ಧಾರವಾಡ: ಸೋಮವಾರವಷ್ಟೇ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಚುನಾವಣೆ ಸಂದರ್ಭದಲ್ಲಿ ತಮ್ಮ ಬಗ್ಗೆ ‘ಮೃದು ಧೋರಣೆ’ ತಾಳುವಂತೆ ಮಾಧ್ಯಮದವರನ್ನು ಓಲೈಸಲು ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಉಡುಗೊರೆಗಳನ್ನು ತಲುಪಿಸಿದರು.

ಸಂಜೆ ಧಾರವಾಡದ ವಿವಿಧ ಮಾಧ್ಯಮ ಸಂಸ್ಥೆಗಳ ಕಚೇರಿಗೆ ತೆರಳಿದ ಪಕ್ಷದ ಮುಖಂಡರಿಬ್ಬರು ಸುಮಾರು
ರೂ. 2,000 ಮೌಲ್ಯದ ಒಂದು ‘ಟೈಟನ್’ ಕಂಪೆನಿಯ ವಾಚ್ ಹಾಗೂ ಅಂದಾಜು ರೂ. 2,000 ಬೆಲೆ ಬಾಳುವ ‘ಸಿಯಾರಾಮ್ಸ್ ಮಿನಿಯೇಚರ್’ ಕಂಪೆನಿಯ ಶರ್ಟ್ ಹಾಗೂ ಪ್ಯಾಂಟ್ ಪೀಸ್ ಇರುವ ಬ್ಯಾಗ್ ಕೊಟ್ಟರು.

‘ಪ್ರಜಾವಾಣಿ’ ಪ್ರತಿನಿಧಿ ಈ ಉಡುಗೊರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ, ‘ಧಾರವಾಡದ ಎಲ್ಲ ಪತ್ರಕರ್ತರಿಗೂ ಈ ಗಿಫ್ಟ್ ತಲುಪಿಸುವಂತೆ ಜೋಶಿ ಸಾಹೇಬರು ಹೇಳಿದ್ದಾರೆ. ನೀವು ತೆಗೆದುಕೊಳ್ಳದಿದ್ದರೆ ಅವರು ನನಗೆ ಬಯ್ಯುತ್ತಾರೆ’ ಎಂದು ಹೇಳುತ್ತಾ ಕೊಡಲು ಮುಂದಾದರು.

ಆದರೆ ‘ಪ್ರಜಾವಾಣಿ’ ಪ್ರತಿನಿಧಿ ಮನೋಜ್‌ಕುಮಾರ್ ಗುದ್ದಿ ಅವುಗಳನ್ನು ಪಡೆಯದೇ ವಾಪಸ್ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.