ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ. ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹೋದರನ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ!

Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಸ್ವಪನ್ ಬ್ಯಾನರ್ಜಿಯ (ಬಾಬುನ್) ಹೆಸರು ಮತದಾರರ ಪಟ್ಟಿಯಲ್ಲಿ ಇರದೇ ಇದ್ದುದರಿಂದ ಮತ ಚಲಾವಣೆ ಮಾಡಲು ಸೋಮವಾರ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೌರಾ ಪಟ್ಟಣದ ಮತದಾರರಾದ ಬಾಬುನ್, ಮತ ಚಲಾವಣೆ ಮಾಡಲು ಮತಗಟ್ಟೆಗೆ ಹೋದಾಗ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ‘ಈ ಬಗ್ಗೆ ಚುನಾವಣಾ ಆಯೋಗವು ಪರಿಶೀಲನೆ ನಡೆಸುತ್ತಿದ್ದು, ಅವರಷ್ಟೇ ಏನಾಗಿದೆ ಎಂದು ಹೇಳಲು ಸಾಧ್ಯ’ ಎಂದು ಟಿಎಂಸಿ ವಕ್ತಾರ ಶಂತನು ಸೇನ್ ಹೇಳಿದ್ದಾರೆ. 

ಮತದಾನ ಮಾಡಲು ಸಾಧ್ಯವಾಗದೇ ಹೋದುದಕ್ಕೆ ನಿರಾಸೆಯಾಗಿದೆ ಎಂದು ಬಾಬುನ್ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT