ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವಾಧಿಕಾರ ಮನಸ್ಥಿತಿ-ಕಂದಕಕ್ಕೆ ಬಿದ್ದ ಬಿಜೆಪಿ; ಮೋದಿ ಹಿಂದೆ ಸರಿಯಬೇಕು: ಸ್ವಾಮಿ

Published 5 ಜೂನ್ 2024, 5:45 IST
Last Updated 5 ಜೂನ್ 2024, 5:45 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಿಂದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಮನಸ್ಥಿತಿಯಿಂದಾಗಿ ಬಿಜೆಪಿ ಕಂದಕಕ್ಕೆ ಉರುಳಿದೆ. ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮೋದಿ ಹಿಂದೆ ಸರಿಯಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

'ಬಿಜೆಪಿ 220 ಸ್ಥಾನ ಗಳಿಸಲಿದೆ ಎಂಬ ನನ್ನ ಅಂದಾಜು, ಪಕ್ಷ ಗಳಿಸಿರುವ 237ಕ್ಕೆ ಹತ್ತಿರವಾಗಿದೆ. ನಾನು ನೀಡಿದ್ದ ಸಲಹೆಗಳನ್ನು ಪಾಲಿಸಿದ್ದರೆ ಬಿಜೆಪಿ 300 ಸೀಟುಗಳನ್ನು ಗಳಿಸಬಹುದಿತ್ತು. ದುರದೃಷ್ಟವಶಾತ್, ಮೋದಿಯ ಸರ್ವಾಧಿಕಾರಿ ಮನಸ್ಥಿತಿಯಿಂದ ಬಿಜೆಪಿ ಕಂದಕಕ್ಕೆ ಉರುಳಿದೆ' ಎಂದು ಹೇಳಿದ್ದಾರೆ.

ಮಗದೊಂದು ಟ್ವೀಟ್‌ನಲ್ಲಿ ಮೋದಿ ಮೂರನೇ ಬಾರಿ ಪ್ರಧಾನಿ ಗಾದಿಯಿಂದ ಹಿಂದೆ ಸರಿಯಬೇಕು ಎಂದು ಸುಬ್ರಮಣಿಯನ್ ಹೇಳಿದ್ದಾರೆ. 'ಬಿಜೆಪಿಗೆ ಬಹುಮತ ಸಿಗದ ಕಾರಣ ಮೋದಿ ಹಿಂದೆ ಸರಿಯಬೇಕು. ಸ್ವಾಭಿಮಾನ ಇರುವ ಯಾವುದೇ ನಾಯಕ ರಾಜೀನಾಮೆ ನೀಡುತ್ತಾರೆ. ಅಲ್ಲದೆ ಹೊರಹಾಕುವವರೆಗೆ ಕಾಯುವುದಿಲ್ಲ' ಎಂದು ಹೇಳಿದ್ದಾರೆ.

ಬಳಕೆದಾರರೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, 'ಹೌದು, ಕಾಂಗ್ರೆಸ್ ಬಹುಮತವನ್ನು ಕಳೆದುಕೊಂಡಾಗ ರಾಜೀವ್ ಗಾಂಧಿ ರಾಜೀನಾಮೆ ನೀಡಿದ್ದರು. ಬಹುಮತಕ್ಕಾಗಿ ಸಣ್ಣ ಪಕ್ಷಗಳನ್ನು ಬೇಡಿಕೊಳ್ಳಲು ನಿರಾಕರಿಸಿದ್ದರು' ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT