ಜೆಡಿಎಸ್ ಶಾಲು ಹಾಕಿಕೊಂಡಿದ್ದು ಡಬಲ್ ಜವಾಬ್ದಾರಿ
ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಗದಗ ಜಿಲ್ಲಾ ಜೆಡಿಎಸ್ ಕಚೇರಿಗೆ ಬರುತ್ತಿದ್ದಂತೆ ಮುಖಂಡರು ಅವರಿಗೆ ಜೆಡಿಎಸ್ ಶಾಲು ಹಾಕಿ ಬರಮಾಡಿಕೊಂಡರು. ‘ನಿಮ್ಮ ಹೆಗಲ ಮೇಲೆ ಜೆಡಿಎಸ್ ಶಾಲು ಇದೆ ಹೇಗನ್ನಿಸುತ್ತಿದೆ’ ಎಂಬ ಮಾಧ್ಯಮದವರ ಪ್ರಶ್ನೆಗೆ ನಸುನಕ್ಕ ಬೊಮ್ಮಾಯಿ ‘ಹಂಗೇನಿಲ್ಲ... ಮೈತ್ರಿ ಇದೆ. ಇದು ಡಬಲ್ ಜವಾಬ್ದಾರಿ’ ಎಂದು ಹೇಳಿದರು.