ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 30-31ರಂದು ಸಿಇಟಿ ಪರೀಕ್ಷೆ

Last Updated 13 ಮೇ 2020, 8:03 IST
ಅಕ್ಷರ ಗಾತ್ರ

ಬೆಂಗಳೂರು:ಜುಲೈ 30-31ರಂದು ಸಿಇಟಿ ಪರೀಕ್ಷೆ ನಡೆಯಲಿದೆ ಎಂದು ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸೆಪ್ಟೆಂಬರ್ ಮೊದಲ ವಾರದಿಂದ ಕಾಲೇಜುಗಳು ಆರಂಭವಾಗಬಹುದು ಎಂದು ಸಚಿವರು ಸುಳಿವು ನೀಡಿದರು.

ನೀಟ್, ಜೆಇಇ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಇದೀಗ ಸಿಇಟಿ ದಿನಾಂಕ ನಿಗದಿಪಡಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು, ಅದರ ಬಗ್ಗೆ ಶೀಘ್ರ ತಿಳಿಸಲಾಗುವುದು ಎಂದರು.

ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ‘ಗೆಟ್‌ಸೆಟ್‌ಗೊ’ ಆನ್‌ಲೈನ್ ಕೋರ್ಸ್‌ ಆರಂಭಿಸಿದೆ(www.getcetgo.in ಜಾಲತಾಣ).

ರಾಜ್ಯದಲ್ಲಿರುವಒಟ್ಟು 8000 ಮೆಡಿಕಲ್ ಮತ್ತು 62,000 ಎಂಜಿನಿಯರಿಂಗ್‌ ಸೀಟ್‌ಗಳಿಗಾಗಿ ಈ ವರ್ಷ ಸಿಇಟಿ ಪರೀಕ್ಷೆ ನಡೆಯಲಿದೆ.

‘ಗೆಟ್‌ಸೆಟ್‌ಗೊ’ ವೆಬ್‌ಸೈಟ್‌ಗೆ ಈವರೆಗೆ 1.65 ಲಕ್ಷ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. 76.91 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 55,130 ಮಂದಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. 2.45 ಲಕ್ಷ ಯುಟ್ಯೂಬ್‌ ವ್ಯೂಸ್‌ ದಾಖಲಾಗಿದೆ. 51,975 ವಿದ್ಯಾರ್ಥಿಗಳು ಟೆಸ್ಟ್‌ ಎದುರಿಸಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT