ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜುರಾಹೊ: ಎಸ್‌ಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತ

Published 5 ಏಪ್ರಿಲ್ 2024, 15:09 IST
Last Updated 5 ಏಪ್ರಿಲ್ 2024, 15:09 IST
ಅಕ್ಷರ ಗಾತ್ರ

ಪನ್ನಾ: ಮಧ್ಯಪ್ರದೇಶದ ಖಜುರಾಹೊ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಮೀರಾ ಯಾದವ್‌ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಶುಕ್ರವಾರ ತಿರಸ್ಕರಿಸಿದ್ದಾರೆ. 

‘ಇಂಡಿಯಾ’ ಕೂಟದ ಮೈತ್ರಿ ಒಪ್ಪಂದದಂತೆ ಕಾಂಗ್ರೆಸ್ ಈ ಸ್ಥಾನವನ್ನು ಎಸ್‌ಪಿಗೆ ಬಿಟ್ಟುಕೊಟ್ಟಿತ್ತು.

‘ಮೀರಾ ಅವರ ನಾಮಪತ್ರವನ್ನು ಚುನಾವಣಾಧಿಕಾರಿಯೂ ಆಗಿರುವ ಪನ್ನಾ ಜಿಲ್ಲಾಧಿಕಾರಿ ತಿರಸ್ಕರಿಸಿದ್ದಾರೆ. ಮೀರಾ ಅವರು ಬಿ ಫಾರಂಗೆ ಸಹಿ ಮಾಡಿರಲಿಲ್ಲ ಮತ್ತು 2023ರ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಲಗತ್ತಿಸಿರಲಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೀರಾ ಅವರ ಪತಿ ದೀಪ್ ನಾರಾಯಣ್ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಚುನಾವಣಾಧಿಕಾರಿಯ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. 

‘ಪರಿಶೀಲನೆಯ ನಂತರ ಗುರುವಾರ ನಾಮಪತ್ರವನ್ನು ಪರೀಕ್ಷಿಸಿದ್ದೆವು. ಅಭ್ಯರ್ಥಿ ಅನಕ್ಷರಸ್ಥರಾಗಿದ್ದರೂ, ನಾಮಪತ್ರದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬ ನಿಯಮವೇ ಇದೆ. ಗುರುವಾರ ನಾಮಪತ್ರದಲ್ಲಿ ಎಲ್ಲವೂ ಸರಿಯಿತ್ತು. ಶುಕ್ರವಾರ ಎರಡು ಲೋಪಗಳನ್ನು ತೋರಿಸುತ್ತಿದ್ದಾರೆ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ಕಣದಲ್ಲಿ 15 ಮಂದಿ ಇದ್ದು, ಪ‍ಕ್ಷದ ಹಿರಿಯರ ಸಲಹೆ ಪಡೆದು ಅವರಲ್ಲಿ ಯಾರಾದರೊಬ್ಬರನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದರು. ಬಿಜೆಪಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಹಾಲಿ ಸಂಸದ ವಿಷ್ಣು ದತ್ತ ಅವರು ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT