ಬೆಂಗಳೂರು:ಸರ್ಕಾರದ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿಖಾಲಿ ಇರುವ ಗ್ರೂಪ್ ಎ ಶ್ರೇಣಿಯ48 ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗೆಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದ್ದುನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 48
ಮೀಸಲಾತಿ: ಸಾಮಾನ್ಯ–24, ಪ.ಜಾತಿ–7, ಪ.ಪಂಗಡ–02, ಹಿಂದುಳಿದ ವರ್ಗ–15
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂ.ಬಿ.ಎ ಅಥವಾ ಐ.ಸಿ.ಡಬ್ಯೂ.ಎ ವಿದ್ಯಾರ್ಹತೆ ಹೊಂದಿರಬೇಕು.
ವೇತನ ಶ್ರೇಣಿ: ₹52,650(ಮೂಲ ವೇತನ) ರಿಂದ 97100 ಶ್ರೇಣಿಯಲ್ಲಿ ಸರ್ಕಾರಿ ನಿಯಮಗಳ ಅನುಸಾರ ವೇತನ ನೀಡಲಾಗುವುದು.
ವಯಸ್ಸು
*ಕನಿಷ್ಠ 21 ವರ್ಷಗಳಾಗಿರಬೇಕು.
ವಯೋಮಿತಿ ಸಡಿಲಿಕೆ
* ಸಾಮಾನ್ಯವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ
* ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 38 ವರ್ಷ
* ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 40 ವರ್ಷ
ಅರ್ಜಿ ಶುಲ್ಕ
- ಸಾಮಾನ್ಯ ವರ್ಗದ ಅಭ್ಯರ್ಥಿಗಳು–₹ 600
- ಹಿಂದುಳಿದ ವರ್ಗದ ಅಭ್ಯರ್ಥಿಗಳು–₹ 300
- ಮಾಜಿ ಸೈನಿಕರು–₹ 50
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಈ ಅಭ್ಯರ್ಥಿಗಳುಪ್ರೋಸೆಸಿಂಗ್ ಚಾರ್ಜ್ ₹ 35 ಪಾವತಿಸಬೇಕು.ಅರ್ಜಿ ಶುಲ್ಕ ಪಾತಿಸುವ ಅಭ್ಯರ್ಥಿಗಳು ಸಹ ಹೆಚ್ಚುವರಿಯಾಗಿಪ್ರೋಸೆಸಿಂಗ್ ಚಾರ್ಜ್ ₹ 35 ಪಾವತಿಸಬೇಕು.
ನೇಮಕಾತಿ
ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯು ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ
* ಲೋಕಸೇವಾ ಆಯೋಗದ ವೆಬ್ಸೈಟ್www.kpsc.kar.nic.inಲಾಗಿನ್ ಆಗಿ ಅನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು.
* ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ತುಂಬಬೇಕು
* ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.
ಮುಖ್ಯ ಮಾಹಿತಿ
*ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :06-03-2020
*ಪೂರ್ವಭಾವಿ ಪರೀಕ್ಷಾ ದಿನಾಂಕ : 24-05-2020
*ಮುಖ್ಯ ಪರೀಕ್ಷಾ ದಿನಾಂಕ : 2020 ರ ಆಗಸ್ಟ್/ ಸೆಪ್ಟೆಂಬರ್
* ಅಧಿಸೂಚನೆ ಲಿಂಕ್:https://bit.ly/377vKd7
* ಕೆಪಿಎಸ್ಸಿ ವೆಬ್ಸೈಟ್:http://www.kpsc.kar.nic.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.