ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಇಂಡಿಯಾ' ಮೈತ್ರಿಕೂಟದ 'ಜನ-ಪ್ರಿಯ ಗೆಲುವು': ಅಖಿಲೇಶ್ ಯಾದವ್

Published 5 ಜೂನ್ 2024, 5:16 IST
Last Updated 5 ಜೂನ್ 2024, 5:16 IST
ಅಕ್ಷರ ಗಾತ್ರ

ಲಖನೌ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಗಮನಾರ್ಹ ಸಾಧನೆ ಕುರಿತು ಮೆಲುಕು ಹಾಕಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಇದು 'ಇಂಡಿಯಾ' ಮೈತ್ರಿಕೂಟದ 'ಜನ-ಪ್ರಿಯ ಗೆಲುವು' ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್, 'ಇದು ಸಂವಿಧಾನ ರಕ್ಷಣೆಗಾಗಿ ಹೆಗಲ ಮೇಲೆ ಹೆಗಲು ಕೊಟ್ಟ ಹಿಂದುಳಿದ, ಅಲ್ಪಸಂಖ್ಯಾತ, ಬುಡಕಟ್ಟು, ಸಮಾಜದ ನಿರ್ಲಕ್ಷಿತ, ಶೋಷಿತ ಮತ್ತು ತುಳಿತಕ್ಕೊಳಗಾದ ವರ್ಗದೊಂದಿಗೆ ದಲಿತ-ಬಹುಜನ ಸಮುದಾಯದ ವಿಶ್ವಾಸದ ಗೆಲುವಾಗಿದೆ ಎಂದು ಹೇಳಿದ್ದಾರೆ.

'ಹಿಂದುಳಿದ-ದಲಿತ-ಅಲ್ಪಸಂಖ್ಯಾತ-ಬುಡಕಟ್ಟು ಮೈತ್ರಿಯ ವಿಜಯ ಇದಾಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.

'ಮಹಿಳೆಯರ ಘನತೆ ಹಾಗೂ ಸುರಕ್ಷತೆಗೆ ಸಂದ ಗೆಲುವು. ಯುವಕ ಯುವತಿಯರ ಭವಿಷ್ಯದ ಗೆಲುವು, ರೈತರು, ಕಾರ್ಮಿಕರು, ಉದ್ಯಮಿಗಳು, ವ್ಯಾಪಾರಿಗಳ ಹೊಸ ಭರವಸೆಯ ಗೆಲುವು, ಸಮಾಜದ ಸಾಮರಸ್ಯ-ಪ್ರೀತಿಯ ಹಾಗೂ ಸಮಾನತೆಯ ಗೆಲುವಾಗಿದೆ' ಎಂದು ಹೇಳಿದ್ದಾರೆ.

'ಇದು ಸಂವಿಧಾನ ರಕ್ಷಕರ ಗೆಲುವು, ಪ್ರಜಾತಂತ್ರದ ಗೆಲುವು, ಬಡವರ ಗೆಲುವು, ಧನಾತ್ಮಕ ರಾಜಕೀಯದ ಗೆಲುವು, ಹೃದಯವಂತರ ಗೆಲುವು' ಎಂದು ಸಹ ಹೇಳಿದ್ದಾರೆ.

'ಜನರ ಶಕ್ತಿಗಿಂತ ಯಾವ ಶಕ್ತಿಯೂ ದೊಡ್ಡದಲ್ಲ ಎಂಬುದನ್ನು ಮತದಾರರು ಸಾಬೀತು ಮಾಡಿದ್ದಾರೆ. ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ಈಡೇರಿಸುತ್ತೇವೆ' ಎಂದು ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆದ್ದಿರುವ ಸಮಾಜವಾದಿ ಪಕ್ಷ (ಎಸ್‌ಪಿ), ಬಿಜೆಪಿ, ಕಾಂಗ್ರೆಸ್ ಬಳಿಕ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT