ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ | ಕನೌಜ್‌(ಉ.ಪ್ರದೇಶ); ಅಖಿಲೇಶ್‌ ಯಾದವ್‌ vs ಸುಬ್ರತ್‌ ಪಾಠಕ್

Published 28 ಏಪ್ರಿಲ್ 2024, 23:18 IST
Last Updated 28 ಏಪ್ರಿಲ್ 2024, 23:18 IST
ಅಕ್ಷರ ಗಾತ್ರ

ಅಖಿಲೇಶ್‌ ಯಾದವ್‌
(ಸಮಾಜವಾದಿ ಪಕ್ಷ)

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರ ಕುಟುಂಬದ ಪ್ರಭಾವವಿರುವ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಅವರ ಪುತ್ರ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರೇ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಅಖಿಲೇಶ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷವು ತೇಜ್ ಪ್ರತಾಪ್‌ ಯಾದವ್‌ ಅವರ ಹೆಸರನ್ನು ಆರಂಭದಲ್ಲಿ ಘೋಷಿಸಿತ್ತು. ಬಳಿಕ ಅವರನ್ನು ಬದಲಿಸಿ ಅಖಿಲೇಶ್‌ ಅವರೇ ಕಣಕ್ಕಿಳಿದಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಅವರು ಈ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮುಲಾಯಂ ಸಿಂಗ್‌ ಅವರು ಕೂಡ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಡಿಂಪಲ್‌ ಅವರೂ ಎರಡು ಬಾರಿ ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಸುಬ್ರತ್‌ ಪಾಠಕ್‌
(ಬಿಜೆಪಿ)

ಕನೌಜ್‌ ಕ್ಷೇತ್ರದಿಂದ ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸುಬ್ರತ್‌ ಪಾಠಕ್‌ ಅವರನ್ನು ಬಿಜೆಪಿಯು ಈ ಬಾರಿಯೂ ಅಖಾಡಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಸುಬ್ರತ್‌ ಅವರು, 12,353 ಮತಗಳ ಅಂತರದಿಂದ ಡಿಂಪಲ್‌ ಯಾದವ್‌ ಅವರನ್ನು ಪರಾಭವಗೊಳಿಸಿದ್ದರು. ಇವರು ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಹೌದು. 2014ರ ಚುನಾವಣೆಯಲ್ಲಿ ಇವರು ಈ ಕ್ಷೇತ್ರದಿಂದ ಡಿಂಪಲ್‌ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ರಾಜ್ಯದ ಆಡಳಿತಾರೂಢ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಜನರ ಮುಂದಿರಿಸಿ ಸುಬ್ರತ್‌ ಅವರು ಮತಯಾಚಿಸುತ್ತಿದ್ದಾರೆ. ಬಿಎಸ್‌ಪಿ ಈ ಕ್ಷೇತ್ರದಿಂದ ಇಮ್ರಾನ್‌ ಬಿನ್‌ ಜಾಫರ್‌ ಅವರನ್ನು ಸ್ಪರ್ಧೆಗಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT