ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಶಿಕ್ಷಣದ ವಿಚಾರದಲ್ಲಿ ವಿದ್ಯಾರ್ಥಿಗಳು ಪಾಲಿಸಲೇಬೇಕಾದ ಯುಜಿಸಿಯ ಸಲಹೆಗಳಿವು...

Last Updated 3 ಸೆಪ್ಟೆಂಬರ್ 2020, 10:29 IST
ಅಕ್ಷರ ಗಾತ್ರ

ನವದೆಹಲಿ: ಶೈಕ್ಷಣಿಕ ಅವಧಿಗೆ ಸಂಸ್ಥೆಯು ಬದ್ಧವಾಗಿದೆ, ಖಾಸಗಿ ಸಂಸ್ಥೆಗಳ ಜೊತೆಗೆ ಹಣಕಾಸು ಒಪ್ಪಂದ ಇಲ್ಲ ಹಾಗೂ ಸಂಸ್ಥೆಯ ಪರಿಮಿತಿಯಲ್ಲೇ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಖಾತರಿ....

-ದೂರ ಶಿಕ್ಷಣ ಕಾರ್ಯಕ್ರಮಗಳ ನೋಂದಣಿಗೆ ಮುನ್ನ ಈ ಅಂಶಗಳನ್ನು ವಿದ್ಯಾರ್ಥಿಗಳು ಪ್ರಮುಖವಾಗಿ ಶಿಕ್ಷಣ ಸಂಸ್ಥೆಗಳಿಂದ ಖಾತರಿ ಪಡಿಸಿಕೊಳ್ಳಬೇಕುಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಲಹೆ ನೀಡಿದೆ.

ಕನಿಷ್ಠ ಅವಧಿ, ನೋಂದಣಿ ಮಾಡಿಕೊಳ್ಳುತ್ತಿರುವ ಕೋರ್ಸ್‌ಗೆ ಯುಜಿಸಿ ಅಧಿಸೂಚನೆ ಅನುಸಾರ ವಿದ್ಯಾರ್ಹತೆ ನಿಗದಿಪಡಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಿಕೊಳ್ಳಬೇಕು ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ.

ಅಲ್ಲದೆ, ಪ್ರವೇಶ ಪ್ರಕ್ರಿಯೆ, ಕೌನ್ಸೆಲಿಂಗ್ ತರಗತಿಗಳು, ಸಂಪರ್ಕ ತರಗತಿಗಳು, ಪರೀಕ್ಷೆ ಈ ಎಲ್ಲವು ನಿಗದಿತ ಸಂಸ್ಥೆಯ ಪರಿಮಿತಿಯಲ್ಲಿಯೇ ನಡೆಯುತ್ತಿವೆ ಎಂಬುದನ್ನೂ ವಿದ್ಯಾರ್ಥಿಗಳು ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಯಾವುದೇ ವಿಶ್ವವಿದ್ಯಾಲಯ ಅದು ಕೇಂದ್ರ, ರಾಜ್ಯ ಅಥವಾ ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯವೇ ಇರಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು, ಕೋರ್ಸ್ ನಡೆಸಲು ಖಾಸಗಿ ಕೋಚಿಂಗ್ ಸಂಸ್ಥೆಗಳ ಜೊತೆಗೆ ಹಣಕಾಸು ಒಪ್ಪಂದಕ್ಕೆ ಬರುವಂತಿಲ್ಲ. ಇದು, ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್‌ ಶಿಕ್ಷಣ ಎಲ್ಲದಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಪಾರದರ್ಶಕ ಕ್ರಮದಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಘೋಷಿಸಿಕೊಳ್ಳುವ ಎಲ್ಲ ಅಂಶಗಳನ್ನು ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬೇಕು. ಯಾವುದೇ ಲೋಪಗಳನ್ನು ಗುರುತಿಸಿದರೆ ಅದನ್ನು ಯುಜಿಸಿ ಗಮನಕ್ಕೆ ತರಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಕೋವಿಡ್-19 ಪರಿಸ್ಥಿತಿಯಿಂದಾಗಿ ಶೈಕ್ಷಣಿಕ ಅವಧಿ ಪರಿಷ್ಕರಿಸಲು ಯುಜಿಸಿ ತೀರ್ಮಾನಿಸಿದೆ. ಇದು, ಸೆಪ್ಟೆಂಬರ್-ಅಕ್ಟೋಬರ್ 2020 ಮತ್ತು ಫೆಬ್ರುವರಿ-ಮಾರ್ಚ್ 2021ರಿಂದ ಅನ್ವಯವಾಗುವಂತೆ 12 ತಿಂಗಳು ಆಗಿರಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT