ಭಾನುವಾರ, ಫೆಬ್ರವರಿ 28, 2021
20 °C

ನಕ್ಸಲ್‌ ಪ್ರಾಬಲ್ಯ ಜಿಲ್ಲೆಯಲ್ಲಿ ಇ–ಕಲಿಕಾ ಕೇಂದ್ರ ತೆರೆದ ಐಟಿಬಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಯ್ಪುರ: ಛತ್ತೀಸಗಡದ ನಕ್ಸಲ್‌ ಪ್ರಾಬಲ್ಯದ ಜಿಲ್ಲೆಯಲ್ಲಿ ಇಂಡೊ–ಟಿಬೆಟಿಯನ್‌ ಗಡಿ ಪೊಲೀಸರು(ಐಟಿಬಿಪಿ) ಶಾಲಾ ಮಕ್ಕಳಿಗಾಗಿ ಇ–ಕಲಿಕಾ ಕೇಂದ್ರವನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಈ ‘ಸ್ಮಾರ್ಟ್’ ಶಾಲೆಯು ಕೊಂಡಗಾಂವ್‌ ಜಿಲ್ಲೆಯ ಹಡೆಲಿ ಗ್ರಾಮದಲ್ಲಿದ್ದು, ಸುಮಾರು 50 ಮಕ್ಕಳು ಇಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯೂಟ್ಯೂಬ್ ವಿಡಿಯೊ ಮತ್ತು ಇತರ ಆನ್‌ಲೈನ್ ಶಿಕ್ಷಣ ಪೋರ್ಟಲ್‌ಗಳ ಸಹಾಯದಿಂದ ಐಟಿಬಿಪಿ ಸಿಬ್ಬಂದಿಯು ಮಕ್ಕಳಿಗೆ ಬೋಧಿಸುತ್ತಾರೆ.

‘ಪ್ರೊಜೆಕ್ಟರ್‌ ಮೂಲಕ ಮಕ್ಕಳಿಗೆ ಬೋಧಿಸಲಾಗುತ್ತದೆ. ಸಾಮಾನ್ಯವಾಗಿ ಸಂಜೆ ವೇಳೆ ತರಗತಿ ನಡೆಸಲಾಗುತ್ತದೆ. ಪದವೀಧರರು ಮತ್ತು ಬೋಧನೆಯ ತರಬೇತಿ ಪಡೆದವರನ್ನು ಮಕ್ಕಳಿಗೆ ಪಾಠ ಕಲಿಸಲು ನಿಯೋಜಿಸಲಾಗಿದೆ’ ಎಂದು ಐಟಿಬಿಪಿ ಹಿರಿಯ ಅಧಿಕಾರಿ ಹೇಳಿದರು.

‘ಮಕ್ಕಳಿಗೆ ಅನಿಮೇಷನ್ ಚಲನಚಿತ್ರಗಳನ್ನು ತೋರಿಸಲಾಗುತ್ತದೆ. ಈ ಮಕ್ಕಳಿಂದ ಸೇನಾ ಸಿಬ್ಬಂದಿ ಸ್ಥಳೀಯ ಹಲ್ಬಿ ಭಾಷೆಯನ್ನು ಕಲಿಯುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು