ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಬಳಿ ಆಶ್ರಯ ಮನೆ

₹8 ಲಕ್ಷದ ಸ್ಥಿರಾಸ್ತಿ, ₹12 ಲಕ್ಷದ ಚಿನ್ನಾಭರಣ
Last Updated 20 ಏಪ್ರಿಲ್ 2023, 23:15 IST
ಅಕ್ಷರ ಗಾತ್ರ

ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರಿ ಭಾಗೀರಥಿ (48) ಅವರು ಅವಿವಾಹಿತರು. ಯಾವುದೇ ಆದಾಯ ಇಲ್ಲ. ಕೃಷಿ ಕೂಲಿ ಮಾಡಿಕೊಂಡಿದ್ದಾರೆ. ಆಶ್ರಯ ಮನೆಯಲ್ಲಿ ವಾಸ.

ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಭಾಗೀರಥಿ ಮತ್ತು ಅವರ ಅವಲಂಬಿತರಾದ ತಂಗಿ ಜಾನಕಿ ಇಬ್ಬರ ಬಳಿ ₹60 ಸಾವಿರ ನಗದು, ₹1.24 ಲಕ್ಷ ಬ್ಯಾಂಕ್‌ನಲ್ಲಿರುವ ಹಣ ಇದೆ. ಭಾಗೀರಥಿ ಬಳಿ ₹6.42 ಲಕ್ಷ ಮೌಲ್ಯದ ಹಾಗೂ ತಂಗಿ ಬಳಿ ₹3.99 ಲಕ್ಷ ಮೌಲ್ಯದ ಚಿನ್ನಾಭರಣ ಇವೆ. ಇಬ್ಬರ ಚರಾಸ್ತಿ ಮೌಲ್ಯ ₹12.25 ಲಕ್ಷ.

ಸುಳ್ಯ ತಾಲ್ಲೂಕು ಮುರುಳ್ಯ ಗ್ರಾಮದಲ್ಲಿ ಜಂಟಿ ಹೆಸರಿನಲ್ಲಿ 0.60 ಎಕರೆ ಕೃಷಿ ಜಮೀನು ಇದ್ದು, ಇದರ ಮೌಲ್ಯ ₹3 ಲಕ್ಷ. ಮುರುಳ್ಯ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಹಂಚಿಕೆಯಾದ ಆಶ್ರಯ ಮನೆ ವಾಸ. ಅದರ ಮೌಲ್ಯ ಈಗ ₹5 ಲಕ್ಷ. ಇಬ್ಬರೂ ಸೇರಿ ಒಟ್ಟಾರೆ ₹8 ಲಕ್ಷದ ಸ್ಥಿರಾಸ್ತಿ ಹೊಂದಿದ್ದಾರೆ.

ಮರುಳ್ಯ–ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹1.50 ಲಕ್ಷ ಕೃಷಿ ಸಾಲ ಹಾಗೂ ₹40 ಸಾವಿರ ಮಧ್ಯಮಾವಧಿ ಕೃಷಿ ಸಾಲ, ₹37,500 ವೈಯಕ್ತಿಕ ಸಾಲ ಹೀಗೆ ಒಟ್ಟಾರೆ ₹2.25 ಲಕ್ಷ ಸಾಲ ಇದೆ.

ಪ್ರಥಮ ಪಿಯು ವ್ಯಾಸಂಗ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT