ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್ ಕೋಟೆ ಬೇಧಿಸುವುದು ಸುಲಭವಲ್ಲ: ಸುಧಾಕರ್

ದಾಸನಪುರ ಹೋಬಳಿ ಚುನಾವಣಾ ಕಾರ್ಯತಂತ್ರ ಸಭೆ
Published 20 ಏಪ್ರಿಲ್ 2024, 16:07 IST
Last Updated 20 ಏಪ್ರಿಲ್ 2024, 16:07 IST
ಅಕ್ಷರ ಗಾತ್ರ

ಪೀಣ್ಯದಾಸರಹಳ್ಳಿ: 'ಶಾಸಕ ಎಸ್‌.ಆರ್‌.ವಿಶ್ವನಾಥ್ ಅವರು ಯಲಹಂಕ ಕ್ಷೇತ್ರದಲ್ಲಿ ಕಟ್ಟಿರುವ ಬಿಜೆಪಿ ಕೋಟೆ ಭೇದಿಸುವುದು ಅಷ್ಟು ಸುಲಭವಲ್ಲ. ಅವರ ಮೇಲೆ ನನಗೆ ವಿಶ್ವಾಸವಿದೆ' ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ಮಾದಾವರದ ಬಿಜಿಪಿ ಹಿರಿಯ ಮುಖಂಡ ಗೋವಿಂದಪ್ಪ ಮನೆಯಲ್ಲಿ ದಾಸನಪುರ ಹೋಬಳಿಯ ಚುನಾವಣಾ ಕಾರ್ಯತಂತ್ರ ಸಭೆ ಹಾಗೂ ಉಪಾಹಾರ ಕೂಟದಲ್ಲಿ ಅವರು ಮಾತನಾಡಿದರು.

'ವಿಶ್ವನಾಥ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವೆಲ್ಲಾ ಬರೀ ಕಾಂಗ್ರೆಸ್ ಪಕ್ಷದ ಊಹಾಪೋಹಗಳಷ್ಟೇ. ನಾವು ಒಗ್ಗಟ್ಟಾಗಿದ್ದೇವೆ' ಎಂದರು.

ಶಾಸಕ ಎಸ್.ಆರ್ ವಿಶ್ವನಾಥ್ ಮಾತನಾಡಿ, ‘ಯುಲಹಂಕ ವಿಧಾನಸಭಾ ಕ್ಷೇತ್ರd ಮತದಾರರು ಗೆಲುವಿನ ರೂವಾರಿಗಳಾಗಬೇಕು. ಈ ದೃಷ್ಟಿಯಿಂದ ಉಳಿದಿರುವ ದಿನಗಳಲ್ಲಿ ಮನೆ ಮನೆಗೂ ಹೋಗಿ ಪ್ರಚಾರ ಮಾಡಲು ತೀರ್ಮಾನಿಸಿದ್ದೇವೆ’ ಎಂದರು.

'ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿಯವರು ಹಾಗೂ ಯಲಹಂಕ ನಗರಕ್ಕೆ ಗೃಹಸಚಿವ ಅಮಿತ್ ಶಾ ಅವರ ಕಾರ್ಯಕ್ರಮವಿದೆ. ಎರಡೂ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಗುರಿ ಇದೆ‘ ಎಂದರು.

ಮಾಜಿ ಶಾಸಕರಾದ ಲಕ್ಷ್ಮೀನಾರಾಯಣ, ಶ್ರೀನಿವಾಸ್ ಮೂರ್ತಿ, ಬಿಜೆಪಿ ಮುಖಂಡರಾದ ಗೋವಿಂದಪ್ಪ, ಲಲಿತಮ್ಮ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈ. ಕೃಷ್ಣಪ್ಪ, ಮಂಡಲ ಅಧ್ಯಕ್ಷ ಹನುಮಯ್ಯ, ಬೆಂಗಳೂರು ಮಹಾನಗರ ಸಹ ಪ್ರಭಾರಿ ಎಸ್.ಎನ್. ರಾಜಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್, ಸಂಪತ್ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT