ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results 2024 Highlights: NDA ಗೆಲ್ಲಿಸಿದ್ದಕ್ಕೆ ಧನ್ಯವಾದ: ಮೋದಿ

Published 4 ಜೂನ್ 2024, 4:52 IST
Last Updated 4 ಜೂನ್ 2024, 14:09 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 290 ಹಾಗೂ 'ಇಂಡಿಯಾ' ಮೈತ್ರಿಕೂಟ 236 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತದತ್ತ ಮುನ್ನಡೆಯುತ್ತಿದ್ದರೂ, ಬಿಜೆಪಿ ಹಿನ್ನಡೆ ಅನುಭವಿಸಿದೆ. ಇದೇ ವೇಳೆ, ವಿಪಕ್ಷಗಳು ಕೂಡ ಅತ್ಯುತ್ತಮ ಸಾಧನೆ ಮಾಡಿರುವುದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣದಲ್ಲಿ ಹೊಸ ಹುರುಪು ಮೂಡಿಸಿದೆ. ಬಹುಮತ ಗಳಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 272 ಆಗಿದೆ. ಪ್ರಮುಖ ಪಕ್ಷಗಳ ಪೈಕಿ ಬಿಜೆಪಿ 236 ಹಾಗೂ ಕಾಂಗ್ರೆಸ್ 97 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಹಾಗೂ ಕಾಂಗ್ರೆಸ್ 52 ಸ್ಥಾನ ಗಳಿಸಿತ್ತು.

ಮುಖ್ಯಾಂಶಗಳು:

ನೈತಿಕ ಸೋಲನ್ನು ಒಪ್ಪಿಕೊಂಡು ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಮಮತಾ ಬ್ಯಾನರ್ಜಿ

ನೈತಿಕ ಸೋಲನ್ನು ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಈ ಕೂಡಲೇ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಚುನಾವಣಾ ಪಂಡಿತರ ಲೆಕ್ಕಾಚಾರ ತಲೆಕೆಳಗು: ಬಂಗಾಳದಲ್ಲಿ ಟಿಎಂಸಿ ಅಬ್ಬರ

ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಭರ್ಜರಿ ಗೆಲುವು ದಾಖಲಿಸುವತ್ತ ದಾಪುಗಾಲಿಟ್ಟಿದೆ. ಆ ಮೂಲಕ ತನ್ನ ಈ ಹಿಂದಿನ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳುವ ಸೂಚನೆ ನೀಡಿದೆ.

ನರೇಂದ್ರ ಮೋದಿ: ವಾರಾಣಸಿಯಲ್ಲಿ ಸತತ 3ನೇ ಬಾರಿ ಗೆಲುವು

*ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ. ನರೇಂದ್ರ ಮೋದಿ ಅವರು 1.5 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿ ಮೋದಿ 4.79 ಲಕ್ಷದ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಅಮಿತ್ ಶಾ:

ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮಿತ್ ಶಾ 7.44 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಹುಲ್ ಗಾಂಧಿ:

ರಾಹುಲ್ ಗಾಂಧಿ, ರಾಯ್‌ಬರೇಲಿ ಹಾಗೂ ವಯನಾಡ್ ಎರಡೂ ಕ್ಷೇತ್ರಗಳಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ವಯನಾಡ್‌ನಲ್ಲಿ 361394 ಮತಗಳ ಮುನ್ನಡೆಯಲ್ಲಿದ್ದಾರೆ. ರಾಯ್‌ಬರೇಲಿಯಲ್ಲಿ ರಾಹುಲ್ 388615 ಮತಗಳ ಮುನ್ನಡೆ ಗಳಿಸಿದ್ದಾರೆ. ಆ ಮೂಲಕ ಸೋನಿಯಾ ಗಾಂಧಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಅಮೇಠಿ: ಸ್ಮತಿ ಇರಾನಿ vs ಕೆಎಲ್ ಶರ್ಮಾ

ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿಗೆ 88,000 ಮತಗಳ ಹಿನ್ನಡೆ. ಕಾಂಗ್ರೆಸ್‌ನ ಕೆ.ಎಲ್ ಶರ್ಮಾ ಅವರಿಗೆ ಮುನ್ನಡೆ

ಅಖಿಲೇಶ್ ಯಾದವ್:

ಕನೌಜ್ ಲೋಕಸಭಾ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ 64,511 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ರಾಜನಾಥ ಸಿಂಗ್:

ಲಖನೌ ಲೋಕಸಭಾ ಕ್ಷೇತ್ರದಲ್ಲಿ ರಾಜನಾಥ ಸಿಂಗ್ ಅವರಿಗೆ 19,642 ಮತಗಳ ಮುನ್ನಡೆ

ಮನೋಹರ್ ಲಾಲ್ ಖಟ್ಟರ್:

ಕರ್ನಾಲ್ ಲೋಕಸಭಾ ಕ್ಷೇತ್ರದಲ್ಲಿ 28,481 ಮತಗಳ ಮುನ್ನಡೆ

ಅನುರಾಗ್ ಠಾಕೂರ್:

ಹಿಮಾಚಲದ ಹಮೀರ್‌ಪುರ ಕ್ಷೇತ್ರದಲ್ಲಿ 1,47,723 ಮತಗಳ ಮುನ್ನಡೆ

ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲಾ:

ಅನಂತ್‌ನಾಗ್ ರಜೌರಿ ಕ್ಷೇತ್ರದಲ್ಲಿ ಮೆಹಬೂಬಾ ಮುಫ್ತಿ ಹಾಗೂ ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ಅಬ್ದುಲಾ ಸೋಲು ಅನುಭವಿಸಿದ್ದಾರೆ.

ನಿತಿನ್ ಗಡ್ಕರಿ:

ನಾಗ್ಪುರ ಲೋಕಸಭಾ ಕ್ಷೇತ್ರದಲ್ಲಿ 78,000 ಮತಗಳ ಮುನ್ನಡೆ.

ಅಭಿಷೇಕ್ ಬ್ಯಾನರ್ಜಿ:

ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಲ್ಲಿ 2,42,064 ಮತಗಳ ಮುನ್ನಡೆ

ಗೌರವ್‌ ಗೊಗೊಯ್:

1.27 ಲಕ್ಷ ಮತಗಳ ಮುನ್ನಡೆ 

ಅಮೃತ್‌ಪಾಲ್‌ ಸಿಂಗ್‌:

ಸಿಖ್‌ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ಅವರಿಗೆ 63,680 ಮತಗಳ ಮುನ್ನಡೆ

ಪಿಯೂಷ್ ಗೋಯಲ್:

1.40 ಲಕ್ಷ ಮತಗಳ ಮುನ್ನಡೆ

ಜೀತೇಂದ್ರ ಸಿಂಗ್:

53522

ತಿರುವನಂತಪುರ: ಚಂದ್ರಶೇಖರನ್ vs ತರೂರ್

ಶಶಿ ತರೂರ್‌ಗೆ 15974 ಮತಗಳ ಮುನ್ನಡೆ. ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರನ್ ಅವರಿಂದ ನಿಕಟ ಪೈಪೋಟಿ.

ತ್ರಿಶೂರ್: ಸುರೇಶ್ ಗೋಪಿ

ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ, ನಟ ಸುರೇಶ್ ಗೋಪಿ 74,686 ಮತಗಳ ಮುನ್ನಡೆಯಲ್ಲಿದ್ದಾರೆ.

ಹೈದರಾಬಾದ್ (ತೆಲಂಗಾಣ):

ಓವೈಸಿ ಅವರಿಗೆ 1,19,079 ಮತಗಳ ಮುನ್ನಡೆ

ಅಧೀರ್ ರಂಜನ್ ಚೌಧರಿ:

ಪಶ್ಚಿಮ ಬಂಗಾಳದ ಬಹರಂಪು ಕ್ಷೇತ್ರದಲ್ಲಿ 15461 ಮತಗಳ ಮುನ್ನಡೆ

ಸುಪ್ರಿಯಾ ಸುಳೆ:

ಎನ್‌ಸಿಪಿ (ಶರದ್ ಪವಾರ್) ಬಣದ ಸುಪ್ರಿಯಾ ಸುಳೆ ಅವರಿಗೆ 8534 ಮತಗಳ ಮುನ್ನಡೆ

ಮನೀಶ್ ತಿವಾರಿ:

ಕಾಂಗ್ರೆಸ್‌ನ ಕನ್ಹಯ್ಯಾ ಕುಮಾರ್ ವಿರುದ್ಧ ಬಿಜೆಪಿಯ ಮನೀಶ್ ತಿವಾರಿ ಅವರಿಗೆ 43,649 ಮತಗಳ ಮುನ್ನಡೆ.

ಕನಿಮೋಳಿ:

ಕನಿಮೋಳಿ ಅವರಿಗೆ 74,762 ಮತಗಳ ಮುನ್ನಡೆ

ದಯಾನಿಧಿ ಮಾರನ್:

ಚೆನ್ನೈ ಸೆಂಟ್ರಲ್ ಕ್ಷೇತ್ರದಲ್ಲಿ ದಯಾನಿಧಿ ಮಾರನ್ 18,602 ಮತಗಳ ಮುನ್ನಡೆ

ಅಣ್ಣಾಮಲೈ:

ಕೊಯಮತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈಗೆ 30,736 ಮತಗಳ ಹಿನ್ನಡೆ

ರವಿಶಂಕರ್ ಪ್ರಸಾದ್:

46,948 ಮತಗಳ ಮುನ್ನಡೆ

ಯೂಸುಫ್ ಪಠಾಣ್:

ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ 34,594 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಂಗನಾ ರನೌತ್:

74,755 ಮತಗಳ ಮುನ್ನಡೆ

ವೈಭವ್ ಗೆಹಲೋತ್:

ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹಲೋತ್ ಅವರ ಪುತ್ರ ವೈಭವ್ ಗೆಹಲೋತ್ ಅವರಿಗೆ 1,58,448 ಮತಗಳ ಹಿನ್ನಡೆ.

ದಿಲೀಪ್ ಘೋಷ್:

ಬಿಜೆಪಿಯ ದಿಲೀಪ್ ಘೋಷ್ ಅವರಿಗೆ 82,954 ಮತಗಳ ಹಿನ್ನಡೆ.

ಒಟ್ಟು: 543

ಎನ್‌ಡಿಎ: 290

'ಇಂಡಿಯಾ' ಮೈತ್ರಿಕೂಟ: 236

ಇತರೆ: 17

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT