ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಈರೋಡ್ (ತಮಿಳುನಾಡು)

Published 15 ಏಪ್ರಿಲ್ 2024, 19:24 IST
Last Updated 15 ಏಪ್ರಿಲ್ 2024, 19:24 IST
ಅಕ್ಷರ ಗಾತ್ರ

ಆತ್ರಲ್ ಅಶೋಕ್ ಕುಮಾರ್

(ಎಐಎಡಿಎಂಕೆ)

₹538 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ತಮಿಳುನಾಡಿನ ಉದ್ಯಮಿ ಆತ್ರಲ್ ಅಶೋಕ್ ಕುಮಾರ್ ಅವರನ್ನು ಎಐಎಡಿಎಂಕೆ ಈರೋಡ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಇಂಟೆಲ್‌ ಮತ್ತು ಮೈಕ್ರೊಸಾಫ್ಟ್‌ನಲ್ಲಿ ಅಶೋಕ್‌ ಅವರು ಕೆಲಸ ನಿರ್ವಹಿಸಿದ್ದರು. 13 ವರ್ಷಗಳ ಕಾಲ ಅಮೆರಿಕದಲ್ಲಿದ್ದ ಇವರು 2005ರಲ್ಲಿ ಭಾರತಕ್ಕೆ ಮರಳಿದ್ದರು. ಇವರು ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಅಶೋಕ್ ಅವರು 2021ರಲ್ಲಿ ಆತ್ರಲ್ ಫೌಂಡೇಶನ್‌ ಸ್ಥಾಪಿಸಿ, ಅದರ ಅಧೀನದಲ್ಲಿ ಕಡಿಮೆ ದರಕ್ಕೆ ಆಹಾರ ನೀಡುವ ಕ್ಯಾಂಟೀನ್‌ಗಳನ್ನು ಈರೋಡ್‌ ಸುತ್ತ ಮುತ್ತ ಆರಂಭಿಸಿದ್ದರು. ಅಶೋಕ್‌ ಅವರ ತಾಯಿ ಕೆ.ಎಸ್‌. ಸೌಂದರಮ್ ಅವರು ಎಐಎಡಿಎಂಕೆಯ ಸಂಸದೆಯಾಗಿದ್ದರು. ಅಶೋಕ್‌, 2023ರಲ್ಲಿ ಬಿಜೆಪಿ ತೊರೆದು ಎಐಎಡಿಎಂಕೆಗೆ ಸೇರಿದ್ದರು. ಇವರ ಅತ್ತೆ ಸಿ. ಸರಸ್ವತಿ ಅವರು ಬಿಜೆಪಿ ಶಾಸಕಿಯಾಗಿದ್ದಾರೆ.

............

ಕೆ.ಇ. ಪ್ರಕಾಶ್‌
(ಡಿಎಂಕೆ)

ಅತ್ಯಂತ ಶ್ರೀಮಂತ ಅಭ್ಯರ್ಥಿ ಆತ್ರಲ್ ಅಶೋಕ್ ಕುಮಾರ್ ಅವರನ್ನು ಮಣಿಸಲು ಆಡಳಿತಾರೂಢ ಡಿಎಂಕೆಯು ಪಕ್ಷದ ಯುವ ಘಟಕದ ಉಪ ಕಾರ್ಯದರ್ಶಿ ಕೆ.ಇ. ಪ್ರಕಾಶ್‌  ಅವರನ್ನು ಅಖಾಡಕ್ಕಿಳಿಸಿದೆ. ಇವರ ತಂದೆ ಕೆ.ಎಸ್‌. ಈಶ್ವರ ಮೂರ್ತಿ ಅವರು ಡಿಎಂಕೆಯ ಹಿರಿಯ ಮುಖಂಡರಾಗಿದ್ದಾರೆ. ಉದ್ಯಮಿ ಹಾಗೂ ರಾಜಕಾರಣಿಯಾಗಿರುವ ಪ್ರಕಾಶ್‌ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಯುವ ಘಟಕದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಮತ್ತು ಸ್ಥಳೀಯವಾಗಿ ಚಿರಪರಿಚಿತರಾಗಿರುವುದರಿಂದ ಮತದಾರರು ಇವರ ಕೈಬಿಡಲಾರರು ಎಂಬ ವಿಶ್ವಾಸ ಡಿಎಂಕೆ ಮುಖಂಡರದ್ದಾಗಿದೆ. ಆಡಳಿತಾರೂಢ ಪಕ್ಷದ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಮೆಟ್ಟಿಲಾಗಬಹುದೆಂಬ ಭರವಸೆಯಲ್ಲಿ ಪ್ರಕಾಶ್‌ ಅವರು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕೆ.ಇ. ಪ್ರಕಾಶ್‌
ಕೆ.ಇ. ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT