ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಮತದಾನದ ವೇಳೆ ಕನಿಷ್ಠ ಐವರು ಸಾವು

Published 26 ಏಪ್ರಿಲ್ 2024, 21:57 IST
Last Updated 26 ಏಪ್ರಿಲ್ 2024, 21:57 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮತದಾನ ಪ್ರಕ್ರಿಯೆ ಬಳಿಕ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಬಿರು ಬಿಸಿಲು ಕೂಡಾ ಒಂದು ಕಾರಣ ಎನ್ನಲಾಗಿದೆ.

ಪಾಲಕ್ಕಾಡ್‌ನ ಟೆಂಕುರುಷಿಯಲ್ಲಿ 35 ವರ್ಷದ ಸಬರಿ ಮತದಾನದ ಬಳಿಕ ಕುಸಿದುಬಿದ್ದು ಮೃತಪಟ್ಟರು. ಪಾಲಕ್ಕಾಡ್‌ನಲ್ಲಿ ಉಷ್ಣಾಂಶ ಗರಿಷ್ಠ ಪ್ರಮಾಣದಲ್ಲಿದೆ. ಇಲ್ಲಿ ಮತ್ತೊಬ್ಬರು ಸತ್ತಿದ್ದು, ಗುರುತು ಪತ್ತೆಯಾಗಿಲ್ಲ.

65 ವರ್ಷದ ಸಿದ್ದಿಖಿ ಎಂಬವರು ಮತದಾನದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಲಪ್ಪುಳದಲ್ಲಿ ಮತದಾನದ ಬಳಿಕ ಮನೆಗೆ ತೆರಳುತ್ತಿದ್ದ 80 ವರ್ಷದ ವ್ಯಕ್ತಿಯೊಬ್ಬರು ಮೃತರಾದರೆ, ಮತಗಟ್ಟೆ ಏಜೆಂಟ್‌ವೊಬ್ಬರು ಕೋಯಿಕ್ಕೋಡ್‌ನ ಕುಟ್ಟಿಚಿರದಲ್ಲಿ ಮೃತಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT