ಬರಸಾತ್/ ಬರೂಯಿಪುರ: ಮತ ಜಿಹಾದ್ ಮತ್ತು ಓಲೈಕೆ ರಾಜಕಾರಣಕ್ಕಾಗಿ ಟಿಎಂಸಿಯು ಒಬಿಸಿ ಯುವಜನತೆಯ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದರು.

‘ಹತ್ತು ವರ್ಷದ ಹಿಂದೆ ನಾನು ‘ನಾ ಖಾವೂಂಗಾ ನಾ ಖಾನೇದೂಂಗ’ ಎಂದಿದ್ದೆ. ಈಗ ಹೇಳುತ್ತಿದ್ದೇನೆ, ಜನರ ಹಣವನ್ನು ಲೂಟಿ ಮಾಡಿದವರು ಅದನ್ನು ಮರಳಿಸಬೇಕು’ ಎಂದು ತಿಳಿಸಿದರು.

ಪಶ್ಚಿಮ ಬಂಗಾಳದ ಬರಸಾತ್‌ನಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಮಮತಾ ಬ್ಯಾನರ್ಜಿ ಅವರ ಸರ್ಕಾರವು ಒಬಿಸಿಗಳಿಗೆ ವಿಶ್ವಾಸಘಾತುಕತನ ಎಸಗಿದೆ. ಅದನ್ನು ಬಹಿರಂಗಪಡಿಸಿದ ಕಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ಅವರು ಟೀಕಿಸಿದ್ದಾರೆ’ ಎಂದರು.

‘ಟಿಎಂಸಿಯು ಈಗ ತನಗೆ ಅನುಕೂಲಕರವಲ್ಲದ ತೀರ್ಪು ನೀಡಿದ್ದಕ್ಕಾಗಿ ನ್ಯಾಯಮೂರ್ತಿಗಳ ಮೇಲೆ ಗೂಂಡಾಗಳನ್ನು ಬಿಡುವುದೇ’ ಎಂದು ಪ್ರಶ್ನಿಸಿದರು.

‘ಟಿಎಂಸಿ ಸತ್ಯವನ್ನು ಸಹಿಸುವುದಿಲ್ಲ. ಅವರ ಪಕ್ಷದ ಅಪರಾಧಗಳನ್ನು ಬಯಲಿಗೆಳೆಯುವವರನ್ನು ಗುರಿ ಮಾಡಲಾಗುತ್ತದೆ. ಟಿಎಂಸಿ ಶಾಸಕ ಇತ್ತೀಚೆಗೆ ಹಿಂದೂಗಳನ್ನು ಭಾಗೀರಥಿ ನದಿಯಲ್ಲಿ ಮುಳುಗಿಸಲಾಗುವುದು ಎಂದಿದ್ದರು. ಅದನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದವರನ್ನು ಪಕ್ಷವು ಬಹಿರಂಗವಾಗಿ ಬೆದರಿಸುತ್ತಿದೆ’ ಎಂದು ಆರೋಪಿಸಿದರು.

ರಾಜ್ಯದ ಬರೂಯಿಪುರದಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು, ‘ಟಿಎಂಸಿಗೂ ಉತ್ತಮ ಆಡಳಿತಕ್ಕೂ ಸಂಬಂಧವಿಲ್ಲ. ನೀವು ಭೂತಗನ್ನಡಿ ಹಾಕಿ ಹುಡುಕಿದರೂ ಪಶ್ಚಿಮ ಬಂಗಾಳದಲ್ಲಿ ಉತ್ತಮ ಆಡಳಿತ ಕಾಣಲು ಸಾಧ್ಯವಿಲ್ಲ. ಅವರು ಕೇವಲ ತಮ್ಮ ಮತಬ್ಯಾಂಕ್‌ಗಾಗಿ ಮಾತ್ರ ಕೆಲಸ ಮಾಡುತ್ತಾರೆ. ರಾಜ್ಯದ ಯುವಜನರಿಗಾಗಿ ಅವರು ಏನೂ ಮಾಡುವುದಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.