ಭಾನುವಾರ, ಜೂನ್ 13, 2021
21 °C
ಲಾಕ್‌ಡೌನ್‌ ಅವಧಿಯಲ್ಲೂ ಪಾಠ ಮಾಡಿದ ಮುಖ್ಯಶಿಕ್ಷಕ

ರಾಯಪ್ಪ ಮೇಷ್ಟ್ರು ಸಿದ್ಧಪಡಿಸಿದ ‘ಇಂಗ್ಲಿಷ್‌ ಪ್ರಪಂಚ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿ.ನರಸೀಪುರ: ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್‌ ಕಲಿಕೆ ಸರಳವಾಗಲಿ ಎಂಬ ಉದ್ದೇಶದಿಂದ ‘ಇಂಗ್ಲಿಷ್‌ ಪ್ರಪಂಚ’ವನ್ನು ಮಾಡಿ ಗಮನ ಸೆಳೆದಿದ್ದ ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ.

ತಾಲ್ಲೂಕಿನ ತುಂಬಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಗೆ  ರಾಯಪ್ಪ ಗೌಂಡಿ ಅವರು ‘ಇಂಗ್ಲಿಷ್‌ ಪ್ರಪಂಚ’ ಎಂದು ಹೆಸರಿಟ್ಟಿದ್ದಾರೆ. ಕೊಠಡಿಯೊಳಗೆ ವ್ಯಾಕರಣ ಮಾದರಿ, ವಾಕ್ಯಗಳ ರಚನೆ ಸೇರಿದಂತೆ ಇನ್ನಿತರೆ ಮಾದರಿಗಳನ್ನು ಮಾಡಿದ್ದಾರೆ. ಪದಗಳು, ವಿರುದ್ಧ ಪದ, ಸಮನಾರ್ಥಕ ಪದಗಳು... ಹೀಗೆ ಹಲವು ವಿಷಯಗಳಿರುವ ಚಾರ್ಟ್‌ಗಳನ್ನು ಹಾಕಲಾಗಿದೆ.

ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಕಲಿಕೆಯಿಂದ ದೂರ ಉಳಿಯಬಾರದೆಂದು ಗ್ರಾಮದ ಮನೆ ಮನೆಗಳಿಗೆ ತೆರಳಿ ಪಾಠ ಮಾಡಿದ್ದಾರೆ.

‘ರಾಯಪ್ಪ ಅವರು ಶಾಲೆಗೆ ಬಂದ ಮೇಲೆ ಪ್ರತಿ ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿ ಶಿಕ್ಷಣದ ಮಹತ್ವ ತಿಳಿಸಿದರು. ವಿದ್ಯಾರ್ಥಿಗಳ ಹಾಜರಾತಿ ಶೇ 100 ರಷ್ಟಾಗಿತ್ತು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತೇಜಿಸಿದ್ದಾರೆ. ಇವರಿಂದ ತುಂಬಲ ಗ್ರಾಮದ ಶಾಲೆಗೆ ವಿಶೇಷ ಮಾನ್ಯತೆ ಸಿಕ್ಕಿದೆ’ ಎಂದು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರೇವಣ್ಣ ಶ್ಲಾಘಿಸಿದರು.

ಕೇಂದ್ರ ಸರ್ಕಾರ ಪ್ರಾಯೋಜಿತ ನ್ಯಾಷನಲ್‌ ಮೀನ್‌ ಕಮ್‌ ಮೆರಿಟ್‌ ಸ್ಕಾಲರ್‌ಶಿಪ್‌ (ಎನ್‌ಎಂಎಂಎಸ್‌) ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿ, ಸೌಲಭ್ಯ ಪಡೆಯುವಂತೆ ಮಾಡಿದ್ದಾರೆ.

‘ಬಡತನದ ಹಿನ್ನೆಲೆಯಿಂದ ಬಂದ ನಾನು ಅನೇಕ ಸೌಲಭ್ಯಗಳಿಂದ ವಂಚಿತನಾಗಿದ್ದೇನೆ. ಗ್ರಾಮೀಣ ಭಾಗದ ಮಕ್ಕಳು ನಮ್ಮಂತೆ ತೊಂದರೆ ಅನುಭವಿಸಬಾರದು ಎಂಬ ಉದ್ದೇಶ ನಮ್ಮದು. ನಮ್ಮ ಪ್ರಯತ್ನಕ್ಕೆ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದ್ದಾರೆ’ ಎಂದು ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು