ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಹೈದರಾಬಾದ್ ಮೇಯರ್ ವಿಜಯಲಕ್ಷ್ಮಿ ಕಾಂಗ್ರೆಸ್ ಸೇರ್ಪಡೆ

Published 30 ಮಾರ್ಚ್ 2024, 10:35 IST
Last Updated 30 ಮಾರ್ಚ್ 2024, 10:35 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣದಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಮೇಯರ್ ವಿಜಯಲಕ್ಷ್ಮಿ ಗಡ್ವಾಲ್ ಶನಿವಾರ ಕಾಂಗ್ರೆಸ್‌ ಸೇರಿದ್ದಾರೆ. 

ಮುಖ್ಯಮಂತ್ರಿ ರೇವಂತ್ ರೆಡ್ಡಿ, ತೆಲಂಗಾಣ ಉಸ್ತುವಾರಿ ದೀಪಾ ದಾಸ್ ಮುನ್ಸಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ ಮುಖಂಡರ ಸಮ್ಮುಖದಲ್ಲಿ ವಿಜಯಲಕ್ಷ್ಮಿ ಕಾಂಗ್ರೆಸ್‌ ಸೇರಿದರು.

ವಿಜಯಲಕ್ಷ್ಮಿ ಅವರ ತಂದೆ ಕೇಶವ್‌ ರಾವ್ ಅವರು ಕೂಡ ಕೆಲವು ದಿನಗಳಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ. ಸದ್ಯ ಅವರು ಬಿಆರ್‌ಎಸ್‌ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕೇಶವ್‌ ರಾವ್‌ ಅವರು ಬಿಆರ್‌ಎಸ್‌ ಪಕ್ಷ ಸೇರುವುದಕ್ಕೂ ಮುಂಚೆ ಕಾಂಗ್ರೆಸ್‌ ಪಕ್ಷದಲ್ಲಿದ್ದರು. 

85 ವರ್ಷದ ಕೇಶವ್‌ ರಾವ್‌ ಅವರು ಸುದ್ದಿಗಾರರ ಜೊತೆ ಮಾತನಾಡಿ ನಾನು 55 ವರ್ಷ ಕಾಂಗ್ರೆಸ್‌ ಪಕ್ಷಕ್ಕಾಗಿ ಕೆಲಸ ಮಾಡಿದ್ದೆ. ಕೆಲ ಕಾರಣಗಳಿಂದ ಬಿಆರ್‌ಎಸ್‌ ಸೇರಬೇಕಾಯಿತು. ಈಗ ಮತ್ತೆ ಕಾಂಗ್ರೆಸ್‌ ಸೇರುತ್ತೇನೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT