ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು: ಪ್ರಿಯಾಂಕಾ ಗಾಂಧಿ ಮತ್ತು ಯೋಗಿ ಆದಿತ್ಯನಾಥ ಹೇಳಿಕೆಗಳು

Published 29 ಮೇ 2024, 23:54 IST
Last Updated 29 ಮೇ 2024, 23:54 IST
ಅಕ್ಷರ ಗಾತ್ರ

ಕೇಂದ್ರದ ಬಿಜೆಪಿ ಸರ್ಕಾರವು ಹಿಮಾಚಲ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಾಕಷ್ಟು ಹೊಡೆತ ನೀಡಿದೆ. ಹಿಮಾಚಲ ಪ್ರದೇಶದಲ್ಲಿರುವ ಹೆಚ್ಚಿನ ಶೈತ್ಯಾಗಾರಗಳು ಅದಾನಿ ಸಮೂಹಕ್ಕೆ ಸೇರಿದ್ದಾಗಿದ್ದು, ಸೇಬಿನ ದರ ಮತ್ತು ಸೇಬು ಬೆಳೆಗಾರರ ಭವಿಷ್ಯವನ್ನು ಅವರೇ ನಿರ್ಧರಿಸುತ್ತಿದ್ದಾರೆ. ಹಿಮಾಚಲ ಪ್ರದೇಶ ತಮ್ಮ ಎರಡನೇ ಮನೆ ಎಂದು ಮೋದಿ ಹೇಳುತ್ತಾರೆ. ಆದರೆ ರಾಜ್ಯದ ಅಭಿವೃದ್ಧಿಗಾಗಿ ಅವರು ಯಾವುದೇ ವಿಶೇಷ ಯೋಜನೆ ಘೋಷಿಸಿಲ್ಲ

– ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ನಾಯಕಿ

ಮುಸ್ಲಿಂ ಮೀಸಲಾತಿಯನ್ನು ಪ್ರತಿಪಾದಿಸುವ ಮೂಲಕ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದೇಶ ವಿಭಜನೆಗೆ ಬೇಕಾದ ಸಿದ್ಧತೆ ನಡೆಸುತ್ತಿವೆ. ಈ ಎರಡೂ ಪಕ್ಷಗಳು ವೈಯಕ್ತಿಕ ಕಾನೂನು ಜಾರಿಗೊಳಿಸಲು ಬಯಸುತ್ತವೆ. ಆದರೆ ಭಾರತದಲ್ಲಿ ತಾಲಿಬಾನ್ ಮಾದರಿಯ ಆಡಳಿತಕ್ಕೆ ಬಿಜೆಪಿ ಅವಕಾಶ ನೀಡದು. ನಮ್ಮ ದೇಶದ ಆಡಳಿತ ಸಂವಿಧಾನದ ಪ್ರಕಾರ ನಡೆಯುತ್ತದೆಯೇ ಹೊರತು, ಷರಿಯಾ ಕಾನೂನಿನಿಂದ ಅಲ್ಲ. ಬಿಜೆಪಿಯು ಅಭಿವೃದ್ಧಿಯ ಪರವಾಗಿದೆ

– ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT