ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ಮಾತು

Published 22 ಮಾರ್ಚ್ 2024, 22:37 IST
Last Updated 22 ಮಾರ್ಚ್ 2024, 22:37 IST
ಅಕ್ಷರ ಗಾತ್ರ

ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಲಿ, ನಾಯಕ ಸಿಗಲಿ ಸಾಕು. ಹತ್ತು ವರ್ಷಗಳಿಂದ ಕಾಂಗ್ರೆಸ್ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಮೂರು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್‌ ಸರ್ಕಾರ ಇದೆ. ಆ ಪಕ್ಷ 50ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಸಮೀಕ್ಷೆ ಹೇಳುತ್ತಿವೆ. 40ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ. ಮೊದಲು ಇಂಡಿಯಾ ಒಕ್ಕೂಟವನ್ನು ಕಾಂಗ್ರೆಸ್‌ನವರು ಸರಿ ಮಾಡಿಕೊಳ್ಳಲಿ. ಲೋಕಸಭಾ ಚುನಾವಣೆ ಬಳಿಕ ಒಕ್ಕೂಟದಲ್ಲಿ ಏನೇನು ಜಗಳವಾಗುತ್ತೆ ನೋಡಿಕೊಳ್ಳಲಿ.

–ಪ್ರಲ್ಹಾದ ಜೋಶಿ, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ

ಸೋಮಣ್ಣ ಅವರಿಗೆ ನನ್ನ ಒಂದು ವೋಟ್‌ ಹಾಕದಿದ್ದರೆ ಏನಾಗುತ್ತದೆ? ನನ್ನ ಹೆಂಡತಿಯೂ ವೋಟ್ ಹಾಕಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಸೋಮಣ್ಣ ಅವರಿಗೆ ಬೆಂಬಲ ನೀಡುವಂತೆ ಒತ್ತಡ ಹಾಕಬೇಡಿ ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ. ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಇನ್ನೂ ಒಂದು ತಿಂಗಳು ಸಮಯವಿದೆ. ಮುಂದೆ ನೋಡೋಣ. ಸೋಮಣ್ಣ ಅವರಿಗೆ ನಾಲ್ಕೈದು ದಿನ ಬಿಟ್ಟು ಮನೆಗೆ ಬರುವಂತೆ ಹೇಳಿದ್ದೇನೆ. ಬರಬೇಡ ಎಂದು ಹೇಳಿಲ್ಲ. ಯಾರು ಬಂದರೂ ಸ್ವಾಗತ. ಆತಿಥ್ಯ ಮಾಡುತ್ತೇನೆ.

– ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT