ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಚಾರದ ಕಹಳೆ ಊದಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ 4ಕ್ಕೆ ನಗರಕ್ಕೆ ಆಗಮಿಸಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ಕಾಲ ನಡೆದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಇಲ್ಲಿನ ಅರಮನೆ ಮೈದಾನದಲ್ಲಿ ಆರಂಭವಾಗಿದೆ.

ಸಮಾರಂಭದಲ್ಲಿರುವ ಪ್ರಧಾನಿ ಹಾಗೂ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರಿಗೆ ಸ್ವಾಗತ ಕೋರಿದ ಸಂಸದ ಅನಂತಕುಮಾರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಉಲ್ಟಾ ಪಲ್ಟಾ ಅಲಯನ್ಸ್ ರಚನೆಯಾಗಿದೆ. ಮೋದಿ ನೇತೃತ್ವದಲ್ಲಿ ದೇಶಕ್ಕಾಗಿ ತನ್ನನ್ನು ಸಮರ್ಪಣೆ ಮಾಡಿದ ಕರ್ಮಯೋಗಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದರು.

ಐಷರಾಮಿ ಜೀವಿ ರಾಹುಲ್ ಗಾಂಧಿ. ಗಾಂಧಿ, ರಾಹುಲ್ ಮನೆತನ ಬೇಡ. ದೇಶಕ್ಕಾಗಿ ಸರ್ವವನ್ನೂ ಸಮರ್ಪಣೆ ಮಾಡಿದ ಮೋದಿ ಬೇಕು ಎಂದು ದೇಶ ಆರಿಸಿಕೊಂಡಿದೆ. ಒಬಾಮ ಕೇರ್ ಮೀರಿಸಿದ ನಮೋ ಕೇರ್ ಕೊಡುಗೆಯನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೊಟ್ಟಿದೆ ಎಂದು ಹೇಳಿದರು.

ಕರ್ನಾಟಕದ ಆರೂವರೆ ಕೋಟಿ ಜನರ ಬಗ್ಗೆ ದೆಹಲಿಯಲ್ಲಿ ಕುಳಿದು ಅಭಿವೃದ್ಧಿ ಕನಸು ಕಾಣುವ ನಾಯಕ ಮೋದಿ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮುಂದಿನ ಮುಖ್ಯಮಂತ್ರಿಯಾಗಲಿರುವ ಬಿ.ಎಸ್. ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆ ಪೈರೈಸಿದ್ದಾರೆ. ರೈತರು ಸೇರಿದಂತೆ ನಾಡಿನ ಜನರ ಪರ ನಿಂತ ನಾಯಕ ಯಡಿಯೂರಪ್ಪ ಎಂದು ಬಣ್ಣಿಸಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.