ಹೊಸಪೇಟೆ (ವಿಜಯನಗರ): ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪ್ರವೇಶಕ್ಕಾಗಿ ಈಚೆಗೆ ಪರೀಕ್ಷೆ ಬರೆದಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ಪಿಎಚ್‍ಡಿ ಮಾಡಲು ಬಯಸಿರುವ ಪವಿತ್ರಾ ಲೋಕೇಶ್ ಅವರು ಎರಡು ದಿನದ ಹಿಂದೆ ಪತಿ ನರೇಶ್ ಕೃಷ್ಣ ಜೊತೆಗೆ ನಗರಕ್ಕೆ ಬಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಬರೆದರು.
ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಮಿಂಚಿದ್ದ ನಟಿ ಪವಿತ್ರಾ ಲೋಕೇಶ್ ಅವರು ತೆಲುಗಿನಲ್ಲಿಯೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.