ಮಂಗಳವಾರ, ಮೇ 18, 2021
30 °C

ವಿದ್ಯಾರ್ಥಿವೇತನ ಕೈಪಿಡಿ: ಚೆವನಿಂಗ್ ಗುರುಕುಲ ಪ್ರೋಗ್ರಾಂ ಫೆಲೋಶಿಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆವನಿಂಗ್ ಗುರುಕುಲ ಪ್ರೋಗ್ರಾಂ ಫೆಲೋಶಿಪ್‌

ಅರ್ಹತೆ: ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪದವಿಯೊಂದಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರ, ಖಾಸಗಿ ವಲಯ, ಮಾಧ್ಯಮ ಮತ್ತು ನಾಗರಿಕ ಸಮಾಜದಲ್ಲಿ ನಾಯಕ ಪಾತ್ರವನ್ನು ನಿಭಾಯಿಸಿ, ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವವರು ಈ ಫೆಲೋಶಿಪ್‌ಗೆ ಅರ್ಹರು. ಇದರ ಜೊತೆಗೆ ಇಂಗ್ಲಿಷ್‌ ಭಾಷಾ ಕೌಶಲ ಹೊಂದಿರಬೇಕು. ಈ ಕುರಿತು ಅರ್ಹ ಮೌಲ್ಯಮಾಪಕರಿಂದ ಮೌಲ್ಯಮಾಪನಕ್ಕೆ ಒಳಗಾಗಿರುವವರು ಅರ್ಜಿ ಸಲ್ಲಿಸಬಹುದು.
ಆರ್ಥಿಕ ನೆರವು: ವಿಮಾನ ಟಿಕೆಟ್‌ ದರ, ಅಧ್ಯಯನಕ್ಕೆ ತಗಲುವ ಖರ್ಚು, ವೀಸಾ ಸೇರಿದಂತೆ ಈ ಕಾರ್ಯಕ್ರಮದ ಸಂಪೂರ್ಣ ಖರ್ಚು– ವೆಚ್ಚವನ್ನು ಭರಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 22, 2021
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಹೆಚ್ಚಿನ ಮಾಹಿತಿಗೆ: http://www.chevening.org/programme/gurukul

**
ಐಐಟಿ ಗಾಂಧಿನಗರ ಭೌತಶಾಸ್ತ್ರ ವಿಭಾಗದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ – 2021

ವಿವರ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗಾಂಧಿನಗರ ಗುಜರಾತ್‌ ಭೌತಶಾಸ್ತ್ರ ವಿಭಾಗ ಪೋಸ್ಟ್‌ ಡಾಕ್ಟರಲ್‌ ಫೆಲೋಶಿಪ್‌ – 2021ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹತೆ: ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದವರು ಈ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಗುರುತ್ವಾಕರ್ಷಣೆಯ ಸೈದ್ಧಾಂತಿಕ ಅಂಶಗಳು ಮತ್ತು ಬ್ಲ್ಯಾಕ್‌ ಹೋಲ್‌ ಫಿಸಿಕ್ಸ್‌ ವಿಷಯದ ಮೇಲೆ ಪರಿಣತಿ ಹೊಂದಿದವರು ಅರ್ಹರಾಗಿದ್ದಾರೆ. 
ಆರ್ಥಿಕ ನೆರವು: ತಿಂಗಳಿಗೆ ₹ 45,000 ರಿಂದ ₹ 48,000 ದವರೆಗೆ ಭತ್ಯೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 15, 2021
ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್ ಮೂಲಕ
ಹೆಚ್ಚಿನ ವಿವರಗಳಿಗೆ: www.b4s.in/praja/GDP7
ಕೃಪೆ: www.buddy4study.com

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು