ಗುರುವಾರ , ಫೆಬ್ರವರಿ 27, 2020
19 °C

ಕಲ್ಯಾಣ ಕರ್ನಾಟಕ: 61 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲ್ಯಾಣ ಕರ್ನಾಟಕ (ಹೈದರಾಬಾದ್‌ ಕರ್ನಾಟಕ) ಭಾಗದಲ್ಲಿ ಖಾಲಿ ಇರುವ 61 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಈ ಹುದ್ದೆಗಳು ಗ್ರೂಪ್‌ ಎ ಶ್ರೇಣಿಯ ಹುದ್ದೆಗಳಾಗಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. 

ಹುದ್ದೆಗಳ ಸಂಖ್ಯೆ : 61

ಮೀಸಲಾತಿ: ಸಾಮಾನ್ಯ–11, ಪ.ಜಾತಿ–15, ಪ.ಪಂಗಡ–04, ಹಿಂದುಳಿದ ವರ್ಗ–31

ವಿದ್ಯಾರ್ಹತೆ: ಅಂಗೀಕೃತ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಪಶು ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.50 ರಷ್ಟು ಅಂಕಗಳೊಂದಿಗೆ ಬಿ.ವಿ.ಎಸ್‌.ಸಿ ಅಥವಾ ಬಿ.ವಿ.ಎಸ್‌.ಸಿ ಮತ್ತು ಎ.ಹೆಚ್ ಪದವಿ ಹೊಂದಿರಬೇಕು ಹಾಗೂ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು. ಈ ಸಂಬಂಧದ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನಿಡಿರುವ ಅಧಿಸೂಚನೆ ಲಿಂಕ್‌ ನೋಡುವುದು. 

ವೇತನ ಶ್ರೇಣಿ : ₹ 52,650 ರಿಂದ ₹97,100

ವಯಸ್ಸಿನ ಗರಿಷ್ಠ ಮಿತಿ

ಸಾಮಾನ್ಯ ಅಭ್ಯರ್ಥಿಗಳು: 35 ವರ್ಷಗಳು

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು: 38 ವರ್ಷಗಳು

ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು: 40 ವರ್ಷಗಳು

ಅರ್ಜಿ ಶುಲ್ಕ 

* ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು: ₹520

* ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳು: ₹250

ಅರ್ಜಿ ಸಲ್ಲಿಕೆ ಮತ್ತು ನೇಮಕಾತಿ: ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ತಯಾರಿಸಿ ಹಾಗೂ ಮೀಸಲಾತಿಯನ್ನು ಪರಿಗಣಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 

ಅರ್ಜಿ ಸಲ್ಲಿಕೆ ಕಡೆ ದಿನಾಂಕ: 29-02-2020

ಅಧಿಸೂಚನೆ ಲಿಂಕ್‌: https://bit.ly/3bbSzzG

ವೆಬ್‌ಸೈಟ್‌: http://www.ahvs.kar.nic.in/kn-home.asp

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು