ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಖರ್ಗೆ ಹೆಂಡರು, ಮಕ್ಕಳನ್ನು ಸಾಫ್ ಮಾಡ್ತೀನಿ' - ಮಣಿಕಂಠ ರಾಠೋಡ ಆಡಿಯೊದಲ್ಲಿ ಏನಿದೆ?

Published 6 ಮೇ 2023, 10:31 IST
Last Updated 6 ಮೇ 2023, 10:31 IST
ಅಕ್ಷರ ಗಾತ್ರ

ಕಲಬುರಗಿ: ‘ಖರ್ಗೆ ಹೆಂಡರು, ಮಕ್ಕಳನ್ನು ಸಾಫ್(ಮುಗಿಸುತ್ತೇನೆ) ಮಾಡುತ್ತೇನೆ’ ಎಂದು ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಜೆಪಿ ಮುಖಂಡ ಎನ್ನಲಾದ ವ್ಯಕ್ತಿಯ ಜತೆ ಫೋನ್ ಸಂಭಾಷಣೆ ಆಡಿಯೊ ಹರಿದಾಡಿದೆ.

ಆಡಿಯೊದಲ್ಲಿ ಏನಿದೆ?

ಬಿಜೆಪಿ ಮುಖಂಡ: ಮತ್ತೆ ಎಷ್ಟು ಕೇಸ್ ಇವೆ?

ಮಣಿಕಂಠ ರಾಠೋಡ: ಯಾವ ಮಗ ಅಂದನ್ಲೆ ಅವನಿಗೆ ಕೇಳಿ, ನಲವತ್ತು ನಾಲ್ಕು ಕೇಸ್ ಲಿಸ್ಟ್ ಕೊಡು ಅಂತ, ಮಣಿಕಂಠ ಕೇಳುತ್ತಿದ್ದಾನೆ ಅಂತ ಕೇಳು

ಬಿಜೆಪಿ ಮುಖಂಡ: ಖರ್ಗೆ ಕಡೆಯವರು ಮಾಡುತ್ತಾರೆ, ನಾವ್ಯಾರೂ ಮಾಡಲ್ಲ

ಮಣಿಕಂಠ ರಾಠೋಡ: ಖರ್ಗೆ ಕಡೆಯಿಂದ ಕೇಳು

ಬಿಜೆಪಿ ಮುಖಂಡ: ಅವರದ್ದು ಫೋನ್ ನಂಬರ್ ಕೊಡು, ನಾನು ನಿನ್ನ ಅಭಿಮಾನಿ, ಈ ರೀತಿ ಯಾಕೆ ಮಾತನಾಡುತ್ತೀರಾ ಅಂತ ಕೇಳುತ್ತೇನೆ

ಮಣಿಕಂಠ ರಾಠೋಡ: ನನ್ನ ಬಳಿ ಫೋನ್‌ ನಂಬರ್ ಇದ್ದರೆ, ಅವರ ಎಲ್ಲ ಹೆಂಡರು, ಮಕ್ಕಳನ್ನು ಸಾಫ್ ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಅವರ ನಂಬರ್ ಇಲ್ಲ.

ಬಿಜೆಪಿ ಮುಖಂಡ: ಯಾರ ಹೆಂಡರು, ಮಕ್ಕಳು?

ಮಣಿಕಂಠ: ನೀ ಯಾರದು ಹೆಸರು ತಗೊಂಡಿ ಈಗ?

ಬಿಜೆಪಿ ಮುಖಂಡ: ನಾನು ಖರ್ಗೆ ಅವರದ್ದು ಅಣ್ಣ

ಮಣಿಕಂಠ: ನನ್ನ ಬಳಿ ಫೋನ್ ನಂಬರ್ ಇದ್ದರೇ ಅವರ ಎಲ್ಲ ಹೆಂಡರು, ಮಕ್ಕಳ ಸಾಫ್ ಮಾಡುತ್ತೇನೆ, ಅದಕ್ಕೆ ನನ್ನ ಬಳಿ ಅವರ ನಂಬರ್ ಇಲ್ಲ.

ಈ ಸಂಭಾಷಣೆಯ ಆಡಿಯೊ ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT