ಬೆಂಗಳೂರು: ಸಾರ್ವಜನಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಲು ಇದೇ 12 ರವರೆಗೆ ಅವಕಾಶ ಇದೆ.

ಇದಕ್ಕಾಗಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಅಲ್ಲದೆ, ಇದೇ 31 ರೊಳಗೆ ಮತದಾರರ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳು ಇದ್ದರೆ ಆಯೋಗಕ್ಕೆ ಸಲ್ಲಿಸಬಹುದು. ಡೇಟಾಬೇಸ್ ಅಪ್‌ಡೇಟ್ ಮಾಡಲು ಫೆಬ್ರುವರಿ 15 ಕೊನೆಯ ದಿನ. ಮತದಾರರ ಅಂತಿಮ ಪಟ್ಟಿ ಫೆ.20 ರಂದು ಪ್ರಕಟಗೊಳ್ಳಲಿದೆ.

ಹೊಸ ಮತದಾರರು ಯಾರು

* 2018 ರ ಜನವರಿ 1 ಅಥವಾ ಅದಕ್ಕೂ ಮೊದಲೇ 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಬಹುದು.

* ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ನೋಂದಾಯಿಸಬಹುದು.

ಯಾರನ್ನು ಸಂಪರ್ಕಿಸಬೇಕು

ವಾಸವಿರುವ ಪ್ರದೇಶ ಅಥವಾ ಬಡಾವಣೆಯ ಮತಗಟ್ಟೆ ಹಂತದ ಅಧಿಕಾರಿಗಳು, ತಾಲ್ಲೂಕು ಕಚೇರಿ, ನಗರ ಸಭೆ ವಾರ್ಡ್ ಕಚೇರಿ, ಬಿಬಿಎಂಪಿ ಕಂದಾಯ ಅಧಿಕಾರಿಗಳು.

ಅರ್ಜಿ ಸಲ್ಲಿಸುವುದು ಹೇಗೆ?

*ಅರ್ಜಿಯನ್ನು ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಎ) ಮತ್ತು ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಎ)ಗಳಿಂದ ಪಡೆಯಬಹುದು.

*ಭರ್ತಿ ಮಾಡಿದ ಅರ್ಜಿಗಳನ್ನು ವಯೋಮಿತಿ, ವಿಳಾಸ ಹಾಗೂ ಭಾವಚಿತ್ರವನ್ನು ಅಗತ್ಯ ದಾಖಲಾತಿ (ಆಧಾರ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ) ಜೊತೆಗೆ ಇಆರ್‌ಓ ಅಥವಾ ಬಿಎಲ್‌ಓ ಅಧಿಕಾರಿಗಳಿಗೆ ನೀಡಬೇಕು.

*ಅರ್ಜಿಗಳನ್ನು ವೆಬ್‌ಸೈಟ್: www.eci.nic.in ಅಥವಾ www.ceokarnataka.kar.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. www.nvsp.in ಅಥವಾ www.voterreg.kar.nic.in ಮೂಲಕ ಅರ್ಜಿ ಅಪ್‌ಲೋಡ್ ಮಾಡಬಹುದು.

ಯಾವ ಅರ್ಜಿ ನಮೂನೆ ಯಾವುದಕ್ಕೆ

* ಫಾರಂ –6

ಹೊಸದಾಗಿ ನೋಂದಾಯಿಸಲು ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಳಾಸ ಬದಲಾಯಿಸಲು.

* ಫಾರಂ–6 ಎ

ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರಿಗಾಗಿ.

* ಫಾರಂ–7

ಮೃತರ ಹೆಸರನ್ನು ತೆಗೆದುಹಾಕಲು ಅಥವಾ ಅನರ್ಹರು ಮತದಾರರ ಪಟ್ಟಿಯಲ್ಲಿದ್ದರೆ ಆಕ್ಷೇಪ ಸಲ್ಲಿಸಲು.

* ಫಾರಂ–8

ಮತದಾರರ ಪಟ್ಟಿಯಲ್ಲಿನ ನಮೂನೆಯಲ್ಲಿ ಬದಲಾವಣೆ ಅಥವಾ ತಿದ್ದುಪಡಿಗಾಗಿ.

*ಫಾರಂ–8 ಎ

ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ವಿಳಾಸ ಬದಲಾವಣೆಗೆ

* ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೆಬ್‌ಸೈಟ್‌ಗೆ ಭೇಟಿ ನೀಡಿ– www.ceokarnataka.kar.nic.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.