ಗುರುವಾರ , ಏಪ್ರಿಲ್ 2, 2020
19 °C

ಮಕ್ಕಳ ಸ್ಕೂಲ್‌ ಮನೆಯೇ ಅಲ್ವಾ?

ಯೋಗೇಶ್ ಮಾಸ್ಟರ್ Updated:

ಅಕ್ಷರ ಗಾತ್ರ : | |

Prajavani

‘ಕೊರೊನಾ ರಜೆ’ಯಿಂದ ಮಕ್ಕಳ ಶಾಲೆಗಳು ಕದ ಮುಚ್ಚಿದರೂ, ಕಲಿಕೆಯ ಪ್ರಕ್ರಿಯೆಗೆ ಮತ್ತಷ್ಟು ಅವಕಾಶ ತೆರೆದಿಟ್ಟಿದೆ. ಈ ರಜೆ ಮಕ್ಕಳಿಗೆ ಕುಳಿತು ಓದಿ ಹೇಳಲು ಅವಕಾಶ ಕಲ್ಪಿಸಿದೆ.

ಮನೆಯಲ್ಲಿರುವ ಮಕ್ಕಳ ಶಾಲೆಯ ಓದಿನ ಮಹತ್ವ ಹೆಚ್ಚಿಸಲು ಹಿರಿಯರು ಅವರೊಡನೆ ಕೂಡಿ ಓದಿ ಹೇಳುವುದು ಮತ್ತು ಅವರು ಓದುವುದನ್ನು ಕೇಳಿ ಪ್ರಶಂಸಿಸುವುದು ಅವರ ಕಲಿಕೆಗೆ ಇಂಬುಗೊಟ್ಟಂತೆ. ಒಟ್ಟೊಟ್ಟಿಗೆ ಕುಳಿತು ಓದುವ ಸರ್ಕಲ್ ಹುಟ್ಟಿಸುವುದು ಮಕ್ಕಳಿಗೂ ಖುಷಿ, ನಮಗೂ ಕ್ವಾಲಿಟಿ ಟೈಂ ಕೊಡುತ್ತಿರುವ ಸಮಾಧಾನ.

‘ಅಪ್ಪಾ, ಕೋಳಿಯನ್ನು ಕೂಗಿ ಕರೆದರೆ ಬರತ್ತೆ. ಮಾತಾಡಿದರೆ ಕೇಳಿಸಿಕೊಳ್ಳತ್ತೆ. ಓದಿದರೂ ಕೇಳಿಸಿಕೊಳ್ಳತ್ತಾ?’ ಎಂದು ಕೇಳುವ ಮಗಳಿಗೆ ಓದಿ ಹೇಳು ನೋಡೋಣ ಎಂದೆ.

ಕೋಳಿ ಇವಳು ಓದುವುದನ್ನು ಕೇಳುತ್ತದೋ ಇಲ್ಲವೋ. ಕೋಳಿಗೆ ಓದಿ ಹೇಳುವ ನೆಪದಲ್ಲಿ ಇವಳು ಓದುತ್ತಾಳೆ. ಓದಿದ್ದು ಪುನರಾವರ್ತನೆಯಾಗುತ್ತದೆ. ಓದಲೊಂದು ನೆಪ. ಕಲಿಕೆಗೆ ಮತ್ತೊಂದು ಆಯಾಮ.

ಪ್ರಾಣಿಗಳು ಸಂಗೀತಕ್ಕೆ ಸ್ಪಂದಿಸುತ್ತವೆಯೇ? ಮಾತಾಡಿದರೆ ಕೇಳಿಸಿಕೊಳ್ಳುತ್ತವೆಯೇ? ಓದಿಗೂ, ಮಾತಿಗೂ ಏನಾದರೂ ವ್ಯತ್ಯಾಸ ತಿಳಿಯುತ್ತದೆಯೇ? ಈ ಬಗೆಯ ಹಲವು ಪ್ರಶ್ನೆಗಳಿಗೆ ತಾವೇ ಪ್ರಯೋಗ ಮಾಡುವ ಅವಕಾಶ ಮಕ್ಕಳಿಗೆ. ಶಾಲೆಯಲ್ಲಿ ಇಲ್ಲದಿರುವಂತಹ ಅವಕಾಶವನ್ನು ಈಗ ಮನೆಯಲ್ಲಿ ಸೃಷ್ಟಿಸಿಕೊಳ್ಳಲು ಸಾಧ್ಯವಾಗಿದೆ.

ಐದನೆಯ ತರಗತಿಯ ಕೆಳಗಿರುವ ಮಕ್ಕಳಿಗೆ ಪರೀಕ್ಷೆಯೇ ಇಲ್ಲದೇ ತೇರ್ಗಡೆಯಾಗುತ್ತಿರುವ ಖುಷಿಗೆ ಈಗಲೇ ಮುಂದಿನ ತರಗತಿಗಳ ಪರಿಚಯ ಪಾಠಗಳು ಕೂಡಾ ಆಟದ ಭಾಗವಾಗುವುದು ಒಂದು ಕಲಿಕೆಯ ಭಾಗವೆ. ಹೊರಗೆ ಗುಂಪುಗಳಲ್ಲಿ ಆಡಲು ಹೋಗದಿರುವುದರಿಂದ ಮನೆಯಲ್ಲಿ ಆಡುವ ಆಟಗಳು, ಅದರಲ್ಲೂ ಕಲಿಕೆಗೆ ನೆರವಾಗುವಂತಹ ಆಟಗಳನ್ನು ಮನೆಮಂದಿಯೆಲ್ಲಾ ಕುಳಿತು ಆಡುವುದರಿಂದ ಕರೋನಾದ ತಲ್ಲಣವೂ ಕಳೆದಂತಾಯಿತು, ಶಾಪವನ್ನು ವರವಾಗಿಸಿಕೊಂಡಂತೂ ಆಯಿತು.

ಮಕ್ಕಳಿಗೆ ಮುಖ್ಯವಾಗಿ ಯಾವುದೇ ತಲ್ಲಣದ ಮತ್ತು ನಕಾರಾತ್ಮಕದ ಸನ್ನಿವೇಶಗಳಲ್ಲಿ ಧೃತಿಗೆಡದೇ ಆ ಸಮಯವನ್ನು ಸಕಾರಾತ್ಮಕವಾಗಿ ಮತ್ತು ಸೃಜನಶೀಲವಾಗಿ ಬಳಸಿಕೊಳ್ಳುವುದರ ರೂಢಿ ಇಲ್ಲಿಂದಾಗುವುದು ಒಳಿತು. ಏಕೆಂದರೆ ಭಯ, ತಲ್ಲಣಗಳು ಉಂಟುಮಾಡುವ ನಕಾರಾತ್ಮಕ ಭಾವವನ್ನು ಹೋಗಲಾಡಿಸಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ವಿಧಾನವೂ ಇದಾಗುತ್ತದೆ.

ಸಂಬಂಧಗಳನ್ನೂ ಗಟ್ಟಿಗೊಳಿಸುತ್ತಾ, ಕಲಿಕೆಯನ್ನೂ ಅಭಿವೃದ್ಧಿಗೊಳಿಸಿಕೊಳ್ಳುತ್ತಾ, ಭಾವುಕವಾಗಿ ಮತ್ತು ಬೌದ್ಧಿಕವಾಗಿ ಸಂತೋಷಪಡಲು ಕೊರೊನಾ ಒಂದು ದಾರಿ ತೋರಲಿಲ್ಲವೇ? ತಮಸೋಮ ಜ್ಯೋತಿರ್ಗಮಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು