ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿಷಸರ್ಪವಲ್ಲ, ನೀಲಕಂಠ: ನಿರಾಣಿ

Published 29 ಏಪ್ರಿಲ್ 2023, 15:04 IST
Last Updated 29 ಏಪ್ರಿಲ್ 2023, 15:04 IST
ಅಕ್ಷರ ಗಾತ್ರ

ಬೀಳಗಿ: ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಕೀಳು ಸಂಸ್ಕೃತಿ ಪ್ರದರ್ಶಿಸಿದೆ. ಮೋದಿ ಅವರು ಭಯೋತ್ಪಾದನೆಯ ಅಪತ್ತಿನಿಂದ ದೇಶವನ್ನು ಪಾರು ಮಾಡಿದ ನೀಲಕಂಠ ಎಂದು ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

ಹಲಕುರ್ಕಿ, ಹಣಮನೇರಿ, ಚಿಚಂಚಲಕಟ್ಟಿ ಗ್ರಾಮಗಳಲ್ಲಿ ನಡೆದ ರೊಡ್‍ಶೋ ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ವಯಸ್ಸಿಗೆ ತಕ್ಕನಾಗಿ ಮಾತನಾಡಬೇಕು. ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡಿರೆ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಇಡೀ ದೇಶವೇ ಸಹಿಸಲ್ಲ ಎಂದು ಟೀಕಿಸಿದರು.

ಬಾದಾಮಿ ತಾಲ್ಲೂಕಿನ ಹಳ್ಳಿಗಳಿಗೆ ನೀರು ನೀಡಲು ಹೆರಕಲ್ ಬ್ಯಾರೇಜ್ ನಿರ್ಮಿಸಲಾಗಿದೆ. ಬ್ಯಾರೇಜ್ ಮೂಲಕ 9 ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, 18 ತಿಂಗಳಲ್ಲಿ ಬೀಳಗಿ ಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲ್ಲೂಕಿನ ಎಲ್ಲ ಗ್ರಾಮಗಳು ಸಂಪೂರ್ಣ ನೀರಾವರಿಯಾಗಲಿವೆ ಎಂದರು.

ಹೂವಪ್ಪ ರಾಠೋಡ್, ಪ್ರಕಾಶ ನಾಯ್ಕರ, ಸಂಗಯ್ಯ ಸರಗಣಾಚಾರಿ, ವೆಂಕನಗೌಡ ಗೌಡರ, ಹಣಮಂತಗೌಡ ಗೌಡರ, ಮಾಗುಂಡೆಪ್ಪ ಕಟಗೇರಿ, ಡಾ.ರವಿ ಅಡಗಲ್, ಪರಪ್ಪ ಹೂಲಗೇರಿ, ಅಯ್ಯಪ್ಪ ತಾಳಿ, ಪರಪ್ಪ ಬಂಡಿ, ಪಾರಪ್ಪ ಹೂಲಗೇರಿ, ಶಾಂತಪ್ಪ ಹೂಲಗೇರಿ, ಕೆಲೂಡೆಪ್ಪ ಹೂಲಗೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT