ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು– ಗೆಲುವಿನ ಬೆಟ್ಟಿಂಗ್ ದಂಧೆ: ಶ್ರೀರಂಗಪಟ್ಟಣದಲ್ಲಿ ‘ಸೋಡಿ’, ಮಂಡ್ಯದಲ್ಲಿ ‘ಡಬಲ್‌’

Published 11 ಮೇ 2023, 19:31 IST
Last Updated 11 ಮೇ 2023, 19:31 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಬೆಟ್ಟಿಂಗ್‌ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ಆದರೆ ಈ ಬಗ್ಗೆ ಎಲ್ಲೆಡೆ ಗುಸುಗುಸು ಇದೆ. ಜಿಲ್ಲೆಯ ವಿವಿಧೆಡೆ ಸೋಡಿ ಹಾಗೂ ಡಬಲ್‌ (ಸಮಸಮ) ವ್ಯಾಪಕವಾಗಿ ನಡೆಯುತ್ತಿವೆ. ಸೋಡಿಯಲ್ಲಿ ಮೂರು ಪಟ್ಟು (₹ 5ಕ್ಕೆ ₹15), ಡಬಲ್‌ ಬೆಟ್ಟಿಂಗ್‌ನಲ್ಲಿ ಸಮಪಾಲು (₹ 5ಕ್ಕೆ 10) ವಾಪಸ್‌ ಬರುತ್ತದೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನಡುವೆ ಪೈಪೋಟಿ ಇದ್ದು ಸೋಡಿ ಕಟ್ಟಲು ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರದ ದುದ್ದ, ಶಿವಳ್ಳಿ, ಹೊಳಲು ಭಾಗದಲ್ಲಿ ಜೆಡಿಎಸ್‌ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಸೋಡಿ ಕಟ್ಟುತ್ತಿದ್ದಾರೆ.

ನಾಗಮಂಗಲ, ಮದ್ದೂರು ಕ್ಷೇತ್ರದಲ್ಲೂ ಸೋಡಿ ಜೋರಾಗಿ ನಡೆಯುತ್ತಿದೆ. ಮಂಡ್ಯ ಕ್ಷೇತ್ರದಲ್ಲಿ ಡಬಲ್‌ ಹೆಚ್ಚಾಗಿ ನಡೆಯುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಯ ಪರವಾಗಿ ಹೆಚ್ಚು ಹಣ ನೀಡುತ್ತಿದ್ದಾರೆ. 

ಹಳ್ಳಿಗಳಲ್ಲಿ ಮತಗಟ್ಟೆವಾರು ಬೆಟ್ಟಿಂಗ್‌ ನಡೆಯುತ್ತಿದ್ದು ಆಯಾ ಬೂತ್‌ನಲ್ಲಿ ಈ ಪಕ್ಷಕ್ಕೆ ಹೆಚ್ಚು ಲೀಡ್‌ ಬರುತ್ತದೆ ಎಂದು ಬೆಟ್ಟಿಂಗ್‌ ಕಟ್ಟತ್ತಿದ್ದಾರೆ. ಈ ಬೆಟ್ಟಿಂಗ್‌ ದಂಧೆ ಆಯಾ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ಮುಖ್ಯಮಂತ್ರಿಯಾಗುತ್ತಾರೆ, ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂಬ ಪರವಾಗಿಯೂ ಬೆಟ್ಟಿಂಗ್‌ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಬೆಟ್ಟಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಮಾಹಿತಿ ಸಿಕ್ಕರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು’ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT