ಮಂಗಳವಾರ, ಫೆಬ್ರವರಿ 25, 2020
19 °C
ಇಂಗ್ಲಿಷ್‌ ಶಾಲೆಯ ಸುತ್ತೋಲೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಕ್ಷೇಪ

ಶಾಲೆಯಲ್ಲಿ ಕನ್ನಡ ಮಾತನಾಡಿದರೆ ₹50 ದಂಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

school

ಬೆಂಗಳೂರು: ಇಲ್ಲಿನ ಚನ್ನಸಂದ್ರದ  ಎಸ್.ಎಲ್.ಎಸ್.ಇಂಟರ್ ನ್ಯಾಷನಲ್ ಗುರುಕುಲ ಶಾಲೆಯಲ್ಲಿ ‘ಕನ್ನಡ ಮಾತನಾಡಿದರೆ ದಂಡ’ ವಿಧಿಸುವುದಾಗಿ ಸುತ್ತೋಲೆ ಹೊರಡಿಸಿರುವುದು ವಿವಾದಕ್ಕೆ ಎಡೆಮಾಡಿದೆ.

‘ಒಂದು ಬಾರಿ ಮಾತನಾಡಿದರೆ ₹50 ದಂಡ, ಎರಡನೇ ಬಾರಿ ಮಾತನಾಡಿದರೆ ₹100 ದಂಡ’ ಎಂದು ವಿದ್ಯಾರ್ಥಿಗಳ ಪೋಷಕರಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಮಾಹಿತಿ ತಿಳಿದ ತಕ್ಷಣ ಸೋಮವಾರ ಶಾಲೆಗೆ ತೆರಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು, ಶಾಲೆಯ ವರ್ತನೆ ವಿರುದ್ಧ ಹರಿಹಾಯ್ದರು. ಶಾಲೆಯ ವೆಬ್‌ಸೈಟ್‌, ಕನ್ನಡ ಭಾಷಾ ಕಲಿಕಾ ವಿಧಾನಗಳನ್ನು ಪರಿಶೀಲಿಸಿ, ವಿವಿಧ ವಿಷಯಗಳ ಬೋಧನೆ ಮಾಡುವ ಶಿಕ್ಷಕರನ್ನು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನು ನಿಯಮ ಉಲ್ಲಂಘಿಸಿ ನೇಮಕ ಮಾಡಿಕೊಂಡಿರು‌ವುದಕ್ಕೆ ತರಾಟೆಗೆ ತೆಗೆದುಕೊಂಡರು.

ಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದನ್ನು ಮತ್ತು ಅನರ್ಹ ಶಿಕ್ಷಕರ ನೇಮಕಾತಿಯ ಬಗ್ಗೆ ಅಧ್ಯಕ್ಷರ ಮುಂದೆ ಆಡಳಿತ ಮಂಡಳಿ, ತಪ್ಪೊಪ್ಪಿಕೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು