು.

l ಫೀನಾಲ್‌ಗಳನ್ನು 1) –ಔಊ ಗುಂಪಿನ ಪ್ರತಿಸ್ಥಾಪನ ಮೂಲಕ i) ಹ್ಯಾಲೋಆರೀನ್‌ಗಳಲ್ಲಿ ಹ್ಯಾಲೋಜನ್ ಪರಮಾಣು ಮತ್ತು ii) ಆರೈಲ್ ಸಲ್ಪೋನಿಕ್ ಆಮ್ಲದಲ್ಲಿನ ಸಲ್ಪೋನಿಕ್ ಆಮ್ಲದ ಗುಂಪು ಪ್ರತಿಸ್ಥಾಪನೆ ಮೂಲಕ 2) ಡೈ ಆಜೋನಿಯಮ್ ಲವಣದ ಜಲೀಯ ವಿಭಜನೆ 3) ಕ್ಯೂಮಿನ್ ಔದ್ಯೋಗಿಕ ಉತ್ಪಾದನೆಯಿಂದ ತಯಾರಿಸಬಹುದು.

l ಆಲ್ಕೋಹಾಲ್‌ಗಳು ಹೈಡ್ರೋಜನ್ ಹ್ಯಾಲೈಡ್‌ನ ಜೊತೆ ನ್ಯೂಕ್ಲೀಯಾಕಾಂಕ್ಷಿ ಆದೇಶ್ಯಯ ಮೂಲಕ ಆಲ್ಕೈಲ್ ಹ್ಯಾಲೈಡ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಆಲ್ಕೋಹಾಲ್‌ಗಳ ನಿರ್ಜಲೀಕರಣವು ಆಲ್ಕೀನ್‌ಗಳನ್ನು ನೀಡುತ್ತವೆ. ಮಂದ ಉತ್ಕರ್ಷಣೆಕಾರಕಗಳೊಂದಿಗೆ ಪ್ರಾಥಮಿಕ ಆಲ್ಕೋಹಾಲ್‌ಗಳು ಉತ್ಕರ್ಷಣೆಗೊಂಡು ಆಲ್ಡಿಹೈಡ್‌ಗಳನ್ನು ನೀಡುತ್ತವೆ. ಮತ್ತು ಪ್ರಬಲ ಉತ್ಕರ್ಷಣಕಾರಕಗಳೊಂದಿಗೆ ಕಾರ್ಬಾಕ್ಸ್ಸಿಲಿಕ್ ಆಮ್ಲಗಳನ್ನು ನೀಡುತ್ತವೆ. ಹಾಗೆಯೆ ದ್ವಿತೀಯಕ ಆಲ್ಕೋಹಾಲ್‌ಗಳು ಕೀಟೋನ್‌ಗಳನ್ನು ನೀಡುತ್ತವೆ. ತೃತೀಯಕ ಆಲ್ಕೋಹಾಲ್‌ಗಳು ಉತ್ಕರ್ಷಣೆಯನ್ನು ನಿರೋಧಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.