ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯವು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿದ್ದು ಯಾವ ವರ್ಷದಲ್ಲಿ?

Last Updated 4 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

1. ಮಂಡ್ಯವು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿದ್ದು ಯಾವ ವರ್ಷದಲ್ಲಿ?

ಅ) 1929

ಆ) 1939

ಇ) 1949

ಈ) 1959

2. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ಎಷ್ಟು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಬಹುದು?

ಅ) ಒಂದು

ಆ) ಎರಡು

ಇ) ಮೂರು

ಈ) ನಾಲ್ಕು

3. ಎರಡನೇ ಇಬ್ರಾಹಿಂ ಅದಿಲ್ ಷಾನ ‘ಕಿತಾಬ್-ಎ-ನವ್‌ರಸ್ ’ ಯಾವ ವಿಷಯವನ್ನು ಕುರಿತದ್ದು?

ಅ) ಅಡುಗೆ

ಆ) ಗಣಿತ

ಇ) ಸಂಗೀತ

ಈ) ವಾಸ್ತುಶಿಲ್ಪ

4. ಇವರಲ್ಲಿ ಬಂಗಾಲಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಸಾಹಿತಿ ಯಾರು?

ಅ) ಎಂ.ಎಸ್. ಪುಟ್ಟಣ್ಣ

ಆ) ಗಳಗನಾಥ

ಇ) ಬೆಳ್ಳಾವೆ ವೆಂಕಟನಾರಾಯಣಪ್ಪ

ಈ) ಬಿ. ವೆಂಕಟಾಚಾರ್ಯ

5. ಕೆ.ಎಂ. ಮುನ್ಷಿಯವರು ಆರಂಭಿಸಿದ ಸಾಂಸ್ಕೃತಿಕ ಸಂಸ್ಥೆ ಯಾವುದು?

ಅ) ಬನಾರಸ್ ಹಿಂದೂ ವಿಶ್ವವಿದ್ಯಾಲಯ

ಆ) ಭಾರತ್ ಭವನ್

ಇ) ಭಾರತೀಯ ವಿದ್ಯಾ ಭವನ

ಈ) ಗೀತಂ ವಿಶ್ವವಿದ್ಯಾಲಯ

6. ಬೇಕರಿಗಳಲ್ಲಿ ಈಸ್ಟನ್ನು ಏಕೆ ಬಳಸುತ್ತಾರೆ?

ಅ) ಸಿಹಿಕಾರಕವಾಗಿ

ಆ) ಉಪ್ಪಿನ ಬದಲಿಗೆ

ಇ) ಜಿಡ್ಡಿನ ಪದಾರ್ಥವಾಗಿ

ಈ) ಹುದುಗುಗೊಳಿಸಲು

7. ಮಹಾಭಾರತದಲ್ಲಿ ದೃಪದರಾಜನ ಮಗನ ಹೆಸರೇನು?

ಅ) ದೃಷ್ಟದ್ಯುಮ್ನ

ಆ) ಸಾತ್ಯಕಿ

ಇ) ಶಿಶುಪಾಲ

ಈ) ಜರಾಸಂಧ

8. ಸುಪ್ರಿಂಕೋರ್ಟಿನ ಆದೇಶದ ಪ್ರಕಾರ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡ ಎಷ್ಟನ್ನು ಮೀರುವಂತಿಲ್ಲ?

ಅ) ಅರವತ್ತು

ಆ) ಐವತ್ತು

ಇ) ನಲವತ್ತು

ಈ) ನಲವತ್ತೈದು

9. ‘ಕಾಂಕ್ರೇಜ್‌’ ಜಾತಿಯ ಎತ್ತುಗಳು ಯಾವ ರಾಜ್ಯದ ಮೂಲದವು?

ಅ) ಗುಜರಾತ್

ಆ) ಪಂಜಾಬ್

ಇ) ಹರಿಯಾಣ

ಈ) ಮಹಾರಾಷ್ಟ್ರ

10. ಇವುಗಳಲ್ಲಿ ಯಾವುದು ‘ಖ್ಯಾತ ಕರ್ನಾಟಕ’ ಗಳ ಪಟ್ಟಿಯಲ್ಲಿ ಸೇರಿಲ್ಲ

ಅ) ಶಾರ್ದೂಲ ವಿಕ್ರೀಡಿತ

ಆ) ಮತ್ತೇಭವಿಕ್ರೀಡಿತ

ಇ) ಕಂದಪದ್ಯ

ಈ) ಸ್ರಗ್ಧರಾ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಗಂಗರು 2. ಆಮ್ಲಜನಕ 3. ಜೆ.ಎಸ್. ಕೇಹರ್ 4. ಹರಿಯ ತೊಡೆ 5. ಶೀಘ್ರ ಮಲರೂಪಿ ತ್ಯಾಜ್ಯಗಳ ವಿಸರ್ಜನೆ6. ಎಲ್ಲ ಅಭಿಪ್ರಾಯವನ್ನೂ ಕುರುಡಾಗಿ ಒಪ್ಪುವವ 7. ಏಳು 8. 205 9. ಅಕ್ಬರ್ 10. ರಹಮತ್ ತರಿಕೆರೆ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT