ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಥಾ ಮಾತು | ಮಲ್ಲಿಕಾರ್ಜುನ ಖರ್ಗೆ ಮತ್ತು ನಡ್ಡಾ ಹೇಳಿಕೆ

Published 27 ಮೇ 2024, 0:33 IST
Last Updated 27 ಮೇ 2024, 0:33 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ‘ತೀಸ್‌ ಮಾರ್‌ ಖಾನ್‌’ ಎಂದು ಭಾವಿಸಿದ್ದಾರೆ. ಅದು ಅವರ ತಪ್ಪು ತಿಳಿವಳಿಕೆ. ಜನರೇ ನಿಜವಾದ ‘ತೀಸ್‌ ಮಾರ್‌ ಖಾನ್‌’ಗಳು. ಮೋದಿ ಅವರು ಸರ್ವಾಧಿಕಾರಿ. ಅವರು ಮೂರನೇ ಬಾರಿ ಪ್ರಧಾನಿಯಾದರೆ, ಜನರನ್ನು ಏನನ್ನೂ ಹೇಳಲು ಬಿಡುವುದಿಲ್ಲ. ಇದು ಜನರು ಮತ್ತು ಮೋದಿ ನಡುವಿನ ಚುನಾವಣೆ. ಜನರು ಮತ್ತು ರಾಹುಲ್ ಗಾಂಧಿ ನಡುವಿನದ್ದಲ್ಲ. ಪ್ರಧಾನಿ ಎಂಬ ನೆಲೆಯಲ್ಲಿ ನಾವು ಮೋದಿ ಅವರಿಗೆ ಗೌರವ ನೀಡುತ್ತೇವೆ. ಆದರೆ ಅವರು ಕಾಂಗ್ರೆಸ್‌ ಮುಖಂಡರಿಗೆ ಗೌರವ ನೀಡುವುದಿಲ್ಲ. ಪ್ರಧಾನಿ ಅವರು ಶ್ರೀಮಂತರನ್ನಷ್ಟೇ ಅಪ್ಪಿಕೊಳ್ಳುತ್ತಾರೆ, ಬಡವರನ್ನಲ್ಲ

– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಹತ್ತು ವರ್ಷಗಳ ಹಿಂದೆ ಭಾರತೀಯರು ಹೆಚ್ಚಾಗಿ ಚೀನಾ, ತೈವಾನ್‌, ಜಪಾನ್‌ ಮತ್ತು ಕೊರಿಯಾದಲ್ಲಿ ತಯಾರಾದ ಮೊಬೈಲ್‌ಗಳನ್ನು ಬಳಸುತ್ತಿದ್ದರು. ಇಂದು ಬಹುತೇಕರು ಭಾರತದಲ್ಲಿ ತಯಾರಾದ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ. ನಾವು ಬಳಸುತ್ತಿರುವ ಶೇ 97ರಷ್ಟು ಮೊಬೈಲ್‌ ಫೋನ್‌ಗಳನ್ನು ನಾವೇ ತಯಾರಿಸುತ್ತಿದ್ದೇವೆ. ಇದು ಧನಾತ್ಮಕ ಬದಲಾವಣೆಗೆ ಉದಾಹರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಆಡಳಿತವನ್ನಷ್ಟೇ ನಡೆಸಿಲ್ಲ. ದೇಶದ ರಾಜಕೀಯ ಸಂಸ್ಕೃತಿಗೆ ಮೂಲಭೂತ ಬದಲಾವಣೆ ತಂದಿದ್ದಾರೆ

– ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT