ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರಿದ ತಮಿಳ್‌ ಇಸೈ

Published 20 ಮಾರ್ಚ್ 2024, 14:23 IST
Last Updated 20 ಮಾರ್ಚ್ 2024, 14:23 IST
ಅಕ್ಷರ ಗಾತ್ರ

ಚೆನ್ನೈ: ತೆಲಂಗಾಣ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಇಸೈ ಸೌಂದರರಾಜನ್‌ ಮರಳಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಸಮ್ಮುಖದಲ್ಲಿ ತಮಿಳ್‌ ಇಸೈ ಬುಧವಾರ ಬಿಜೆಪಿ ಸೇರಿದರು.  

ಬಿಜೆಪಿ ಸೇರ್ಪಡೆ ಕುರಿತು ಡಿಎಂಕೆ ಮತ್ತು ಎಡಪಕ್ಷಗಳು ತಮಿಳ್‌ಇಸೈ ಅವರನ್ನು ಟೀಕಿಸಿವೆ. ಇದಕ್ಕೆ ತಿರುಗೇಟು ನೀಡಿದ ಅಣ್ಣಾಮಲೈ ‘ಉನ್ನತ ಹುದ್ದೆಯಲ್ಲಿರುವವರು ಅಧಿಕಾರವನ್ನು ತೊರೆದು ಸಾಮಾನ್ಯ ವ್ಯಕ್ತಿಯಾಗಿ ಸಾರ್ವಜನಿಕರಿಗಾಗಿ‌ ಮತ್ತೆ ಕೆಲಸ ಮಾಡಲು ಆರಂಭಿಸುವುದು ಸಾಧ್ಯವಿರುವುದು ಬಿಜೆಪಿಯಲ್ಲಿ ಮಾತ್ರ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT